||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಾಳ್ಮೆಗೆ ತಪಸ್ಸಿನ ಫಲವಿದೆ: ರಾಘವೇಶ್ವರ ಶ್ರೀ

ತಾಳ್ಮೆಗೆ ತಪಸ್ಸಿನ ಫಲವಿದೆ: ರಾಘವೇಶ್ವರ ಶ್ರೀ


ಗೋಕರ್ಣ: ತಾಳ್ಮೆಗೆ ತಪಸ್ಸಿನ ಫಲ ಇದೆ. ತಾಳ್ಮೆ ಕಳೆದುಕೊಂಡರೆ ಅದರಿಂದ ಅನಾಹುತವಾಗುತ್ತದೆ. ಆತುರ, ಆತಂಕ, ಉದ್ವೇಗ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ದುಡುಕಿ, ಅವಸರದಲ್ಲಿ ಕಾರ್ಯಗಳನ್ನು ಮಾಡಿದಾಗ ವಿಚಾರಕ್ಕೆ ಅವಕಾಶವಾಗದೇ ಅನಾಹುಗಳು ಸಂಭವಿಸುತ್ತವೆ. ಸಮರ್ಪಕತೆ ಹಾಗೂ ವೇಗ ಬರುವುದು ನಿಧಾನದ ಅಭ್ಯಾಸದಿಂದ. ತಾಳ್ಮೆಯ ಮಹತ್ವ ಇದು ಎಂದು ಬಣ್ಣಿಸಿದರು. ನಿರುದ್ವೇಗ, ನಿರಾತಂಕದಿಂದ ಕಾರ್ಯವನ್ನು ಮಾಡಿದಾಗ ಅದು ಉತ್ತಮ ಫಲ ನೀಡುತ್ತದೆ. ವೇಗ ಬರುವುದೂ ತಾಳ್ಮೆಯ ಮೂಲಕ. ತಾಳ್ಮೆಯ ಮೂಲಕ ಬಂದ ವೇಗ ಸಮರ್ಪಕತೆಗೆ ಕಾರಣವಾಗುತ್ತದೆ ಎಂದರು.


ಕಲಿಕೆಗೆ ತಾಳ್ಮೆ ಮುಖ್ಯ. ಯಾವುದನ್ನೇ ಕಲಿಯುವ ಮುನ್ನ ತಾಳ್ಮೆ ಕಲಿಯಬೇಕು. ತಾಳ್ಮೆಯ ಬದಲು ಅವಸರ ನಮ್ಮಲ್ಲಿ ಅನಗತ್ಯ ಆತಂಕವನ್ನು ಉಂಟು ಮಾಡುತ್ತದೆ. ಇದರ ಪರಿಣಾಮ ಒತ್ತಡ. ಒತ್ತಡದ ಪರಿಣಾಮ ಗ್ರಹಿಕೆಯ ಶಕ್ತಿಯನ್ನು ಬುದ್ಧಿ ಕಳೆದುಕೊಳ್ಳುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.


ಮನಸ್ಸಿಗೆ ಸಮಾಧಾನ, ವ್ಯವದಾನ ಇಲ್ಲದೇ ಯಾವ ಸಾಧನೆಯೂ ಇಲ್ಲ. ಸಮಾಧಾನ ಕಡಿಮೆಯಾಗಿ ಅವಸರ ಹೆಚ್ಚಿದಾಗ ಅನಾಹುತಗಳು ಹೆಚ್ಚುತ್ತವೆ. ಎಲ್ಲವೂ ಬೇಕಾಗುವ ಸಮಯದಲ್ಲಿ ಆಗಬೇಕು ಎಂಬ ಧಾವಂತದಲ್ಲಿ ಇಂದು ನಾವಿದ್ದೇವೆ. ಧಾವಂತದ ಬದುಕಿನಿಂದ ಅಕಾಲಿಕ ಮುಪ್ಪಿನಂಥ ಅಡ್ಡ ಪರಿಣಾಮಗಳೂ ಎದುರಾಗುತ್ತವೆ ಎಂದರು.


ಧಾವಂತದ ಬದುಕಿನ ದುಷ್ಪರಿಣಾಮವನ್ನು ಅರಿಯದೇ ನಾವು ಆ ಬದುಕಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಆಯಾ ಕಾರ್ಯಕ್ಕೆ ಅಗತ್ಯ ಸಮಯವನ್ನು ವಿನಿಯೋಗಿಸಿದಾಗ ಮಾತ್ರ ಸೂಕ್ತ ಫಲ ದೊರಕುತ್ತದೆ. ಸಮಾಧಾನವನ್ನು, ಅವಸರವಿಲ್ಲದ ಬದುಕನ್ನು ನಾವು ರೂಢಿಸಿಕೊಳ್ಳವೇಕು ಎಂದು ಸೂಚಿಸಿದರು.


ಇಂದಿನ ಜೀವನದಲ್ಲಿ ವೇಗ ಕಡಿಮೆಯಾಗುವ ಸಾಧ್ಯತೆ ಕಡಿಮೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ತಾಳ್ಮೆ ವಹಿಸಿದಾಗ, ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ತಾಳ್ಮೆಯೊಂದು ಬದುಕಿನಲ್ಲಿ ದೊರಕಿದರೆ ಉಳಿದೆಲ್ಲವೂ ಸಿಗುತ್ತದೆ ಎಂದು ವಿಶ್ಲೇಷಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post