ಶ್ರೀನಿವಾಸ ವಿಶ್ವವಿದ್ಯಾಲಯ: ವನಮಹೋತ್ಸವ ಕಾರ್ಯಕ್ರಮ

Upayuktha
0

 

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಉನ್ನತ ಭಾರತ್ ಅಭಿಯಾನ ವೇದಿಕೆಯು ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ರೀಕನ್‌ಸ್ಟ್ರಕ್ಷನ್ ಏಜೆನ್ಸಿ (ಸೀರಾ) ಸಹಯೋಗದೊಂದಿಗೆ ಪಾವೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಿತು. ಸರ್ಕಾರದ MHRD ಉನ್ನತ್ ಭಾರತ್ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯ ದತ್ತು ಪಡೆದಿರುವ ಗ್ರಾಮದಲ್ಲಿ ಪಾವೂರು ಒಂದು.


ಪಾವೂರು ಗ್ರಾಪಂ ಉಪಾಧ್ಯಕ್ಷ ಮಹಮ್ಮದ್ ಅನ್ಸಾರ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯಿತಿ ಸದಸ್ಯರಾದ ರವಿಕಲಾ ಮತ್ತು ರಿಯಾಜ್ ಅಹಮದ್, ಪಾವೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯಿನಿ ರೇಚೆಲ್, ಶ್ರೀನಿವಾಸ ವಿಶ್ವವಿದ್ಯಾಲಯ ಉನ್ನತ್ ಭಾರತ್ ಅಭಿಯಾನದ ಸಂಯೋಜಕ ಡಾ. ಪ್ರದೀಪ್ ಎಂ.ಡಿ., ಅಧ್ಯಾಪಕ ಸಂಚಾಲಕ ಪ್ರೊ.ಜಾಯ್ಸನ್ ಪ್ರೆಂಕಿ ಕಾರ್ಡೋಜ, ಪ್ರೊ.ಸುಶ್ಮಿತಾ ಎಸ್.ಕೋಟ್ಯಾನ್, ಪ್ರೊ.ಶ್ರೀರಾಜ್ ಎಸ್.ಆಚಾರ್ಯ ಮತ್ತು ಸಂಶೋಧನಾ ವಿದ್ಯಾರ್ಥಿ ಶಿವರಾಜ್ ಜಿ. ಇದ್ದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಆಂಡ್ ಹುಮ್ಯಾ ನಿಟಿಸ್ ನ ಎಂಎಸ್ ಡಬ್ಲ್ಯೂ ಮತ್ತು ಬಿಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತರಗತಿಯ 19 ವಿದ್ಯಾರ್ಥಿಗಳು, ಪಾವೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಬುಲ್‌ಬುಲ್ ಮತ್ತು ಗೈಡ್ಸ್‌ನ 15 ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ 30 ಕ್ಕೂ ಹೆಚ್ಚು ರೀತಿಯ ಸಸಿಗಳನ್ನು ನೆಟ್ಟರು ಮತ್ತು ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top