ಹಿಂದು ಜಾಗರಣ ವೇದಿಕೆಯಿಂದ ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ

Upayuktha
0

ಮಡಿಕೇರಿ: 1947 ರ ಆಗಸ್ಟ್ 14 ರ ರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಸ್ವಾರ್ಥ ರಾಜಕೀಯಕ್ಕಾಗಿ ಮತೀಯ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ ಸತ್ಯ ಕಹಿ ಘಟನೆಯನ್ನು ಇಂದಿನ ಸಮಾಜಕ್ಕೆ ತಿಳಿಸುವುದು ಮತ್ತು ಕಳೆದು ಹೋಗಿರುವ ಭಾರತ ಭೂಭಾಗಗಳನ್ನು ಮತ್ತೆ ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆನ್ನುವ ಗುರಿಯೊಂದಿಗೆ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಪಂಜಿನ ಮೆರವಣಿಗೆ ನಡೆಯಿತು.


ಮಾದಾಪುರದ ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಪಂಜಿನ ಮೆರವಣಿಗೆಯು ಮಾದಾಪುರದ ಮುಖ್ಯ ಬೀದಿಗಳಲ್ಲಿ ಸಾಗಿ ಮಾದಾಫುರ ಶ್ರಿ ಗಣಪತಿ ದೇವಾಲಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ನೂರಾರು ದೇಶಭಕ್ತರು- ಮಹಿಳೆಯರು-  ಮಕ್ಕಳು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು.


ನಂತರ ನಡೆದ ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖರಾದ ಶ್ರೀ ಹರೀಶ್ ಶಕ್ತಿನಗರ್ ರವರು  ಮಾತನಾಡಿ, ಅಖಂಡ ಭಾರತಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ  ಪಡೆದ  ಸ್ವಾತಂತ್ರ್ಯವನ್ನು  ಅಂದಿನ ಕೆಲವರ ಸ್ವಾರ್ಥದಿಂದಾಗಿ ದೇಶ ವಿಭಜನೆ ಮಾಡುವ ಮೂಲಕ ಅಪಮೌಲ್ಯಗೊಳಿಸಲಾಯಿತು. ಅಂದು ನೂರಾರು ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟವು ಈಗಿನ ನಮ್ಮ ನಕ್ಷೆಯಲ್ಲಿನ ಭಾರತಕ್ಕಾಗಿ ಆಗಿರಲಿಲ್ಲ ಎಂದರು.


ಪಾಕಿಸ್ಥಾನ ಬಾಂಗ್ಲಾದೇಶ ಗಳನ್ನೊಳಗೊಂಡ ಭೂಪ್ರದೇಶವೂ ಭಾರತದ ಭೂಭಾಗಗಳೇ ಆಗಿದ್ದವು. ಅಂದಿನ ಮಹಮ್ಮದಾಲಿ ಜಿನ್ನಾ ನೆಹರು ಸೇರಿದಂತೆ ಕೆಲವರ ತಪ್ಪು ನಿರ್ಧಾರಗಳು ದೇಶವನ್ನೇ ಮತೀಯ ಆಧಾರದಲ್ಲಿ ಚೂರು ಚೂರು ಮಾಡಿತು. ಅಂದು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದವರು ಇಂದು ತಮ್ಮ ಹೊಟ್ಟೆಪಾಡಿನ ರಾಜಕೀಯಕ್ಕಾಗಿ ಜಾತ್ಯತೀತತೆಯ ಮಂತ್ರ ಜಪಿಸುತ್ತಾ ನಾವೆಲ್ಲರೂ ಒಂದೇ ಅನ್ನುತ್ತಿರುವುದು ಸ್ವಾತಂತ್ರ್ಯ ಭಾರತದ ದುರಂತವೇ ಆಗಿದೆಯೆಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಯೋಧರಾದ ಹವಾಲ್ದಾರ್ ತಂಬುಕುತ್ತಿರ ಗಪ್ಪು ಸೋಮಯ್ಯರವರು ಮಾತನಾಡಿ ಈ ದೇಶದ ಗಡಿಗಳನ್ನು ಹಗಲಿರುಳು ಸೈನಿಕರು ಕಾಯುತ್ತಿದ್ದು ಇದರಿಂದಾಗಿ ನಮ್ಮ ಸುತ್ತಲಿನ ಶತ್ರುದೇಶಗಳ ಉಪಟಳಗಳನ್ನು ದಿಟ್ಟವಾಗಿ ಎದುರಿಸಿ ದೇಶದೊಳಗೆ ಸುರಕ್ಷಿತವಾಗಿದ್ದೇವೆ. ಅದೇ ರೀತಿ ದೇಶದೊಳಗಿನ ಮತಾಂಧರ ಭಯೋತ್ಪಾದನೆ- ಸಂಘರ್ಷಗಳನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸದಾ ಸಿದ್ಧರಾಗಿ ಇರಬೇಕೆಂದರು. ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಮಿತಿಯ ಪ್ರಮುಖರಾದ ರಾಜೀವ್ ತಾಲ್ಲೂಕು ಸಂಯೋಜಕರಾದ ವಿನು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆರ್.ಎಸ್.ಎಸ್. ನ ಜಿಲ್ಲಾ ಕಾರ್ಯವಾಹರಾದ ದೆವಪ್ಪಂಡ ಡಾಲಿ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ಕುಕ್ಕೇರ ಅಜಿತ್ ಸಹ ಸಂಯೋಜಕರಾದ ಚೇತನ್, ಮಂಜುನಾಥ್, ಜಿಲ್ಲಾ ಸಮಿತಿಯ ಸುಭಾಶ್ ತಿಮ್ಮಯ್ಯ, ಕುಮಾರ್ ಉಮೇಶ್, ವಿನಯ್, ಸುನಿಲ್, ಶಾಂತೆಯಂಡ ತಿಮ್ಮಯ್ಯ, ರಂಜನ್ ಗೌಡ, ಪ್ರವೀಣ್, ಮಧು, ಹೇಮಂತ್,  ದುರ್ಗೇಶ್, ಧನಂಜಯ್, ಭವನ್, ತೇಜು, ಬಿ.ಯಂ.ಎಸ್.ನ ಪ್ರಮುಖರಾದ ಯೋಗಾನಂದ್, ಸ್ಥಳೀಯ ಗ್ರಾ.ಪಂ. ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಕಾರ್ಯಕ್ರಮದಲ್ಲಿ ಹೇಮ ಅಜಿತ್ ಪ್ರಾರ್ಥನೆ, ರಂಜನ್ ಗೌಡ ಸ್ವಾಗತಿಸಿ, ಸುನಿಲ್ ನಿರೂಪಿಸಿದರು. ಸುಭಾಸ್ ತಿಮ್ಮಯ್ಯರವರ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಭಾರೀ ಸಂಖ್ಯೆಯಲ್ಲಿದ್ದ ಪೋಲೀಸರು ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top