|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಪರಿಸರ ದಿನಾಚರಣೆ 2022: ಹಚ್ಚಹಸಿರಾಗಿಸೋಣ ಈ ವಸುಧೆಯ

ವಿಶ್ವ ಪರಿಸರ ದಿನಾಚರಣೆ 2022: ಹಚ್ಚಹಸಿರಾಗಿಸೋಣ ಈ ವಸುಧೆಯ



ನಮ್ಮ ದೇಶ, ನಮ್ಮ ಪರಿಸರ, ನಮ್ಮ ಮನೆ ಎಂಬ ತ್ರೀ ರತ್ನಗಳ ಮೇಲೆ ಸಹಜವಾಗಿ ಎಲ್ಲರಿಗೂ ಕಾಳಜಿ ಇದ್ದೇ ಇರುತ್ತದೆ.


ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಶಾಲವಾದ ಜಗತ್ತನ್ನು ಸೌಂದರ್ಯಯುತ ಶ್ರೀಮಂತಿಕೆವುಳ್ಳ ದೇಶವನ್ನಾಗಿ ಮಾಡುವ ಬರದಲ್ಲಿ ಪ್ರಕೃತಿಯನ್ನು ವಿಕೃತಿ ಗೊಳಿಸುತ್ತಾ ಮುಂದೆ ಸಾಗುತ್ತಿದ್ದೇವೆ. ಇಂದು ನಡೆಯುತ್ತಿರುವ ಅರಣ್ಯನಾಶದಿಂದ ಹಲವಾರು ಅನಾಹುತಗಳು ನಡೆಯುತ್ತಿರುವುದು ಕಣ್ಣಿಗೆ ಕಟ್ಟುವಂತಿದ್ದರೂ ತಾನಾಯಿತು, ತನ್ನದಾಯ್ತು ಎಂಬ ಭಾವನೆ ಇದೆಯೇ ಹೊರತು ತನಗೆ ಎದುರಾಗುವ ಸಮಸ್ಯೆ, ಮುಂದಿನ ಜನಾಂಗದ ಭವಿಷ್ಯದ  ಅರಿವಾಗುತ್ತಿಲ್ಲ ಏಕೆ?


ಬದಲಾವಣೆ ಜಗದ ನಿಯಮ ಎಂಬ ಮಾತಿನಂತೆ ನಮ್ಮ ದೇಶ ಅಭಿವೃದ್ಧಿ ಪಥದತ್ತ ತಲುಪುತ್ತಿದ್ದಂತೆ ಕೇವಲ ತಂತ್ರಜ್ಞಾನ, ಮಾನವನ ಜೀವನ ಶೈಲಿಯಲ್ಲಿ ಮಾತ್ರ ಬದಲಾವಣೆಯಾಗದೆ ಅದರ ಜೊತೆಗೆ ಮನುಷ್ಯನ ಬುದ್ಧಿಮಟ್ಟ ಬೆಳೆಯುತ್ತಿದ್ದಂತೆ ತನಗೆ ತೋಚಿದಂತೆ ಜಗತ್ತನ್ನು ಪರಿವರ್ತಿಸುತ್ತ ಮುಂದೆ ಹೆಜ್ಜೆ ಇಡುತ್ತಿದ್ದಾನೆ.

ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಈ ಜಗತ್ತು ಕಣ್ಮರೆಯಾಗಿ ಎಲ್ಲಿ ನೋಡಿದರಲ್ಲಿ ಬೃಹತಾಕಾರದ ಕಟ್ಟಡಗಳು ಎದ್ದುನಿಂತು ಗರ್ಜಿಸುತ್ತದೆ ಇವುಗಳ ಎದುರು ಗಿಡಮರಗಳು ಹುಲ್ಲುಗಳಂತೆ ಭಾಸವಾಗುತ್ತಿದೆ. ಹೊಗೆ ಧೂಳುಗಳಿಂದ ತುಂಬಿದ ಈ ವಾತಾವರಣ ಮನುಷ್ಯನ ವಿನಾಶವನ್ನು ಬಯಸುತ್ತಿದೆ ಹೊರತು ಪ್ರಗತಿಯನ್ನಲ್ಲ.


ಅದೇ ಶಾಲೆ ದಿನಗಳಲ್ಲಿ ಪರಿಸರ ದಿನ ಅಂದರೆ ಸಾಕು ಏನೋ ಒಂದು ಹಬ್ಬದ ಸಂಭ್ರಮ ಮನೆಯಿಂದ ಗಿಡಗಳನ್ನು ತೆಗೆದುಕೊಂಡುಹೋಗಿ ಶಾಲೆಗಳಲ್ಲಿ ವನ ಮಹೋತ್ಸವವನ್ನು ಆಚರಿಸುತ್ತಿದ್ದೆವು. ಶಾಲೆಗಳಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ಹಂಚುವುದರ ಮೂಲಕ ಗಿಡಮರಗಳ ಲಾಲನೆ-ಪಾಲನೆ ಮಾಡುವುದರ ಜೊತೆಗೆ ಮಹತ್ವವನ್ನು ತಿಳಿಸುತ್ತಿದ್ದರು. ಎಲ್ಲಾ ನಿಟ್ಟಿನಲ್ಲಿ ತನಗೆ ಅರಿವಿಲ್ಲದೆ  ಈ ಹಂತದಲ್ಲಿ ಎಲ್ಲರಲ್ಲೂ ಪರಿಸರದ ಮೇಲೆ ಕಾಳಜಿ ಮೂಡುತಿತ್ತು ಆದರೆ ಈಗಿನ ಯುಗದಲ್ಲಿ ಎಲ್ಲವೂ ಮಾಯವಾಗಿ ಜನರಿಗೆ ಪರಿಸರ ದಿನದ ತಿಳುವಳಿಕೆಯೇ ಇಲ್ಲದಂತಾಗಿದೆ.


ಆದರೆ ಪರಿಸರ ಮಾಲಿನ್ಯವನ್ನು ತಮಾಷೆಯಾಗಿ ಪರಿಗಣಿಸುವುದು ಬಹಳ ಅಪಾಯಕಾರಿ. ಕಾನನದ ನಾಶದಿಂದ ಇಡೀ ಜೀವ ಸಂಕುಲದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗಾಧವಾದ ಪರಿಣಾಮ ಬೀರುವುದರ  ಜೊತೆಗೆ ಮನುಕುಲದ ನಾಶವೇ ಎದುರಾಗಬಹುದು. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ದಿನದಲ್ಲಿ ಒಂದು ಗಿಡವನ್ನಾದರೂ ನೆಟ್ಟು ಪಾಲನೆ ಪೋಷಣೆ ಮಾಡಬೇಕು ಆಗ ಮಾತ್ರ ಮತ್ತೆ ಹಚ್ಚ ಹಸಿರು ಹೊದಿಕೆ ಹೊತ್ತ ವಸುಧೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯ.

-ಸೋನಿಕಾ ಪಾಣೆಮಂಗಳೂರು

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم