ಡಾ. ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆಯಲ್ಲಿ ಮಂಗಳೂರಿನ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ರಚನೆ

Upayuktha
0



ಮಂಗಳೂರು: ಮಾತಾ ಅಮೃತಾನಂದಮಯಿ ಸೇವಾ ಸಮಿತಿಗೆ 2022-24 ನೆಯ ಸಾಲಿಗೆ‌ ಮಠಾಧಿಪತಿಗಳಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಮಾರ್ಗದರ್ಶನದಲ್ಲಿ 2022- 24ನೇ ಸಾಲಿಗೆ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ.


ಮಠವು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜಿಲ್ಲೆಯಲ್ಲಿ ಮಾತಾ ಅಮೃತಾನಂದಮಯಿ ದೇವಿಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸ್ವಚ್ಛಭಾರತ, ಉಚಿತ ವೈದ್ಯಕೀಯ ಶಿಬಿರಗಳು, ಮಹಿಳೆಯರ ಬದುಕಿಗೆ ಸ್ವಾವಲಂಬಿ ಯೋಜನೆಗಳಲ್ಲದೆ ಹಲವು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಡಾ.ಜೀವರಾಜ್ ಸೊರಕೆ ಪ್ರಥಮ ಉದ್ಘೋಷಿತ ಅಧ್ಯಕ್ಷರಾಗಿದ್ದು ಆನಂತರ ಪ್ರತೀ ಎರಡು ವರ್ಷಗಳಿಗೊಮ್ಮೆ ಹೊಸ ಸಮಿತಿ ಅಸ್ತಿತ್ವಕ್ಕೆ ಬರುತ್ತಿದೆ.


ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಸಮಿತಿಯ ಅಧ್ಯಕ್ಷರಾಗಿ ಡಾ.ವಸಂತ ಕುಮಾರ್ ಪೆರ್ಲ ಕಾರ್ಯ ನಿರ್ವಹಿಸುವರು. ಡಾ. ಪೆರ್ಲ ಅವರಿಗೆ ಅಧ್ಯಕ್ಷರಾಗಿ ಇದು ಎರಡನೇ ಅವಧಿಯಾಗಿದೆ. ಉಪಾಧ್ಯಕ್ಷರುಗಳಾಗಿ ಡಾ. ಎಸ್.ಎ. ಪ್ರಭಾಕರ ಶರ್ಮ ಹಾಗೂ ಸುರೇಶ್ ಅಮಿನ್, ಕಾರ್ಯದರ್ಶಿಯಾಗಿ ಡಾ.ಅಶೋಕ ಶೆಣೈ, ಜೊತೆ ಕಾರ್ಯದರ್ಶಿಯಾಗಿ ಕೆ. ಸದಾಶಿವ ಭಟ್ ಆಯ್ಕೆಯಾಗಿದ್ದಾರೆ.


ಕೋಶಾಧಿಕಾರಿಯಾಗಿ ಸಿಎ.ಯು. ರಮಾನಾಥ್ ನಾಯಕ್, ಜೊತೆ ಕೋಶಾಧಿಕಾರಿಯಾಗಿ ಶ್ರೀಮತಿ ಶಿಲ್ಪಾ ರೈ ಆಯ್ಕೆಯಾಗಿದ್ದಾರೆ. ಗಿರೀಶ್ ರೇವಣ್ಕರ್, ನಿರಂಜನ ಅಡ್ಯಂತಾಯ, ಭರತ್ ಕುಮಾರ್ ಎರ್ಮಾಳು, ಹರಿಶ್ಚಂದ್ರ, ಪ್ರವೀಣ್ ಶಬರೀಶ್, ಸಿದ್ಧಾರ್ಥ ವಸಾನಿ ಮತ್ತು ಕೃತಿನ್ ಶೆಟ್ಟಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top