||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ: 'ಅಗಾನ್ – 2022' ಅಂತರ್ ಕಾಲೇಜು ಫೆಸ್ಟ್

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ: 'ಅಗಾನ್ – 2022' ಅಂತರ್ ಕಾಲೇಜು ಫೆಸ್ಟ್

ಉದ್ಯಮ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯ : ಎಂ. ಎ ಉಪಾಸೆ


ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ `ಅಗಾನ್ – 2022’ ಎರಡು ದಿನದ ಅಂತರಕಾಲೇಜು ಫೆಸ್ಟ್ಗೆ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಸಹಾಯಕ ಪೋಲಿಸ್ ಕಮಿಷನರ್ ಎಂ. ಎ ಉಪಾಸೆ ಮಾತನಾಡಿ, ಉದ್ಯಮ ಎನ್ನುವುದು ಕಾಲಕ್ಕೆ ಅನುಗುಣವಾಗಿ ಬದಲಾಗುತ್ತದೆ. ಉದ್ಯಮಿಯಾಗಬೇಕೆಂದಿರುವವರು ಮೊದಲು ಸಮಯಕ್ಕೆ ಸರಿಯಾದ ಬದಲಾವಣೆಯನ್ನು ಉದ್ಯಮ ಕ್ಷೇತ್ರದಲ್ಲಿ ತರಲು ಶಕ್ತನಾಗಿರಬೇಕು. ಆಗ ಮಾತ್ರ ಯಶಸ್ವಿ ಉದ್ಯಮಿಯಾಗಬಲ್ಲ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಐಪಿಎಸ್ ಸಂಸ್ಥೆಯ ನಿರ್ದೇಶಕ ರವಿ ಕುಮಾರ್ ಓರ್ವ ಉದ್ಯಮಿ ಮಾಡು ಇಲ್ಲವೇ ಮಡಿ ಎಂಬಂತೆ ಕಾರ್ಯಮಗ್ನನಾಗಬೇಕು. ಆಗ ಮಾತ್ರ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದಲೇ ಸಮಯ ಮತ್ತು ಶಕ್ತಿಯೆಂಬ ಎರಡು ವಿಶೇಷ ವರವನ್ನು ಹೊಂದಿರುತ್ತಾನೆ ಅದನ್ನು ಸಮಪರ್ಕವಾಗಿ ಬಳಸಿಕೊಂಡಾಗ ಸಾಧಕನೆಂದು ಕರೆಸಿಕೊಳ್ಳುತ್ತಾನೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ ಹೊಸ ವ್ಯಾಪರ ಅಥವಾ ಉದ್ಯಮವನ್ನು ಪ್ರಾರಂಭಿಸುವಾಗ ಸಾಕಷ್ಟು ಬಾರಿ ಎಡುವುದು ಸಹಜ ಆದರೆ ಉದ್ಯಮಿಯ ನಿರಂತರ ಪರಿಶ್ರಮ ಯಶಸನ್ನು ತಂದುಕೊಡುತ್ತದೆ. ಉತ್ತಮ ದೃಷ್ಟಿಕೋನ ಹಾಗೂ ಸತತ ಪ್ರಯತ್ನದಿಂದ ಮುನ್ನಗುವ ಮನಸ್ಥಿತಿ ಎಲ್ಲರಲ್ಲು ಇರಬೇಕು ಎಂದರು.


ಕಾರ್ಯಕ್ರಮದಲ್ಲಿ ಲೇಖಕಿ ಜುಗಿ ನಂದಾ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರಾಶುಂಪಾಲರಾದ ಡಾ.ಪೀಟರ್ ಫೆರ್ನಾಂಡೀಸ್, ಅಧ್ಯಾಪಕ ಸಂಯೋಜಕರಾದ ನೀರಜ್ ರೈ, ವಿದ್ಯಾರ್ಥಿ ಸಂಯೋಜಕರಾದ ಪ್ರೀತಿಷ್ ಕುಮಾರ್, ಉಪಸ್ಥಿತಿತರಿದ್ದರು. ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರೀಯಾ ಸಿಕ್ವೇರಾ ಸ್ವಾಗತಿಸಿ, ಮೇರಿ ಡಿಸೋಜಾ ವಂದಿಸಿ, ವಿದ್ಯಾರ್ಥಿನಿ ಅಂಕಿತಾ ಎಂ.ಶೆಟ್ಟಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post