ಹವ್ಯಕ ಕವನ: ಏಳ್ಕಾನ ಗುಣಾಜೆಯ ಹೊಳೆ

Upayuktha
0


ಎಂಗಳಾ ಊರಿಲ್ಲಿ ಹೊಳೆಯೊಂದು ಕಾಣೆಕ್ಕೊ

ಕಂಗಿನಾ ತೋಟಕರೆ ಹೋಯೆಕ್ಕದ

ತೆಂಗಿನಾ ಸಾಲುಗಳೆ ಹೊಳೆ ಕರೆಲಿ ಇದ್ದಲ್ಲಿ

ಮಂಗನಾ ಸಂಸಾರ ಕೆಲವು ಇಕ್ಕು.


ಹೊಳೆ ತುಂಬಿ ಹರಿವಲ್ಲಿ ಕೆಂಪಾಗಿ ಚಾಯದಾ

ಕಳೆಯಿಪ್ಪ ಬೆಳ್ಳಲ್ಲಿ ತೇಲುಗೀಗ

ಕೊಳೆ ಕಸವು ಬಾಳೆ ಬುಡ ಮಡಲೆಲ್ಲ ಒಟ್ಟಿಂಗೆ

ತಲೆತೋರಿ ತೇಲುತ್ತ ಸಾಗುಗೀಗ


ಹೊಳೆ ಹೆಸರು ಏಳ್ಕಾನ ಪೆರಡಾಲ ಏತಡ್ಕ

ಹಳ್ಳಂಗೊ ಸೇರುತ್ತು ದೊಡ್ಡ ಹೊಳೆಗೆ

ಪುಳ್ಳರುಗೊ ಗುಂಪಾಗಿ ಬೆಳ್ಳವಾ ನೋಡುಲೇ

ಹೊಳೆ ಕರೆಗೆ ಬಕ್ಕೀಗ ಪೆರ್ಚಿ ಕಟ್ಟಿ


ಬೆಳ್ಳಲ್ಲಿ ತೇಲುತ್ತ ಕಾಯಿಗಳ ಹಿಡಿವೋರು

ಹಳ್ಳಿಲ್ಲಿ ಕೆಲವಾರು ಜೆನ ಇತ್ತವು

ಜಳ್ಳವೊಚ್ಚುವದಿತ್ತು ದೋಣಿಲ್ಲಿ ಕೂದೊಂಡು

ಬೆಳ್ಳಲ್ಲಿ ಒಯಿಲಿಕ್ಕು ದಾಂಟುವಾಗ.


ದನಂಗಳೆ ಮೀಸಿಂಡು ದಾಂಟುವಾ ಹೊಳೇಲಿ

ಜೆನ ಕೆಲವು ಬಿದ್ದಿಕ್ಕಿ ಸಾವದಿದ್ದು

ಮನಸಿಲ್ಲಿ ನೆಂಪಾತು ದೂರಲ್ಲಿ ಇಪ್ಪಾಗ

ಗುಣದೂರು ಈ ಕವಿಗೆ ಮರವಲಿದ್ದೊ ?


ಎಂಗಳೂರಿನ ಹಳ್ಳ ಪುತ್ತಿಗೆಯ ದಾಂಟಿಕ್ಕಿ

ಮಂಗಳೂರಿನ ಮಾರ್ಗ ಸಾಗುವಲ್ಲಿ

ನಿಂಗಳಾ ಕಣ್ಣಿಂಗೆ ಕಾಂಗಿದುವೆ ಕಡಲಿಂಗೆ

ತೆಂಗಿನಾ ಸಾಲಿಲ್ಲಿ ಕೂಡುವಲ್ಲಿ..


ಹೊಳೆಯಾಚಕರೆ ಈಚಕರೆ ಹೇಳಿ ಆರು ಮನೆ/

ಒಳುದಿಲ್ಲಿ ಹೊಳೆಯ ಕರೆ ನೆಲೆ ಕಂಡವು

ಒಳುದೋರು ವಂಶದವು ದೂರಲ್ಲಿ ಮನೆ ಕಟ್ಟಿ

ನೆಲೆ ಕಂಡು ಬದುಕಿಲ್ಲಿ ತೊಡಗಿದ್ದವು.


ಕವನ: ಗುಣಾಜೆ ರಾಮಚಂದ್ರ ಭಟ್

ಚಿತ್ರ: ಧರ್ಮತ್ತಡ್ಕ ರಾಮಚಂದ್ರ ಭಟ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter
Tags

Post a Comment

0 Comments
Post a Comment (0)
To Top