ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ‘ಮಾನವನ ಆರೋಗ್ಯದಲ್ಲಿ ಡಿಎನ್ಎ ಹಾನಿ ಮತ್ತು ದುರಸ್ತಿ, ಭಾರತೀಯ ಸನ್ನಿವೇಶದಲ್ಲಿ ವೈಜ್ಞಾನಿಕ ಪ್ರಗತಿʼ ಎಂಬ ಒಂದು ದಿನದ ಅಂತಾರಾಷ್ಟ್ರೀಯ ಉಪನ್ಯಾಸ ಕಾರ್ಯಾಗಾರದ ಉದ್ಘಾಟನೆ ವಿವಿಯ ಮಂಗಳಾ ಸಭಾಂಗಣದಲ್ಲಿ ಜುಲೈ 25 ರಂದು (ಸೋಮವಾರ) ಬೆಳಗ್ಗೆ 9.30 ಕ್ಕೆ ನಡೆಯಲಿದೆ.
ಅಮೆರಿಕಾದ ಟೆಕ್ಸಾಸ್ನ ಹೂಸ್ಟನ್ ವಿಧಿವಿಜ್ಞಾನ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ. ಮುರಳೀಧರ ಎಲ್. ಹೆಗ್ಡೆ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ವಿಜಯವಾಡದ ಕೆ ಎಲ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪ್ರೊ-ಚಾನ್ಸಲರ್ ಆಗಿರುವ ಡಾ. ಕೆ ಎಸ್ ಜಗನ್ನಾಥ ರಾವ್ ಮುಖ್ಯ ಅತಿಥಿಯಾಗಿರಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಡಾ. ಮುರಳೀಧರ ಎಲ್. ಹೆಗ್ಡೆ ಮತ್ತು ಕೆ ಎಸ್ ಜಗನ್ನಾಥ ರಾವ್ ತಲಾ ಒಂದೊಂದು ಅವಧಿಯನ್ನು ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಬಳಿಕ ಜೈವಿಕ ವಿಜ್ಞಾನಕ್ಕೆ ಸಂಬಂಧಿಸಿದ ಅಂತರ್ಕಾಲೇಜು ಮಟ್ಟದ ಮತ್ತು ಅಂತರ್ ವಿಭಾಗೀಯ ಮಟ್ಟದ ಛಾಯಾಚಿತ್ರ ರಸಪ್ರಶ್ನೆ ನಡೆಯಲಿದೆ. ಸಾಂಸ್ಕೃತಿಕ ವೈವಿಧ್ಯವನ್ನೂ ಏರ್ಪಡಿಸಲಾಗಿದೆ, ಎಂದು ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಕ್ರಮ ಸಂಯೋಜಕ ಡಾ. ಮೊಹಮ್ಮದ್ ಎಸ್ ಮುಸ್ತಾಕ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ