ಹದಿಹರೆದ ಬದಲಾವಣೆಗಳನ್ನು ಸ್ವೀಕರಿಸಿ : ಡಾ. ದೇವಿ ಪ್ರಭಾ ಆಳ್ವ
ಮೂಡುಬಿದಿರೆ: ಹದಿಹರೆಯದ ಬದಲಾವಣೆಗಳನ್ನು ಅರಿತುಕೊಂಡು ಮಹಿಳೆಯರು ಮಾನಸಿಕವಾಗಿ ಸದೃಢರಾಗಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮಾಜಿ ಡೀನ್ ಡಾ. ದೇವಿ ಪ್ರಭಾ ಆಳ್ವ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಮೆನ್ ವೆಲ್ಪೇರ್ ಕಮಿಟಿ ಆಯೋಜಿಸಿದ `ಎ ಟಾಕ್ ಆನ್ ಸೆಲೆಬೆರೇಟ್ ಗರ್ಲ್ ಹುಡ್ ಆ್ಯಂಡ್ ರಿ ಡಿಫೈನ್ ಯುವರ್ ಐಡೆಂಟಿಟಿ' ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು.
ಮಹಿಳೆಯರು ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಶ್ರೇಷ್ಠ ವ್ಯಕ್ತಿಗಳೆಂದು ಕರೆಸಿಕೊಳ್ಳುವವರು ಕೂಡ ತಾಯಿಯ ಗರ್ಭದಿಂದ ಜನಿಸಿರುತ್ತಾರೆ. ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆಯನ್ನು ತ್ಯಜಿಸಬೇಕು. ಡಬ್ಲೂಹೆಚ್‌ಒ ನೀಡಿದ ಮಾಹಿತಿಯ ಪ್ರಕಾರ ಭಾರತದಲ್ಲಿ ಖಿನ್ನತೆಗೆ ಒಳಗಾಗುವ ಹದಿಹರೆಯದವರ ಸಂಖ್ಯೆ ಹೆಚ್ಚಿದೆ, ಪ್ರತಿಯೊಂದು ನಿಮಿಷ ಕೂಡ ನಮ್ಮ ಜೀವನ ಬದಲಾಗುತ್ತಿರುತ್ತದೆ ಆದ್ದರಿಂದ ಖಿನ್ನತೆಗೆ ಒಳಗಾಗದೆ ಸೋಲು-ಗೆಲುವು ಎರಡನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ ಮಾತನಾಡಿ, ಪ್ರಸ್ತುತ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಅಂಕಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಂಡುಮಕ್ಕಳನ್ನು ಹಿಂದಿಕ್ಕುತ್ತಾರೆ ಆದರೆ ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಿದೆ. ಅಂಕ ಗಳಿಸುವುದು ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಮೆನ್ ವೆಲ್ಪೇರ್ ಕಮಿಟಿ ಸಂಯೋಜಕಿ ವಿನೆಟ್ ಚಂದನಾ ಮಸ್ಕರೇನಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ತೇಜಸ್ವಿನಿ ಸ್ವಾಗತಿಸಿ, ಅನ್ಸಿಯಾ ಕಾರ್ಯಕ್ರಮ ನಿರೂಪಿಸಿ, ವೈಷ್ಣವಿ ವಂದಿಸಿದರು.