ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ: ಡಾ. ಗಣೇಶ್ ಅಮೀನ್ ಸಂಕಮಾರ್

Upayuktha
0

ಮಂಗಳೂರು: ಗುರುಪೂರ್ಣಿಮೆಯ ಮೂಲತತ್ವ ಬೌದ್ಧಿಕ ವಿಕಾಸ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರ ಮಂಗಳೂರು ಯೂನಿವರ್ಸಿಟಿಯ ನಿರ್ದೇಶಕ ತುಳು ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ನುಡಿದರು.


ಅವರು ಭರತಾಂಜಲಿ ರಿ ಕೊಟ್ಟಾರ ಮಂಗಳೂರು ಇವರು ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕಾಟಿಪಳ್ಳ ಇವರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗುರು ಪೂರ್ಣಿಮಾ ಉತ್ಸವ ಗುರುನಮನ ಮಾತಾಪಿತರ ಚರಣ ಪೂಜನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.


ವ್ಯಾಸಪೂರ್ಣಿಮೆ ಪುರಾಣ ಪರಂಪರೆಯ ಅಮೂಲ್ಯ ಸಂಪತ್ತನ್ನು ಆಧುನಿಕ ಕಾಲಕ್ಕೆ ನೀಡುವ ಬೌದ್ಧಿಕ ವಿಕಸನ ನಾಗರಿಕತೆಯ ಜೊತೆಯಲ್ಲಿ ವಿಜ್ಞಾನದ ಅವಿಸ್ಕಾರಗಳು ಅಗತ್ಯ ಆದರೆ ಅದು ಮಕ್ಕಳ ಮನಸ್ಸಿಗೆ ಚಿನ್ನದ ಚೂರಿಯಾಗಬಾರದು.


ಮಕ್ಕಳ ಮನಸ್ಸನ್ನು ಕಟ್ಟುವ ಅಮೂಲ್ಯ ಸಂಪತ್ತು ಸನಾತನ ಸಂಸ್ಕೃತಿಯ ಈ ಶ್ರೇಷ್ಠ ಕಲೆಯೇ ಭರತನಾಟ್ಯ. ಈ ಕಲೆಯನ್ನು ಅಭ್ಯಸಿಸುವ ಮಕ್ಕಳು ಯಾವತ್ತೂ ದಾರಿ ತಪ್ಪಲಾರರು. ಬದುಕನ್ನು ಸುಂದರವಾಗಿ ಕಟ್ಟಬಲ್ಲರು, ಕುಟುಂಬದ ಆದರ್ಶ ಮಕ್ಕಳಾಗಿ, ಸಮಾಜದ ದೊಡ್ಡ ಅಸ್ತಿಗಳಾಗಳು ಸಾಧ್ಯ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯನ್ನು ಸಂರಕ್ಷಿಸಲಾಗಿದೆ. ಈ ಪರಂಪರೆಯು ಭಾರತೀಯ ಸಂಸ್ಕೃತಿಯ ಭೂಷಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. 'ಗುರುಗಳ ಬಗ್ಗೆ ತಿಳಿದುಕೊಳ್ಳುವುದೇ' ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಮರ್ಮವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಜೀವನದಲ್ಲಿ ಪ್ರಥಮ ಗುರುವೇ ತಾಯಿ ಮತ್ತು ತಂದೆ. ಈ ನಿಟ್ಟಿನಲ್ಲಿ ಇಂದು ಭರತಾಂಜಲಿ ಸಂಸ್ಥೆಯು ಹಮ್ಮಿಕೊಂಡಿರುವ ಮಾತಾ ಪಿತರ ಚರಣ ಪೂಜನ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು ತಾನು ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ವಿಶಿಷ್ಟವಾದದ್ದು, ಮಾಡರಿಯಾದ ಕಾರ್ಯಕ್ರಮ ಎಂದು ಹರಸಿದರು.


ಗುರುನಮನ ಸ್ವೀಕರಿಸಿದ ವಿದುಷಿ ಸುಲೋಚನಾ ಭಟ್ ಸಂಧರ್ಭೋಚಿತ ಮಾತನಾಡಿದರು. ಕ್ಷೇತ್ರದ ಮಾಜಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿದ್ದು, ಮ.ನ.ಪಾ ಸದಸ್ಯ ಲೋಕೇಶ್ ಬೋಲ್ಲಾಜೆ ಅತಿಥಿಗಳಾಗಿ ಭಾಗವಹಿಸಿದ್ದರು. ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಶಿಕ್ಷಕಿ ಚೈತ್ರ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top