ನಗರದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆಗೆ ಸಾಗುವ ಪಾದಚಾರಿ ಮಾರ್ಗದಲ್ಲಿ ಪಾದಾಚಾರಿಗಳು ನಡೆದು ಸಾಗಲು ಜಾಗವೇ ಇಲ್ಲವಾಗಿದೆ. ಜನತಾ ಬಜಾರ್ ಬಸ್ ಸ್ಟಾಪ್ ನಲ್ಲಿ ಹಿಂಭಾಗ ಇರುವ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ !! ಕಸದ ರಾಶಿ !! ಜನತಾ ಬಜಾರ್ ಬಸ್ ನಿಲ್ದಾಣ ನಿಲ್ಲುವ ಪ್ರಯಾಣಿಕರು ಮೂಗಿನ ಮೇಲೆ ಕೈ ಇಟ್ಟು ನಿಲ್ಲಬೇಕಾದ ಪರಿಸ್ಥಿತಿ ಒಂದೆಡೆ ಆದರೆ ಕಳೆದ ಎರಡು ವರುಷಗಳಿಂದ ಕರೋನಾದಿಂದ ಬದುಕು ಅಯೋಮಯ ಆಗಿದ್ದರೆ ಜನರು ಕಂಡ ಕಂಡಲ್ಲಿ ಕಸ ಹಾಕಿ ಸಾಂಕ್ರಾಮಿಕ ರೋಗಕ್ಕೆ ಮುನ್ನುಡಿ ಬರೆಯುತ್ತ ಇದ್ದಾರೆ. ಹಾಗೆಯೇ ಈಗ ಹೊಸ ಕಾಯಿಲೆ ಒಂದು ಬಂದಿದೆ ಅಂತೇ... ಅದರ ಹೆಸರು ಮಂಕಿ ಪಾಕ್ಸ್ ಅಂತೇ... ಜನರು ಕಂಡ ಕಂಡಲ್ಲಿ ಕಸ ಹಾಕುವುದನ್ನು ನಿಲಿಸುತ್ತಾರೆಯೇ ಹಾಗೂ ಮಹಾನಗರ ಪಾಲಿಕೆ ನಗರದ ಸ್ವಚ್ಛತೆ ಬಗ್ಗೆ ಗಮನ ಹರಿಸಿತೇ ಎಂಬುದು ನನ್ನ ಯಕ್ಷ ಪ್ರಶ್ನೆ.
ಪಾದಾಚಾರಿ ಮಾರ್ಗದ ಮೇಲೆ ದ್ವಿ ಚಕ್ರ ವಾಹನಗಳ ಸವಾರಿಯಿಂದ ಹೊಂಡ ಸೃಷ್ಟಿ:
ಬನಶಂಕರಿ 3ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗುವ ದ್ವಿಚಕ್ರ ವಾಹನ ಚಾಲಕರು ಹಾಗು ನಾಲ್ಕು ಚಕ್ರ ಗಳ ವಾಹನಗಳ ಚಾಲಕರು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುತ್ತಾರೆ. ಅವರು ತಂದ ವಸ್ತುಗಳನ್ನು ಸಂಬಂಧಪಟ್ಟ ಅಂಗಡಿಗಳಿಗೆ ರವಾನೆ !! ಪಾದಚಾರಿಗಳ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಅವ್ಯವಸ್ಥೆ ಇದೆ ಪಾದಾಚಾರಿ ಮಾರ್ಗದ ಮೇಲೆ ??!! ಇದು ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆ ಹೋಗುವ ದಾರಿಯ ಫುಟ್‌ಪಾತ್ ಅವ್ಯವಸ್ಥೆಯ ಚಿತ್ರಣ.
ಸಾವಿರಾರು ರೊಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಪುಟ್ ಪಾತ್ ಇಂದು ಅಕ್ಷರಶಃ ಕಸದ ರಾಶಿ ರಾಶಿ ಹಾಕುವ ತಾಣ ಹಾಗೂ ದ್ವಿಚಕ್ರ ವಾಹನ ಹಾಗು ನಾಲ್ಕು ಚಕ್ರದ ವಾಹನ ನಿಲ್ಲಿಸುವ ತಾಣ. ಮರಳು - ಜಲ್ಲಿ ಪುಡಿ ಹಾಕುವ ತಾಣ, ಲಾರಿ ನಿಲ್ಲಿಸಿ ಸಾಮಾನುಗಳನ್ನು ಇಳಿಸುವ ತಾಣ.
ಆದರೆ ಇವೆಲ್ಲವೂ ಕಣ್ಣಿಗೆ ಕಟ್ಟುವಂತೆ ಇದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣಿಗೆ ಬೀಳದಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆಯೇ ಎಂಬ ಯಕ್ಷ ಪ್ರಶ್ನೆ ನನ್ನ ಮನದಲ್ಲಿ ಮೂಡಿದೆ. ಸಂಬಂಧ ಪಟ್ಟವರು ಪುಟ್ ಪಾತ್ ಮೇಲೆ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಲಿ. ಪುಟ್ ಪಾತ್ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಲಿ. ಸಾವಿರ ಸಾವಿರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಪಾದಾಚಾರಿ ಮಾರ್ಗಗಳು ಪಾದಾಚಾರಿಗಳು ಓಡಾಡಲು ಅನುವು ಮಾಡಿ ಕೊಡಲಿ. ಒಟ್ಟಿನಲ್ಲಿ ನಗರದ ಬನಶಂಕರಿ 3 ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣವನ್ನು ಬಿಡಿಸುವ ಮನಸ್ಸು ಮಹಾನಗರ ಪಾಲಿಕೆ ಮಾಡಲಿ ಎಂದು ಆಶಿಸುತ್ತೇನೆ.
ಚಿತ್ರ ಮತ್ತು ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ