|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಮಚಂದ್ರಾಪುರ ಮಠದಿಂದ ಗೋಮಯ ಕಾಗದ ಲೋಕಾರ್ಪಣೆ

ರಾಮಚಂದ್ರಾಪುರ ಮಠದಿಂದ ಗೋಮಯ ಕಾಗದ ಲೋಕಾರ್ಪಣೆ


ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡದ ವತಿಯಿಂದ ಗೋಮಯದಿಂದ ತಯಾರಿಸಿದ ಕಾಗದದ ಲೋಕಾರ್ಪಣೆಯನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವಶ್ವರಭಾರತೀ ಮಹಾಸ್ವಾಮೀಜಿ ಸೋಮವಾರ ನೆರವೇರಿಸಿದರು.


ಭಾರತೀಯ ಗೋತಳಿಯ ಸಂವರ್ಧನೆ, ಸಂರಕ್ಷóಣೆಯಲ್ಲಿ ತೊಡಗಿಸಿಕೊಂಡಿರುವ ಕಾಮದುಘಾ ವತಿಯಿಂದ ಗೋಮಯ ಕಾಗದ ತಯಾರಿಸಿರುವುದು ಅತ್ಯಂತ ಅರ್ಥಪೂರ್ಣ. ಶ್ರೀಮಠದಲ್ಲಿ ಇಂಥ ಪರಿಸರಸ್ನೇಹಿ ಕಾಗದದ ಬಳಕೆಯನ್ನು ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು.


ಇದು ರಾಸಾಯನಿಕ ಮುಕ್ತವಾಗಿರುವುದರಿಂದ ಪರಿಸರ ಸ್ನೇಹಿಯಾಗಿರುವುದು ಮಾತ್ರವಲ್ಲದೇ, ಗೋವಿನ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಮಹತ್ವದ ಅಂಶ ಎನಿಸಲಿದೆ. ಶ್ರೀಮಠದ ಭಕ್ತರು ಮತ್ತು ಸಾರ್ವಜನಿಕರು ಇಂಥ ಪ್ರಯೋಗಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶ್ರೀಗಳು ಆಶಿಸಿದರು.


ಸಂಪೂರ್ಣ ಪರಿಸರ ಸ್ನೇಹಿ, ರಾಸಾಯನಿಕ ರಹಿತ, ನೈಸರ್ಗಿಕವಾದ ಈ ವಿಶಿಷ್ಟ ಕಾಗದವನ್ನು ಶುದ್ಧ ದೇಸಿ ಗೋವಿನ ಸೆಗಣಿಯಿಂದ ತಯಾರಿಸಲಾಗಿದ್ದು, ಇದೇ ಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ಈ ಯೋಜನೆ ಬಗ್ಗೆ ವಿವರ ನೀಡಿದ ಕಾಮದುಘಾ ವಿಭಾಗದ ಡಾ.ವೈ.ವಿ.ಕೃಷ್ಣಮೂರ್ತಿ ವಿವರಿಸಿದರು.


ಸಾಮಾನ್ಯ ಕಾಗದ ಉತ್ಪಾದನೆಗೆ ಮರ ಹಾಗೂ ನೀರು ವ್ಯಾಪಕವಾಗಿ ಬಳಕೆಯಾಗುವುದರಿಂದ ಪರಿಸರಕ್ಕೆ ಇದು ದೊಡ್ಡ ಹೊರೆಯಾಗಿ ಪರಿಣಿಸುತ್ತಿದೆ. ವಿದೇಶಗಳಲ್ಲಿ ಇಂದು ಇಂಥ ಪರಿಸರ ಸ್ನೇಹಿ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ ಇದ್ದು, ನಾವೂ ಇದರ ಮಹತ್ವ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.


ಸಂಶೋಧನಾ ಖಂಡದ ಡಾ.ರವಿ ಪಾಂಡವಪುರ, ಲೋಕಸಂಪರ್ಕ ವಿಭಾಗದ ಶಿಶಿರ್ ಹೆಗಡೆ, ಮಾಧ್ಯಮ ವಿಭಾಗದ ಉದಯಶಂಕರ ಮಿತ್ತೂರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಗೋಮಯ ಕಾಗದದಲ್ಲಿ ಮುದ್ರಿಸಿದ ವಿವಾಹ ಆಮಂತ್ರಣವನ್ನೂ ಸ್ವಾಮೀಜಿ ಬಿಡುಗಡೆ ಮಾಡಿ ಇದು ಅನುಕರಣೀಯ ಎಂದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post