
ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬರೆದ ಅಂಕಣ ಬರಹಗಳ ಸಂಕಲನ ಸುದ್ದಿಮನೆ ಕತೆ, ಇದೇ ಅಂತರಂಗ ಸುದ್ದಿ ಮತ್ತು ನೂರೆಂಟು ವಿಶ್ವ ಮತ್ತು ಕಿರಣ್ ಉಪಾಧ್ಯಾಯ ಅವರು ಬರೆದ ವಿಶ್ವತೋಮುಖ- ಈ ನಾಲ್ಕು ಪುಸ್ತಕಗಳು ಕನ್ನಡ ಸಾರಸ್ವತ ಲೋಕಕ್ಕೆ ಜುಲೈ 22ರಂದು ಶುಕ್ರವಾರ ಅರ್ಪಣೆಗೊಳ್ಳಲಿವೆ.
ಜಯನಗರದ ಯುವಪಥ- ವಿವೇಕ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ಜರಗಲಿರುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಹೆಸರಾಂತ ಚಿಂತಕರು, ಕಾದಂಬರಿಕಾರರಾದ ಎಸ್.ಎಲ್ ಭೈರಪ್ಪ ಅವರು ಪುಸ್ತಕಗಳ ಬಿಡುಗಡೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಮತ್ತು ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ ಅವರು ಪಾಲ್ಗೊಳ್ಳಲಿದ್ದಾರೆ.
ವಿಕಿಬುಕ್ಸ್- ಸ್ಮಾರ್ಟ್ ಕೀ (ಶಿರಸಿ- ಬಹರೇನ್) ಮತ್ತು ಬೆಂಗಳೂರಿನ 'ವಿಶ್ವವಾಣಿ ಪುಸ್ತಕ' ಈ ಕೃತಿಗಳ ಪ್ರಕಾಶಕರು.
ರೂಪಾ ಗುರುರಾಜ್ ಅವರ ಸುಂದರ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ