ಬೆಳ್ಳಾರೆ: ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ

Upayuktha
0

ಬೆಳ್ಳಾರೆ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ ಹದಿನೈದು ಆಗಸ್ಟ್ 2022ರಂದು ಧ್ವಜಾರೋಹಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮುಖಾಂತರ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿ, ತಿರುಪತಿಯ ಸಂಸ್ಕೃತ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥರಾದ  ಪ್ರೊ.ಕೆ. ಗಣಪತಿ ಭಟ್, ಧ್ವಜಾರೋಹಣಗೈದು ಮಾತನಾಡಿದರು. "ಕನಸುಗಳನ್ನು ಹೊತ್ತು ಆರಂಭಿಸುವ ನಮ್ಮ ವಿಧ್ಯಾಭ್ಯಾಸ ಕ್ಕೆ ಶಿಕ್ಷಕರ ಬೆಂಬಲ ಬಹಳ ಹೆಚ್ಚಿನದ್ದಾಗಿರುತ್ತದೆ. ಉನ್ನತ ಹಂತವನ್ನು ತಲುಪುವ ನಮ್ಮ ಸಂತೋಷದಲ್ಲಿ ಅವರು ತಮ್ಮ ಸಂತೋಷವನ್ನು ಕಾಣುವ ಅವರನ್ನು ಸನ್ಮಾನಿಸಬೇಕು. ವಿದ್ಯೆಗೆ ವಿನಯ, ಸಾಹಸ, ಧೈರ್ಯ ಮತ್ತು ಬುದ್ಧಿವಂತಿಕೆಗಳಿರಬೇಕು ಎಂದರು.


ಸ್ವತಂತ್ರ ಭಾರತದ ಸುವರ್ಣ ಮಹೋತ್ಸವ ದಲ್ಲಿ ನಾವು- ವಿದ್ಯಾವಂತರಾಗಿ ಬಾಳಿ ನಮ್ಮ ದೇಶದ ಸೇವೆಯನ್ನು ಮಾಡಬೇಕು. ನಮ್ಮ ಶಕ್ತಿಯನ್ನನುಸರಿಸಿ ನಮ್ಮಂತೆಯೇ ಇರುವಂತಹ ವ್ಯಕ್ತಿಗಳಿಗೂ, ದೀನ ದಲಿತ ಬಡ ಬಗ್ಗರು ಇವರಿಗೆ ನಮ್ಮ ಆರ್ಜನೆಯಲ್ಲಿ ಸ್ವಲ್ಪವನ್ನಾದರೂ ದಾನ ಮಾಡಬೇಕು.


ಸಂಫೂರ್ಣ ಭವನವೊಂದರ ನಿರ್ಮಾಣ ಹೇಗೆ ಕೇವಲ ಇಡೀ ಇಟ್ಟಿಗೆಗಳಿಂದ ಮಾತ್ರ ಸಾಧ್ಯವಿಲ್ಲವೋ ಹಾಗೇ ಕೇವಲ ವೈದ್ಯರು, ಎಂಜಿನಿಯರ್ ಗಳು ಮಾತ್ರ ಈ ದೇಶಕ್ಕೆ ಸಾಲದು ಬದಲಾಗಿ ಆರ್ಥಿಕ ತಜ್ಞರೂ, ಕೆಲಸ ಗಾರರೂ ಎಲ್ಲರ ಸಹಬಾಳ್ವೆ, ಸಹಯೋಗ, ಸಮನ್ವಯತೆ ಯಿಂದ ಭಾರತವು ವಿಶ್ವ ಮಾನವತೆಯನ್ನು ಹೊಂದಿದೆ. ಆದ್ದರಿಂದ ನಾವು ನಮ್ಮಿಂದ ಸಾಧ್ಯವಾದಷ್ಟು ದೇಶಸೇವೆಯನ್ನು ಮಾಡಬೇಕೆನ್ನುವ ಮನೋಭಾವ ಹೊಂದಬೇಕು" ಎಂದು ಅವರು ನುಡಿದರು.


ಶಾಲಾ ಸಂಚಾಲಕರು ಮತ್ತು ಪ್ರಾಂಶುಪಾಲರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಸಂಚಾಲಕರು ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿ ಬ್ರಿಟಿಷರ ವಿರುದ್ಧ ಬೆಳ್ಳಾರೆಯ ದಂಗೆಯ ಕುರಿತು ಮಾಹಿತಿ ನೀಡಿದರು.


ಶಿಕ್ಷಕಿ ವಾರಿಜಾಕ್ಷಿ ಇವರು ಸ್ವಾಗತ ಮತ್ತು ಪರಿಚಯ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಲಿಖಾ, ಆದಿತ್ಯ ಮತ್ತು ಅಥರ್ವ ಇವರು ಕಾರ್ಯಕ್ರಮ ನಿರೂಪಿಸಿದರು.


ನಂತರ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತದ ಸಂಸ್ಕೃತಿ ಹಾಗೂ ಸೈನಿಕ ಸೇವೆಯ ನೆನಪುಗಳನ್ನು ಪ್ರತಿಬಿಂಬಿಸಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಲಾಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Advt Slider:
To Top