ಮಂಗಳೂರು: ನಗರದ ಉರ್ವ ಸ್ಟೋರ್‌ನಲ್ಲಿ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆ ಮತ್ತು ಕರ್ನಾಟಕ ಸರಕಾರದ ಮಾನ್ಯತೆಯೊಂದಿಗೆ ಬಿಕಾಂ ಬಿ ಎಸ್ ಡಬ್ಲ್ಯೂ, ಬಿಬಿಎ ಕೋರ್ಸುಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಮುಖ್ಯ ಗುರಿಯಾಗಿಸಿಕೊಂಡಿದೆ.
ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ 18 ವರ್ಷದ ನಂತರ ಕಡ್ಡಾಯವಾಗಿ part time job ಅವಶ್ಯಕತೆ ಇರುತ್ತದೆ. ಆದರೆ ಭಾರತದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ರಾಜ್ಯದ ಶೈಕ್ಷಣಿಕ ಕೇಂದ್ರವಾದ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಪ್ರಥಮ ಬಾರಿಗೆ ಅಧಿಕೃತವಾಗಿ earn while you learn ಕಲಿಕೆಯೊಂದಿಗೆ ಗಳಿಕೆ ಯೋಜನೆಯನ್ನು ಎರಡು ವರ್ಷದ ಹಿಂದೆ ಪ್ರಾರಂಭಿಸಿ ಇದೀಗ 80% ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ part time ಉದ್ಯೋಗದಲ್ಲಿರುವುದು ಈ ಸಂಸ್ಥೆಗೆ ಹೆಮ್ಮೆ ತಂದಿರುತ್ತದೆ. ವಿದ್ಯಾರ್ಥಿಗಳು ಗಳಿಕೆಯೊಂದಿಗೆ communication, leadership and marketing skills ಮುಂತಾದ ಆಡಳಿತ ಅನುಭವಗಳನ್ನು ಪಡೆಯುತ್ತಿದ್ದು ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನವೂ ಇದರಿಂದ ಸಾಧ್ಯವಾಗುತ್ತದೆ.
ಇಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನದೊಂದಿಗೆ ಪ್ರಾಯೋಗಿಕ ಅನುಭವವನ್ನೂ ಪಡೆಯುತ್ತಿದ್ದು, ಭಾರತ ಘನ ಸರಕಾರದ ಹೊಸ ಶಿಕ್ಷಣ ನೀತಿ ಕೂಡ ಇದನ್ನೇ ಸಾರುತ್ತದೆ.
ಕಳೆದ ಎರಡು ವರ್ಷದಲ್ಲಿ 180ಕ್ಕೂ ಹೆಚ್ಚು ತರಬೇತಿ ಶಿಬಿರಗಳನ್ನು ಉದ್ಯಮಿ ತರಬೇತುದಾರರಾದ ಜೆ ಸಿ ಸುಭಾಷ್ ಬಂಗೇರ ಶ್ರೀಮತಿ ಸಂಧ್ಯಾ ವರ್ಮ, ಶ್ರೀಮತಿ ಆಸ್ಮಾನಿ ಸುರ್ವೆ, ಶ್ರೀಮತಿ ತನುಜ ಮಾಬೆನ್, ಜೆಸಿಐ ಸೇನ್ ಅಮಿತ್ ಕೆ ಇಂಗುರಾನೆ, ಶ್ರೀಮತಿ ಶೋಭಾ ಜಿ ರಾವ್, ಶ್ರೀಮಾನ್ ಧೀರಜ್ ಶೆಟ್ಟಿ, ಶ್ರೀಮಾನ್ ಅಶ್ವಿನ್ ಕುಮಾರ್, ಶ್ರೀಮಾನ್ ಸತೀಶ್ ಭಟ್ ಬಿಳಿನೆಲೆ, ಶ್ರೀಮತಿ ಪ್ರೀತಮ್ ಕಾಮತ್ ಮತ್ತಿತರರು ನೀಡಿರುತ್ತಾರೆ.
ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಕಲೆ ತರಬೇತಿಗಳನ್ನು ಹಾಗೂ ಹಳ್ಳಿ ಹಬ್ಬ ಎಂಬ ಎಂಟು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಮೂವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಬೀದಿ ನಾಟಕ ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಉಪನ್ಯಾಸಕರಿಗೆ FDP (ಫ್ಯಾಕಲ್ಸಿ ಡೆವಲಪ್‌ಮೆಂಟ್ ಪ್ರೋಗ್ರಾಂ) ಕಾರ್ಯಕ್ರಮದೊಂದಿಗೆ ಉದ್ಯಮಗಳಲ್ಲಿ ಒಂದು ತಿಂಗಳ ತರಬೇತಿ ಕೂಡ ನೀಡುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ. BASF, Prestige group, Solara Active Pharma Sciences LTD, Durga Motors company ಮುಂತಾದ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.
ಈ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ, ಕನ್ನಡ ಸಂಘ, ಯಕ್ಷಗಾನ ತರಬೇತಿ ಕೇಂದ್ರ ಮುಂತಾದ ಘಟಕಗಳು ತಲೆಯೆತ್ತಿವೆ. ಇದಲ್ಲದೆ ಈ ಸಂಸ್ಥೆಯಲ್ಲಿ ಉಪನ್ಯಾಸಕರು ಬೋಧನೆಯೊಂದಿಗೆ startup ಮತ್ತು ಬೇರೆ ಬೇರೆ ಕೈಗಾರಿಕೆಯ ಯೋಜನೆಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಅನುಭವವೂ ಸಿಗುವಂತಾಗಿದೆ.
ವಿದ್ಯಾರ್ಥಿಗಳು ಉದ್ಯಮಶೀಲತೆಯಲ್ಲಿ ಅಭಿವೃದ್ಧಿ ಪಡೆಯುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಮತ್ತು ದ್ವಿತೀಯ startup ಸಂಸ್ಥೆಗಳು ಸ್ವಸ್ತಿಕದ ಅಂಗಳದಲ್ಲಿ ಬೆಳೆಯುತ್ತಿವೆ. ನುರಿತ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಲಹೆಯೊಂದಿಗೆ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಾರೆ. ಸ್ವಸ್ತಿಕ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸ್ವಸ್ತಿಕ ಅಕೌಂಟ್ ಮ್ಯಾನೇಜ್ಮೆಂಟ್ ಅಂಡ್ ಮಾರ್ಕೆಟಿಂಗ್ ಸಂಸ್ಥೆಗಳು ತಮ್ಮದೇ ಆದ ಪ್ರತ್ಯೇಕ ಆಡಳಿತ ಕಚೇರಿಯನ್ನು ಕಾಲೇಜಿನ ಆವರಣದಲ್ಲಿ ಹೊಂದಿರುತ್ತವೆ.
'ಯುವಕರಲ್ಲಿನ ಸಾಮರ್ಥ್ಯವನ್ನು ನಂಬಿ, ಅನ್ವೇಷಣೆ ಮತ್ತು ಪೋಷಿಸುವುದರ ಮೇಲೆ ನಾವು ನಂಬಿಕೆ ಇರಿಸಿದ್ದೇವೆ' ಎನ್ನುತ್ತಾರೆ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರಾದ ಡಾ. ರಾಘವೇಂದ್ರ ಹೊಳ್ಳ ಅವರು. ಇವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ತಮ್ಮ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿ ಆರು ವರ್ಷಗಳ ಕಾಲ ನಿರ್ವಹಿಸಿ, ನಂತರ ಮಂಗಳೂರು ವಿಶೇಷ ಆರ್ಥಿಕ ವಲಯದ (ಎಸ್ಇಝಡ್) ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಸ್ವಸ್ತಿಕ ಕನ್ಸಲ್ಟೆನ್ಸಿ ಸರ್ವೀಸಸ್ ನ COO ಆಗಿರುತ್ತಾರೆ. ಅಲ್ಲದೆ, MSW, MBA, PCDPR ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ PHD ಪದವಿಯನ್ನು ಪಡೆದಿರುತ್ತಾರೆ. JCI India ಇದರ ರಾಷ್ಟ್ರೀಯ ತರಬೇತುದಾರರಾದ ಇವರು 500 ಕ್ಕೂ ಹೆಚ್ಚು ತರಬೇತಿಯನ್ನು ನೀಡಿರುತ್ತಾರೆ. ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಆಗಬೇಕಾದ ಮಾರ್ಪಾಡುಗಳ ಬಗ್ಗೆ ಅಧ್ಯಯನ ನಡೆಸಿದ ಬಳಿಕ ತಮ್ಮ ಕನಸಿನ ಕೂಸಾದ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು.
ಕಲಿಕೆಯ ಸಂದರ್ಭದಲ್ಲೇ ಗಳಿಕೆಯ ಅವಕಾಶವನ್ನೂ ಪಡೆಯುವುದಕ್ಕಾಗಿ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಸೇರಲು ಇಚ್ಚಿಸುವ ವಿದ್ಯಾರ್ಥಿಗಳು ಮುಖತಃ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. ಸಂಪರ್ಕ ಸಂಖ್ಯೆ: 9901326167/ www.swastikanationalschool.edu.in
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ