ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಯೋಗ ಸಪ್ತಾಹದ ಸಮಾರೋಪ ಕಾರ್ಯಕ್ರಮ ಮೈತ್ರೇಯಿ ಬಾಲಕಿಯರ ವಸತಿ ನಿಲಯದಲ್ಲಿ ನಡೆಯಿತು. ಕಾಲೇಜಿನ ಉಪ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸಾ ವಿದ್ಯಾಲಯ ಇದರ ಯೋಗವಿಜ್ಞಾನ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು.
ಯೋಗ ತರಬೇತಿ ನಡೆಸಿದ ಡಾ. ವಿಶಾಖಾ ಭಂಡಾರ್ಕರ್ ಹಾಗೂ ಪ್ರತೀಕ್ಷಾ ಭಟ್, ವಸತಿ ನಿಲಯದ ಪ್ರಧಾನ ಪಾಲಕರಾದ ಲಲಿತಾ, ರಾಷ್ಟ್ರೀಯ ಸೇವಾ ಯೋಜನೆಯ ಸಹ ಯೋಜನಾಧಿಕಾರಿ ಚೇತನಾ ಅವರು ಉಪಸ್ಥಿತರಿದ್ದರು.
ಅಂಕಿತಾ ಆರ್ ಹಾಗೂ ಅಕ್ಷತಾ ಅಭಿಪ್ರಾಯ ಮಂಡಿಸಿದರು. ಅಂಕಿತಾ ಸ್ವಾಗತಿಸಿ, ವರ್ಧಿನೀ ಪರಿಚಯ ಮಾಡಿದರು. ಪ್ರಣಮ್ಯಾ ನಿರೂಪಿಸಿ, ಅರುಂಧತಿ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ