ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಬೆಂಗಳೂರು ಆರ್ಟ್ಸ್ ಅಂಡ್ ಕ್ರಾಫ್ಟ್ ಮೇಳಕ್ಕೆ ನಟಿ ವೈಷ್ಣವಿ ಮತ್ತು ನಿಧಿ ರಾವ್ ಚಾಲನೆ ನೀಡಿದರು.
ಈ ಕರಕುಶಲ ವಸ್ತುಗಳ ಪ್ರದರ್ಶನದ ಕುರಿತು ಮೆಚ್ಚುಗೆಯ ಮಾತನಾಡಿದ ನಟಿ ವೈಷ್ಣವಿ “ಇಲ್ಲಿನ ಎಲ್ಲಾ ವಸ್ತುಗಳು ತುಂಬಾನೇ ಚೆನ್ನಾಗಿದೆ. ಯಾವುದನ್ನು ತೆಗೆದುಕೊಳ್ಳಲಿ, ಯಾವುದನ್ನು ಬಿಡಲಿ ಎಂದೇ ತಿಳಿಯುತ್ತಿಲ್ಲ. ವಸ್ತುಗಳು ಕರಕುಶಲ ಕಲಾವಿದರಿಂದ ನೇರವಾಗಿ ಗ್ರಾಹಕರಿಗೆ ಸಿಗಲಿವೆ. ಇಲ್ಲಿಗೆ ಭೇಟಿ ನೀಡಿದರೆ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಈ ಪ್ರದರ್ಶನ ಕೂಡ ತುಂಬಾನೇ ಚೆನ್ನಾಗಿದೆ” ಎಂದು ತಿಳಿಸಿದರು.
ನಟಿ ನಿಧಿ ರಾವ್ ಮಾತನಾಡುತ್ತಾ, “ನನಗೆ ಆಭರಣ ಹಾಗೂ ಪೈಟಿಂಗ್ಸ್ ಅಂದರೆ ತುಂಬಾನೇ ಇಷ್ಟ. ಹಾಗಾಗಿ ಇಲ್ಲಿ ನಾನು ಅದನ್ನು ತೆಗೆದುಕೊಳ್ಳುತ್ತೇನೆ. ಇದು ಕೇವಲ ಆರ್ಟ್ ಅಂಡ್ ಕ್ರಾಫ್ಟ್ ಮೇಳವೆಲ್ಲ. ಇದರಲ್ಲಿ ನಮ್ಮ ಭಾವನೆಗಳು ಮಿಳಿತಗೊಂಡಿವೆ. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಇದು ನಮಗೆ ಸಹಾಯ ಮಾಡುತ್ತದೆ. ಇಲ್ಲಿ ಎಲ್ಲಾ ಬಗೆಯ ವಸ್ತುಗಳು ಇವೆ. ಇವುಗಳನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ” ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.
ಇಂದಿನಿಂದ 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕಲಾ ಪ್ರಿಯರಿಗೆ ವೈವಿಧ್ಯಮಯ ವಸ್ತುಗಳನ್ನು ಕಣ್ತುಂಬಿಕೊಳ್ಳಲು ಹಾಗೇ ಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಕರಕುಶಲ ಕಲಾವಿದರು ತಯಾರಿಸಿದ ನಾನಾ ಬಗೆಯ ಉತ್ಪನ್ನಗಳು ಕಣ್ಣಿಗೆ ಮುದ ನೀಡುವುದರ ಜೊತೆಗೆ ಒಂದೇ ಸೂರಿನಡಿ ನಿಮಗೆ ಸಿಗಲಿವೆ. ಸೀರೆಯಿಂದ ಹಿಡಿದು, ನಾನಾ ಬಗೆಯ ಪೈಟಿಂಗ್ಸ್, ಆಭರಣ ಇಲ್ಲಿ ಸಿಗಲಿವೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ