ಹೈದರಾಬಾದ್‌ನಲ್ಲಿ ಚಾತುರ್ಮಾಸ್ಯ ವ್ರತ ನಿರತ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಕೇಂದ್ರ ಸಚಿವ ಕಿಶನ್‌ ರೆಡ್ಡಿ

Upayuktha
0

ಹೈದರಾಬಾದ್‌: ಕೇಂದ್ರ ಪ್ರವಾಸೋದ್ಯಮ‌ ಸಚಿವ ಕಿಶನ್ ರೆಡ್ಡಿಯವರು ಶನಿವಾರ ಹೈದರಾಬಾದ್‌ನಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಭಕ್ತಿ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು.‌ ರೆಡ್ಡಿಯವರ ಪತ್ನಿಯೂ ಜೊತೆಗಿದ್ದರು.


ಬದರಿಯಲ್ಲಿ ಮಧ್ವಾಚಾರ್ಯರ ಪ್ರತಿಮೆ ನಿರ್ಮಾಣಮಾಡುವ ಬಗ್ಗೆ ಶ್ರೀಗಳವರು ಅಪೇಕ್ಷೆ ವ್ಯಕ್ತಪಡಿಸಿದ್ದಕ್ಕೆ ಸಮ್ಮತಿಸಿದ ರೆಡ್ಡಿಯವರು ಈ ಬಗ್ಗೆ ಯೋಜನೆ ರೂಪಿಸಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು ಇದರಲ್ಲಿ ಜನತೆ ಭಾಗವಹಿಸುವಂತೆ ಶ್ರೀಗಳವರು ಮತ್ತು ಎಲ್ಲ ಮಠಾಧೀಶರೂ ಕರೆಕೊಡುವಂತೆ ಸಚಿವರು ವಿನಂತಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top