|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಂದಿನ 20-30 ವರ್ಷಗಳು ಮೆದುಳಿನ ಸಂಶೋಧನೆಯ ಯುಗ: ಡಾ. ಮುರಳೀಧರ ಎಲ್. ಹೆಗ್ಡೆ

ಮುಂದಿನ 20-30 ವರ್ಷಗಳು ಮೆದುಳಿನ ಸಂಶೋಧನೆಯ ಯುಗ: ಡಾ. ಮುರಳೀಧರ ಎಲ್. ಹೆಗ್ಡೆ

ಮಂಗಳೂರು ವಿವಿಯಲ್ಲಿ ಡಿಎನ್ಎ ಹಾನಿ, ದುರಸ್ತಿ, ಮತ್ತು ಆರೋಗ್ಯ ಕುರಿತು ಅಂತಾರಾಷ್ಟ್ರೀಯ ಕಾರ್ಯಾಗಾರ


ಮಂಗಳೂರು: ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು ಸೋಮವಾರ ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಲ್ಲಿ ‘ಮಾನವನ ಆರೋಗ್ಯದಲ್ಲಿ ಡಿಎನ್ಎ ಹಾನಿ ಮತ್ತು ದುರಸ್ತಿ, ಭಾರತೀಯ ಸನ್ನಿವೇಶದಲ್ಲಿ ವೈಜ್ಞಾನಿಕ ಪ್ರಗತಿʼ ಎಂಬ ಕುರಿತು ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.


ತಮ್ಮ ಉದ್ಘಾಟನಾ ಭಾಷಣದಲ್ಲಿ, ಟೆಕ್ಸಾಸ್ ಹೂಸ್ಟನ್ ಮೆಥೋಡಿಸ್ಟ್ ಸಂಶೋಧನಾ ಸಂಸ್ಥೆಯ  (ಯುಎಸ್ಎ), ಡಿಎನ್ಎ ದುರಸ್ತಿ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಮುರಳೀಧರ ಎಲ್. ಹೆಗ್ಡೆ ಅವರು ಡಿಎನ್ಎ ಹಾನಿಯ ಕಾರಣಗಳು ಮತ್ತು ಮಾನವನ ಆರೋಗ್ಯದ ಮೇಲೆ ಅದರ ಪರಿಣಾಮವನ್ನು ವಿವರಿಸಿದರು. "ಡಿಎನ್ಎ ದುರಸ್ತಿ ಕಾರ್ಯವಿಧಾನಗಳ ಹೊಸ ಯುಗ- ವಯಸ್ಸಾದ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಸೂಕ್ತ ಚಿಕಿತ್ಸೆ- ಮಿದುಳಿನ ಆರೋಗ್ಯ" ಕುರಿತ ತಮ್ಮ ವಿಶೇಷ ಉಪನ್ಯಾಸದಲ್ಲಿ ಅವರು, "ಮುಂದಿನ 20-30 ವರ್ಷಗಳು ಮೆದುಳಿನ ಸಂಶೋಧನೆಯ ಯುಗವಾಗಲಿವೆ" ಎಂದು ವಿಶ್ಲೇಷಿಸಿದರು.


ವಿಜಯವಾಡ ಕೆಎಲ್ ಡೀಮ್ಡ್ ವಿಶ್ವವಿದ್ಯಾನಿಲಯದ ಪ್ರೊ-ಚಾನ್ಸಲರ್ ಡಾ. ಕೆ.ಎಸ್. ಜಗನ್ನಾಥ ರಾವ್, ತಮ್ಮ ವರ್ಚುವಲ್ ಭಾಷಣದಲ್ಲಿ, ಅವರು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಕಾರಣಗಳು ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ವಿವರಿಸಿದರು. ಈ ಕ್ಷೇತ್ರದಲ್ಲಿ ಭಾರತೀಯ ಸಂಶೋಧಕರ ಕೊಡುಗೆಯನ್ನು ಶ್ಲಾಘಿಸಿದ ಅವರು, ಒತ್ತಡ ನಿರ್ವಹಣೆ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡರು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಹಕಾರಿ ಸಂಶೋಧನೆ, ಪೇಟೆಂಟ್, ಜೀನೋಮ್ ಅಸ್ಥಿರತೆ ಮತ್ತು ಇಂದಿನ ಜೀವನದ ಮಹತ್ವವನ್ನು ಒತ್ತಿ ಹೇಳಿದರು. "ಮಾನವ ವ್ಯವಸ್ಥೆಯ ಮುನ್ಸೂಚಕ, ತಡೆಗಟ್ಟುವ ಮತ್ತು ರಕ್ಷಣಾತ್ಮಕ ನಿರ್ವಹಣೆ ಮುಖ್ಯವಾಗಿದೆ" ಎಂದರು. ಇದೇ ವೇಳೆ ಕುಲಪತಿಗಳು ಕ್ಯಾಂಪಸ್ ವನ್ಯಜೀವಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು.


ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಮುಷ್ತಾಕ್ ಅತಿಥಿಗಳನ್ನು ಸ್ವಾಗತಿಸಿ, ಡಿಎನ್ಎ ಹಾನಿ ವಿಷಯದ ಮಹತ್ವ ಮತ್ತು ಅದರ ಪ್ರಸ್ತುತತೆ ಕುರಿತು ಮಾತನಾಡಿದರು. ಪ್ರೊ.ಡಾ.ಕೆ.ಭಾಸ್ಕರ ಶೆಣೈ ವಂದಿಸಿದರು. ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿಗಳಾದ ನಮಿತಾ ವಿಟ್ಲ, ಶಮ್ನಾ ಮೊಯ್ದೀನ್ ಕಾರ್ಯಕ್ರಮ ನಿರೂಪಿಸಿದರು. 


ಮಧ್ಯಾಹ್ನದ ಅವಧಿಯಲ್ಲಿ ಜೈವಿಕ ವಿಜ್ಞಾನಗಳ ಕುರಿತು ಅಂತರ ಕಾಲೇಜು ಮತ್ತು ಅಂತರ ವಿಭಾಗೀಯ ಮಟ್ಟದ ಫೋಟೋ ರಸಪ್ರಶ್ನೆ ನಡೆಸಲಾಯಿತು. ವಿವಿಧ ಕಾಲೇಜುಗಳು ಮತ್ತು ವಿಭಾಗಗಳ 26 ತಂಡಗಳು ಭಾಗವಹಿಸಿದ್ದವು. ಎಂಎಸ್ಸಿ ವಿದ್ಯಾರ್ಥಿ ಕೀತ್ ಕ್ವಿಜ್ ಮಾಸ್ಟರ್ ಆಗಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم