ಬೆಂಗಳೂರಿನಲ್ಲಿ ಕಲಾ ಉತ್ಸವ-2022: ಕಲಾದರ್ಶಿನಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ

Upayuktha
0

ಬೆಂಗಳೂರು: ಬೆಂಗಳೂರಿನ ಕರ್ನಾಟಕ ಕಲಾ ದರ್ಶಿನಿ ಸಂಸ್ಥೆಯಿಂದ 'ಕಲಾ ಉತ್ಸವ-2022' ಕಾರ್ಯಕ್ರಮ ಭಾನುವಾರ, ಬೆಂಗಳೂರಿನ ಉದಯಬಾನು ಕಲಾ ಸಂಘದಲ್ಲಿ ನಡೆಯಿತು. ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಎಂ. ಆರ್ ಸತ್ಯನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸರಾದ ಡಾ. ಆನಂದರಾಮ ಉಪಾಧ್ಯಾಯ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಮೇಶ್ ಬೇಗಾರ್, ಯಕ್ಷಗಾನ ಕಲಾವಿದರಾದ ಮಟ್ಟಿ ರಾಮಚಂದ್ರ ರಾವ್ ಉಪಸ್ಥಿತರಿದ್ದರು. ಕರ್ನಾಟಕ ಕಲಾ ದರ್ಶಿನಿ ತಂಡದ ಸ್ಥಾಪಕರಾದ ಯಕ್ಷಗಾನ ಗುರು ಶ್ರೀನಿವಾಸ ಸಾಸ್ತಾನ ಸ್ವಾಗತಿಸಿ, ಚೈತ್ರ ರಾಜೇಶ್ ಕೋಟ & ಸುಪ್ರೀತಾ ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು.


ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಕ್ಷಗಾನ ರಸಪ್ರಶ್ನೆ, ಕಲಾ ಕುಟೀರ ಹಾಗೂ ವೇದಾಂತ ಮಾಲಾ ಕಲಾ ಕುಟೀರ ಕಲಾವಿದರಿಂದ ಭರತನಾಟ್ಯ, ಇಂಪಿನ ಗುಂಪು ಕಲಾವಿದರಿಂದ ಸುಗಮ ಸಂಗೀತ, ಡಾ. ಸುಪ್ರೀತ ಗೌತಮ್ ತಂಡದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ, ಪ್ರಸಿದ್ದ ಕಲಾವಿದರಿಂದ 'ಕೃಷ್ಣಾರ್ಜುನ ಕಾಳಗ' ಯಕ್ಷಗಾನ ಪ್ರಸಂಗ ನಡೆಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top