ಹೊಂಗೆ: ಆಡುಭಾಷೆಯಲ್ಲಿ ಹೊಳೆ ಹುಣಗಲು ಅಥವಾ ಹೊನೆ ಹುನುಗಲು ಅಂತ ಕರೆಯುವ ಹೊಂಗೆ ಅಥವಾ ಕರಂಜ ಇದರ ಎಲೆ, ಹೂವು, ಕಾಯಿ, ಕಾಂಡ ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಮೆಡಿಸಿನ್ ಗೆ ಉಪಯುಕ್ತ. ದನಕರುಗಳ ಹಟ್ಟಿಯಲ್ಲಿ ಉಣುಗು (ಉಣ್ಣೆ) ಅತಿಯಾದರೆ ಇದರ ಎಲೆಗಳನ್ನು ಹಾಸಿ ದನಕರುಗಳನ್ನು ಕಟ್ಟಿದರೆ ಉಣುಗು ಬಿಟ್ಟು ಹೋಗುತ್ತದೆ. ಇದು ಮನುಷ್ಯನ ಜೀವನಕ್ಕೆ ಉಪಯೋಗ ನೋಡೋಣ.
1) ಕೋಮಲ ಎಲೆಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಮೂಲವ್ಯಾಧಿ ಯಲ್ಲಿ ಮಲ ವಿಸರ್ಜನೆ ಸುಲಭ ಮಾಡುತ್ತದೆ.
2) ಎಳೆಯ ಎಲೆಯ ರಸವನ್ನು ಸ್ವಲ್ಪ ಸೈಂಧವ ಲವಣ ಸೇರಿಸಿ ಸೇವಿಸಿ ವಾಂತಿ ನಿಲ್ಲುತ್ತದೆ.
3) ಎಲೆಯ ರಸ, ಲಕ್ಕಿಸೊಪ್ಪಿನ ರಸ ಮತ್ತು ಕಹಿಬೇವಿನ ರಸ ಸೇರಿಸಿ ಹತ್ತಿಯಿಂದ ಚರ್ಮ ರೋಗ ದ ಮೇಲೆ ಹಚ್ಚಿದರೆ ಕೆಟ್ಟ ಹುಣ್ಣು ಗುಣವಾಗುತ್ತದೆ.
4) ಬೀಜದ ತೈಲವನ್ನು ಗಂಧಕ, ಕರ್ಪೂರ, ನಿಂಬೆರಸ ಸೇರಿಸಿ ಹಚ್ಚಿದರೆ ತುರಿಕೆ ಯುಕ್ತ ಚರ್ಮ ರೋಗಗಳು ಗುಣವಾಗುತ್ತದೆ.
5) ಕೋಮಲ ಎಲೆಗಳನ್ನು ಹರಳೆಣ್ಣೆ ಯಲ್ಲಿ ಹುರಿದು ಸೇವಿಸಿದರೆ ವಾತಶೂಲೆ ಗುಣವಾಗುತ್ತದೆ.
6) ಎಲೆರಸ ಕ್ಕೆ ಕಾಳುಮೆಣಸು ಸೇರಿಸಿ ದಿನಕ್ಕೆ ಮೂರು ನಾಲ್ಕು ಬಾರಿ ಸೇವಿಸಿ ದರೆ ಕೆಮ್ಮು ಗುಣವಾಗುತ್ತದೆ.
7) ಬೀಜದ ಪುಡಿಯನ್ನೂ ಜೇನು ಅಥವಾ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸದರೆ ಊರ್ದ್ವ ಪಿತ್ತ ಗುಣವಾಗುತ್ತದೆ.
8) ಹೂವಿನ ರಸಕ್ಕೆ ಆಲೆಮನೆ ಬೆಲ್ಲ ಸೇರಿಸಿ ಸೋಸಿ ಅರೆತಲೆ ಶೂಲೆಗೆ ವಿರುಧ್ಧ ಮೂಗಿನಲ್ಲಿ ಹಾಕುವುದರಿಂದ ಗುಣವಾಗುತ್ತದೆ.
9) ಬೀಜ ದಷ್ಟೇ ಎಳ್ಳು, ಸಾಸಿವೆ ಸೇರಿಸಿ ನುಣ್ಣಗೆ ಅರೆದು ಪೇಸ್ಟ್ ಮಾಡಿ ಕುರುವಿಗೆ ಹಚ್ಚಿದರೆ ಒಡೆದು ಬೀಜ ಹೊರಬಂದು ಕುರು ಗುಣವಾಗುತ್ತದೆ.
10) ಎರಡು ಬೀಜ, ಉಪ್ಪು, ಇಂಗು, ಶುಂಠಿ ಎಲ್ಲಾ ಸೇರಿಸಿ ಕಾಯಿಸಿ ಆರಿಸಿದ ನೀರಿನಲ್ಲಿ ದಿನಕ್ಕೆ ಎರಡು ಬಾರಿ ಕುಡಿದರೆ ವಾತ ಶೂಲೆ ಗುಣವಾಗುತ್ತದೆ.
11) ಇದರ ಬೀಜ, ಅಳಲೆಕಾಯಿ, ಅರಿಶಿನ, ಸಾಸಿವೆ ಸೇರಿಸಿ ಹಚ್ಚಿದರೆ ಕುಷ್ಠ ಗುಣವಾಗುತ್ತದೆ.
12) ಬೀಜ, ಪಟಿಗಾರದ ಅರಳು ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ನಾಲ್ಕು ಬಾರಿ ಸೇವಿಸಿ ದರೆಎಪ್ಪತ್ತು ದಿನದ ಕೆಮ್ಮು ಗುಣವಾಗುತ್ತದೆ.
13) ಹೂವು ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಇಂದ್ರ ಲುಪ್ತ ಗುಣವಾಗುತ್ತದೆ.
14) ಹಸಿ ಬೀಜ ವನ್ನು ತೈದು ಕಾಲಿಗೆ ಹಚ್ಚಿದರೆ ಹಿಮ್ಮಡಿ ಒಡಕು ಗುಣವಾಗುತ್ತದೆ.
15) ಎಲೆಗಳನ್ನು ಎಳ್ಳೆಣ್ಣೆ ಸೇರಿಸಿ ಕುದಿಸಿ ಹಚ್ಚಿದರೆ ಮಂಡಿನೋವಿಗೆ ಉತ್ತಮ.
16) ತಲೆತಲಾಂತರದಿಂದ ನಮ್ಮ ಮನೆಯಲ್ಲಿ ಕೊಡುವ ಕೆಂಪಿನ ಕಜ್ಜಿ ಮೆಡಿಸಿನ್ ಮಾಡಲು ಬೇಕಾಗುವ ಮೂಲಿಕೆಗಳಲ್ಲಿ ಇದೂ ಒಂದು. ಇದು ಯಾವ ಆಲೊಪತಿ ಮೆಡಿಸಿನ್ ನಿಂದ ಗುಣವಾಗದ ಈ ಮಕ್ಕಳ ಕಾಯಿಲೆ ಇದರಿಂದ ಗುಣವಾಗುತ್ತದೆ.
-ಸುಮನಾ ಮಳಲಗದ್ದೆ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ