ಪುತ್ತೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪುತ್ತೂರು ಘಟಕದ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ನಾಳೆ (ಜುಲೈ 3) ಚುನಾವಣೆ ನಡೆಯಲಿದೆ. ಒಟ್ಟು ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 14 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಒಟ್ಟು 171 ಮಂದಿ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲಾ ಹರಿಕಿರಣ, ಕಬಕ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಸತ್ಯಶಂಕರ ಎಂ., ಸರ್ವೆ ಸರಕಾರಿ ಪ್ರೌಢ ಶಾಲಾ ಉದಯ ಕುಮಾರ್, ಕೆಯ್ಯೂರು ಕೆ.ಪಿ.ಎಸ್‌ನ ಗಂಗಾಧರ ರೈ, ಮುಕ್ವೆ ಸರಕಾರಿ ಹಿ.ಪ್ರಾ ಶಾಲೆ ವಿಜಯಾ ಎಚ್.ಆರ್., ಪಟ್ಟೆ ಪ್ರತಿಭಾ ಪ್ರೌಢಶಾಲಾ ವಿಶ್ವನಾಥ, ಸುಳ್ಯಪದವು ಸರ್ವೋದಯ ಪ್ರೌಢಶಾಲಾ ಕರುಣಾಕರ, ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ಅಬ್ರಹಾಂ ಎಸ್.ಎ, ಕೆಯ್ಯೂರು ಕೆಪಿಎಸ್‌ನ ವಿಜ್ಞಾನ ಶಿಕ್ಷ ಕೆ.ಎಸ್ ವಿನೋದರ ಕುಮಾರ್, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಆಂಗ್ಲ ಭಾಷಾ ಶಿಕ್ಷಕ ವಿಜಯ ಕುಮಾರ್ ನಾಯ್ಕ್, ಕುಂಬ್ರ ಕೆಪಿಎಸ್‌ನ ಗಣಿತ ಶಿಕ್ಷಕಿ ಮಮತಾ ಕೆ.ಎಸ್. ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಶ್ಯಾಮಲಾ, ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ಕನ್ನಡ ಶಿಕ್ಷಕ ನಾರಾಯಣ ನಾಯ್ಕ, ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ ಕಣದಲ್ಲಿದ್ದಾರೆ.
ತಾಲೂಕಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸಹ ಶಿಕ್ಷಕರು ಈ ಚುನಾವಣೆಯ ಮತದಾರರಾಗಿರುತ್ತಾರೆ.
ಮತದಾನ ಪ್ರಕ್ರಿಯೆಗಳು ನಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ. 4.90ಕ್ಕೆ ಮತ ಎಣಿಕ ಕಾರ್ಯ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ.ಯವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಡಬದಲ್ಲಿ ಅವಿರೋಧ ಆಯ್ಕೆ:
ಈ ಹಿಂದೆ ಪುತ್ತೂರು ಹಾಗೂ ಕಡಬ ಸೇರಿದಂತೆ ಪುತ್ತೂರು ತಾಲೂಕು ಸಂಘ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಒಟ್ಟು 11 ನಿರ್ದೇಶಕ ಸ್ಥಾನಗಳಿದ್ದವು. ಇದೀಗ ಕಡಬ ತಾಲೂಕು ಪ್ರತ್ಯೇಕಗೊಂಡಿದ್ದು 4 ಸ್ಥಾನ ಕಡಬ ತಾಲೂಕು ಹಾಗೂ 7 ಸ್ಥಾನ ಪುತ್ತೂರು ತಾಲೂಕಿಗೆ ಸೀಮಿತವಾಗಿದೆ. ಕಡಬ ತಾಲೂಕಿನಲ್ಲಿ ನಾಲ್ಕು ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಶಾಂತಾರಾಮ ಓಡ್ಗ, ದೇವಿಪ್ರಸಾದ್, ಸತ್ಯನಾರಾಯಣ ಹಾಗೂ ಶ್ರೀಲತಾರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ