ಬೆಂಗಳೂರು: ಶುಕ್ರವಾರ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಕರಾವಳಿ ಪ್ರದೇಶದ ಅನೇಕ ಸಾಧು ಸಂತರ ಸಮಾಗಮ ಅಪೂರ್ವ ಕಾರ್ಯಕ್ರಮ ವೈಭವದಿಂದ ನೆರವೇರಿತು.
ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಬೆಂಗಳೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಉಡುಪಿ ಪಡುಕತ್ಯಾರು ಶ್ರೀ ಅನೆಗುಂದಿ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರಿಂಜ ಶ್ರೀ ಸತ್ಯನಾರಾಯಣ, ಶ್ರೀ ವೀರಾಂಜನೇಯ ಶ್ರೀ ರಾಘವೇಂದ್ರ ಗುರುಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ರಘುರಾಮಾನಂದಜೀ ಕಾರ್ಕಳ ನೀರೆ ಬೈಲೂರು ರಾಮಕೃಷ್ಣಾಶ್ರಮದ ಸ್ವಾಮಿ ಪ್ರಬೋಧಾನಂದ ಜಿ ಉಪಸ್ಥಿತರಿದ್ದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು.
ವಿದ್ವಾನ್ ಕಟ್ಟಿ ಬದರೀನಾಥಾಚಾರ್ಯ ನಿರೂಪಣೆಗೈದು, ವಂದನಾರ್ಪಣೆಗೈದರು. ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿದರು. ವಿದ್ವಾನ್ ಸತ್ಯನಾರಾಯಣಾಚಾರ್ಯರು, ವಿದ್ವಾನ್ ರಾಮ ವಿಠಲಾಚಾರ್ಯ, ವಿದ್ಯಾಪೀಠದ ವ್ಯವಸ್ಥಾಪಕ ಶೇಷಾದ್ರಿ, ಶ್ರೀಗಳ ಆಪ್ತ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಹಾಗೂ ವಿದ್ಯಾಪೀಠದ ಪ್ರಾಧ್ಯಾಪಕ ವಿದ್ವಾಂಸರು ನೂರಾರು ವಿದ್ಯಾರ್ಥಿಗಳು ವಾದ್ಯಘೋಷ ಸಹಿತ ಪೂರ್ಣಕುಂಭದೊಂದಿಗೆ ಎಲ್ಲಾ ಸ್ವಾಮೀಜಿಯವರನ್ನು ಮಾಡಿಕೊಂಡರು. ಬಳಿಕ ಎಲ್ಲ ಸ್ವಾಮೀಜಿಯವರಿಗೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ದರ್ಶನ ಮಾಡಿಸಲಾಯಿತು. ಪ್ರದೀಪ್ ಕುಮಾರ್ ಕಲ್ಕೂರ ಅಭಿನಂದನಾ ಮಾತುಗಳನ್ನಾಡಿದರು.
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಎಲ್ಲಾ ಸ್ವಾಮೀಜಿಯವರು ಎಲ್ಲಾ ಸ್ವಾಮೀಜಿಯವರನ್ನು ಸಂಮಾನಿಸಿ ಅಭಿನಂದಿಸಿದರು .ಧರ್ಮಸಭೆಯಲ್ಲಿ ಎಲ್ಲ ಸ್ವಾಮೀಜಿಯವರೂ ಸಂದೇಶ ನೀಡಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಾಧನೆ ಔದಾರ್ಯ ಗುಣಗಳನ್ನು ಕೊಂಡಾಡಿ ತಮಗೆಲ್ಲ ಅವರು ತೋರಿದ ಅಭಿಮಾನ ಪ್ರೀತಿಯನ್ನು ಮನಸಾ ಸ್ಮರಿಸಿಕೊಂಡರು.
ಇದೇ ಸಂದರ್ಭದಲ್ಲಿ ವಿದ್ಯಾಪೀಠದ ಆವರಣದಲ್ಲಿ ನಿರ್ಮಾಣವಾಗಲಿರುವ ನೂತನ ಶ್ರೀ ವಿಶ್ವೇಶತೀರ್ಥ ಗುರುಭವನನಕ್ಕೆ ಎಲ್ಲ ಸ್ವಾಮೀಜಿಯವರೂ ಶಿಲಾಪೂಜನ ನೆರವೇರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ