ನೆಲ್ಯಾಡಿ: ಮುಳಿಯ ಸಿಲ್ವರಿಯದಲ್ಲಿ ಕರಿಮಣಿ ಉತ್ಸವ ಚಾಲನೆ

Upayuktha
0

ಆ.15ರಿಂದ 21ರ ವರೆಗೆ ನಡೆಯಲಿರುವ ಕರಿಮಣಿ ಉತ್ಸವ


ಪುತ್ತೂರು: ನೆಲ್ಯಾಡಿಯ ಮುಳಿಯ ಸಿಲ್ವರಿಯ ಮಳಿಗೆಯಲ್ಲಿ ಚಿನ್ನದ ಕರಿಮಣಿ ಉತ್ಸವವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ರಾವ್ ಇವರು ಇಂದು (ಆ 15) ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಪೂವಾಜೆ ಅವರು ಭಾಗವಹಿಸಿ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಥಮ ಖರೀದಿದಾರಗಿ ಸುಬ್ರಮಣ್ಯ ಆಚಾರ್ಯ ಇವರು ಚಿನ್ನದ ಕರಿಮಣಿಯನ್ನು ಖರೀದಿಸಿದರು. ಈ ಸಂದರ್ಭದಲ್ಲಿ 18 ಕ್ಯಾರೇಟ್ ಗುಣಮಟ್ಟದ ರೋಸ್ ಗೋಲ್ಡ್ ಕರಿಮಣಿಗಳನ್ನು ಬಿಡುಗಡೆಗೊಳಿಸಲಾಯಿತು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಈ ಕರಿಮಣಿ ಉತ್ಸವವು ಆಗಸ್ಟ್ 15 ರಿಂದ 21 ರವರೆಗೆ ನಡೆಯಲಿದೆ. ಪುತ್ತೂರು ಶಾಖಾ ಪ್ರಬಂಧಕ ನಾಮದೇವ ಮಲ್ಯ ಅವರು ಸ್ವಾಗತಿಸಿ,ಕರಿಮಣೀ ಉತ್ಸವ ಮತ್ತು ನೆಲ್ಯಾಡಿ ಸಿಲ್ವರಿಯ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದರು.


ಫ್ಲೋರ್ ಮ್ಯಾನೇಜರ್ ಪ್ರವೀಣ್ ಮಾತನಾಡಿ ನಮ್ಮಲ್ಲಿ ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಸುಮಾರು 2 ಗ್ರಾಂ ನಿಂದ 100 ಗ್ರಾಂನ ವರೆಗೆ 300ಕ್ಕೂ ಅಧಿಕ ಡಿಸೈನ್‍ಗಳ ಕರಿಮಣಿಗಳು ನೆಲ್ಯಾಡಿ ಜನತೆಗೆ ಲಭ್ಯ ಅದಲ್ಲದೆ ಮುಷ್ಠಿ ಪಿರಿ, ಮುಷ್ಠಿ ಕಟ್ಸ್, ಕಟ್ಸ್ ಕಂಠಿ, ಗೋಲು ಕಂಠಿ, ದಳಪತಿ, ಗಾಂಚು ಕಂಠಿ, ಗಾಂಚು ಪಿರಿ, ಧೃವಂ ಕಂಠಿ, ಕೆಕೆಜಿಸಿ, ನುಗ್ಗೆ ಕಂಠಿ, ನುಗ್ಗೆ ಕವರ್, ದಳ ಕವರ್, ಧ್ರುವಂ ಕವರ್, ಅಂಜಲಿ ಕಂಠಿ, ಪಟ್ಟಿ ಕಂಠಿ, ಚಕ್ರ ಕಂಠಿ, ಎಫ್‍ಡಿಸಿ ಕಂಠಿ, ಬಾಂಬೆ ಕಂಠಿ, ಜೋಮಾಲೆ ಕಂಠಿ, ಜಿಜಿ ಕಂಠಿ, ಜಿಜಿಪಿರಿ ಕಂಠಿ, ಪವಿತ್ರ ಕಂಠಿ, ತ್ರೀರಿಂಗ್ ಕಂಠಿ, ಮುಷ್ಠಿ ಕಂಠಿ, ಗ್ಲಾಸ್ ಕಟ್ ಕಂಠಿ, ಕಟ್ಸ್ ಕವರ್ ಕಂಠಿ, ದಳ ಪಿರಿ ಕಂಠಿ. ಮುಂತಾದ ಕರಿಮಣಿ ಲಭ್ಯವಿದೆ ಎಂದು ಹೇಳಿದರು.


ನೆಲ್ಯಾಡಿ ಸಿಲ್ವರಿಯ ವ್ಯವಸ್ಥಾಪಕ ಪ್ರಶಾಂತ್ ಧನ್ಯವಾದ ಮಾಡಿದರು, ಮುಳಿಯ ಸಿಲ್ವರಿಯ ಸಿಬ್ಬಂದಿ ದೀಪಕ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Advt Slider:
To Top