ಉಜಿರೆ: ಎಸ್‌ಡಿಎಂ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

Upayuktha
0

ಉಜಿರೆ: ಸೈನಿಕರೊಳಗೆ ಉತ್ಸಾಹ, ಛಲ ತುಂಬಲು ಇಂತಹ ವಿಜಯೋತ್ಸವಗಳನ್ನು ಆಚರಿಸಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ಪಿ. ಜಗನ್ನಾಥ ಶೆಟ್ಟಿ ಹೇಳಿದರು. 


ಉಜಿರೆಯ ಶ್ರೀ ಧ. ಮಂ ಕಾಲೇಜಿನ ಎನ್ಎಸ್ಎಸ್ ಘಟಕದ ನೇತೃತ್ವದಲ್ಲಿ ಎನ್.ಸಿ.ಸಿ ಸೇನೆ ಹಾಗೂ ನೌಕಾದಳ ಮತ್ತು ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿಗಳ ಸಹಯೋಗದೊಂದಿಗೆ ಆಚರಿಸಲಾದ ಕಾರ್ಗಿಲ್ ವಿಜಯೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು. 


ಎಷ್ಟೋ ಬಾರಿ ಸೈನಿಕರ ಸಾವು ವೈರಿಗಳಿಂದ ಸಂಭವಿಸಿದ್ದಾಗಿರುವುದಿಲ್ಲ ಬದಲಾಗಿ ಪ್ರಕೃತಿಯ ವೈಪರೀತ್ಯಗಳಿಂದಾಗುತ್ತದೆ. ಹಾಗಿದ್ದರೂ ಸೈನಿಕರು ಎದೆಗುಂದದೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ.  ಮಡಿದ ಸೈನಿಕರಿಗಾಗಿ ಮರುಗುವುದು ಬರೀ ಒಂದು ದಿನಕ್ಕಷ್ಟೇ ಸೀಮಿತವಾಗಬಾರದು, ಅದು ಪ್ರತಿದಿನದ ದಿನಚರಿಯಾಗಲಿ. ದಿನದ ಒಂದೈದು ನಿಮಿಷಗಳನ್ನಾದರೂ ನಮ್ಮ ಭಾರತೀಯ ಸೈನಿಕರಿಗಾಗಿ ಪ್ರಾರ್ಥಿಸಲು ನೀವು ಮೀಸಲಿಡಿ ಎಂದವರು ಕರೆ ನೀಡಿದರು.  


ದೇಶ ಮುಂದುವರೆಯಬೇಕಂದರೆ ದೇಶದ ಮೇಲಿನ ಪ್ರೀತಿ, ಭಕ್ತಿ ಮತ್ತು ತ್ಯಾಗ ಅತೀ ಮುಖ್ಯ ಎಂದರು. 


ಈ ಸಂದರ್ಭ ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಗಿಲ್ ವಿಜಯೋತ್ಸವಕ್ಕೆ ಸಂಬಂಧಪಟ್ಟ ಭಿತ್ತಿ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಎನ್ ಉದಯಚಂದ್ರ, ಉಪ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ, ಎನ್.ಎಸ್.ಎಸ್ ನ ಯೋಜನಾಧಿಕಾರಿಗಳು, ಎನ್.ಸಿ.ಸಿ ಅಧಿಕಾರಿಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿಯ ಸಂಯೋಜಕರು, ಇತರ ಉಪನ್ಯಾಸಕರು ಉಪಸ್ಥಿತರಿದ್ದರು.


ಎನ್.ಎಸ್.ಎಸ್ ನ ಸ್ವಯಂಸೇವಕರು ಹಾಗೂ ಎನ್.ಸಿ.ಸಿ ಸೇನೆ ಮತ್ತು ನೌಕಾದಳದ ಕೆಡೆಟ್ ಗಳು ಇತರ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕಿ ರಾಜೇಶ್ವರಿ ಸ್ವಾಗತಿಸಿ, ನಿರೂಪಿಸಿದರೆ ಎನ್.ಸಿ.ಸಿ ಕೆಡೆಟ್ ಪ್ರತಿಮಾ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top