ಡಾ. ಸುವರ್ಣ ಮೋಹನ್ ತಂಡದಿಂದ ಪಾಂಡುರಂಗನ ಸನ್ನಿಧಿಯಲ್ಲಿ ಭಜನಾ ಗೋಷ್ಠಿ

Upayuktha
0

ಬೆಂಗಳೂರು: ಮೈಸೂರು ಸಮೀಪದ ಮಂಟಿ ಗ್ರಾಮದ ದಕ್ಷಿಣ ಕಾನಡ ವಿಠಲ ಧ್ಯಾನ ಮಂದಿರದ ರುಕ್ಮಿಣಿ ಸಹಿತ ಶ್ರೀ ಪಾಂಡುರಂಗ ವಿಠಲನ ಸನ್ನಿಧಿಯಲ್ಲಿ ಬೆಂಗಳೂರಿನ ಶ್ರೀಪುರಂದರ ಇಂಟರ್ನ್ಯಾಷನಲ್ ಟ್ರಸ್ಟ ಸದಸ್ಯರು ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು.


ಗುರು ಡಾ .ಸುವರ್ಣ ಮೋಹನ್ ನೇತೃತ್ವದಲ್ಲಿ ನಡೆದ ಭಜನಾ ಗೋಷ್ಠಿಯಲ್ಲಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.


ವಿಠ್ಠಲ ಸೇವಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಹರಿದಾಸ ಸೇವಕ ಸುಬ್ಬರಾವ್ ದಾಸರು, ನಿವೃತ್ತ ಪ್ರಾಚಾರ್ಯ ಎನ್. ಮೋಹನ್ ರವರು ತಂಡದ ಸದಸ್ಯರನ್ನು ಗೌರವಿಸಿದರು.


ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್ ನ ನಿರ್ದೇಶಕರಾದ ಕೆ. ಅಪ್ಪಣ್ಣಚಾರ್ ಮಾರ್ಗದರ್ಶನದಲ್ಲಿ ಭಜನಾ  ಸಮಾವೇಶದ ರೂವಾರಿ ಸುಬ್ಬರಾವ್ ದಾಸರ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆಗೊಂಡಿರುವ ಭವ್ಯ ಆಲಯದಲ್ಲಿ ಪ್ರತಿನಿತ್ಯ ಹರಿನಾಮ ಸಂಕೀರ್ತನೆ, ಭಜನಾ ಕಮ್ಮಟ ನಡೆಯುತ್ತದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top