|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ- ಭಾಗ-6

ಕಿರು ಕಾದಂಬರಿ: ದೊಂಬಿ- ಭಾಗ-6



ಕೊಟ್ರ ಬಸಪ್ಪ ಈಗ ಬಹಳ ಅನ್ಯಮನಸ್ಕನಾಗಿದ್ದಾನೆ. ಕೆಲಸಕ್ಕೆ ಹೋಗುತ್ತಿಲ್ಲ. ಎದೆ ಅಸಾಧ್ಯ ನೋವೆಂದು ಹೇಳುತ್ತಿದ್ದ. ಔಷಧವನ್ನೂ ಸರಿಯಾಗಿ ತೆದುಕೊಳ್ಳುತ್ತಿರಲಿಲ್ಲ. ಮಾಲತಿಯನ್ನು ನೋಡಿದರೆ ವ್ಯಘ್ರನಾಗುತ್ತಿದ್ದ.  ಇಂತಹ ಪರಿಸ್ಥಿತಿಯೊಂದರಲ್ಲಿ ಬಸ್ಯ ಮಾಲತಿಗೆ ಹೊಡೆದು ಬುಧ್ಧಿ ಹೇಳಿದ್ದ, ತಂದೆಯ ಮಾತಿಗಾದರೂ ಬೆಲೆಕೊಡು ಎಂದು ವಿನಂತಿಮಾಡಿದರೆ ಅವಳು ಅದನ್ನು ಕಣ್ಣನಿಗೆ ಹೇಳಿ  ಕಣ್ಣ ಮತ್ತು ಬಸ್ಯ ಹೊಡೆದಾಡಿಕೊಂಡದ್ದೂ ಇದೆ. ಅಂದಿನಿಂದ ಬಸ್ಯನಿಗೆ ಕಣ್ಣನನ್ನು ಕಂಡರಾಗುತ್ತಿರಲಿಲ್ಲ.


ಇಂತಹ ಒಂದು ದಿನ ಕೊಟ್ರ ಬಸಪ್ಪ ತನ್ನ ಕೊನೆಯುಸಿರನ್ನು ಎಳೆದಿದ್ದ. ಇದೊಂದು ಕಮ್ಲಿ ಮತ್ತು ಬಸ್ಯನಿಗೆ ಬಹುದೊಡ್ಡ ಅಘಾತವಾಗಿದ್ದರೆ ಮಾಲತಿ ಮಾತ್ರ ತನ್ನೆದುರಿನ ದೊಡ್ಡ ಅಡ್ಡಿ ದೂರವಾಯಿತೆಂದು ಸಮಾಧಾನ ಪಟ್ಟಳು. ಅಂದರೆ ತಂದೆಯ ವಿರುಧ್ಧ ದ್ವೇಷವೆಂದಲ್ಲ. ಒಂದು ಕಡೆ ತಂದೆಯೆಂಬ ಸ್ಥಾನದ ಆಸ್ಥೆ ಮತ್ತೊಂದೆಡೆ ತನ್ನ ಮಾನಸಿಕ ಮತ್ತು ದೈಹಿಕ ಅಗತ್ಯಗಳ ತುಡಿತ ಈ ರೀತಿಯಾಗಿ ಅವಳ ಮನ ದ್ವಂದ್ವಕ್ಕೆ ಸಿಲುಕ್ಕಿದ್ದರೂ ತನ್ನ ಜೀವನ ಕಣ್ಣನ ಕೈಯಲ್ಲಿ ಬೆಳಗ ಬಲ್ಲುದು ಎಂದು ತಿಳಿದಿದ್ದಳು. ಈಗ ತನ್ನನ್ನು ವಿರೋಧಿಸುವವರು ಎಂದರೆ ಬಸ್ಯ ಅಂದರೆ ಅಣ್ಣ ಮಾತ್ರ  ತಾಯಿ ಕಮ್ಲಿ ಅಂತಹ ಪ್ರಮುಖ ನಿರ್ಧಾರ ತೆಗೆಯುವ ವ್ಯಕ್ತಿತ್ವವಲ್ಲವೆಂದು ಅವಳ ಅಂಬೋಣ. ಹೀಗಿರಲು ಒಂದು ದಿನ ಕಣ್ಣ ಮತ್ತು ಮಾಲತಿ ಒಂದು ದೇವಸ್ಥಾನದಲ್ಲಿ ಕಣ್ಣನ ಸ್ನೇಹಿತರ ಮತ್ತು ಕೆಲವು ಹಿರಿಯರ ಸಮಕ್ಷಮ ಒಂದು ದೇವಸ್ಥಾನದಲ್ಲಿ ಮದುವೆಯ ಶಾಸ್ತ್ರವನ್ನು ಮುಗಿಸಿ ಮೊದಲು ಕಮ್ಲಿಯ ಮನೆಗೆ ಬಂದಿದ್ದರು  ಆವಾಗಲೇ ಗೊತ್ತಾಗಿದ್ದು ಕಣ್ಣ ಮತ್ತು ಮಾಲಿ ಮದುವೆಯಾಗಿದ್ದಾರೆಂದು.  ಇದು ಕಮ್ಲಿಗೆ ಬಹಳ ದುಖ ತಂದಂತಹ ವಿಚಾರ. ಬರಿ ಕಣ್ಣೀರಿನಿಂದಲೇ ನೋಡಿದ್ದಳು ನವ ದಂಪತಿಗಳನ್ನು.  ಆ ದಂಪತಿಗಳು ಸಂಪ್ರದಾಯಕ್ಕೊ ಎಂಬಂತೆತಲೆಬಾಗಿ ಆಶೀರ್ವಾದಕ್ಕೆಂದು ನಿಂತರೆ ಕಮ್ಲಿಗೆ ಏನು ಮಾಡುವುವುದೆಂದು ತಿಳಿಯದೆ ದೂರವೇ ನಿಂತಿದ್ದಳು. ಬಸ್ಯ ಮಾತ್ರ ದೂರವೇ ನಿತ್ತು ಇಬ್ಬರನ್ನೂ ದುರುಗುಟ್ಟಿ ನೋಡುತ್ತಿದ್ದ. ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಕಣ್ಣ ತನ್ನ ಹೆಂಡತಿಯನ್ನು ಕರೆದುಕೊಂಡು ಸೇಲಂ ಗೆ ಹೊರಟುಹೋಗಿದ್ದ.


ಮಾಲತಿಯ ನಡತೆ ಮತ್ತು ಸ್ವಕಾರ್ಯ ಬಹಳ ಗಂಭೀರ ಪರಿಣಾಮ ಬೀರಿದ್ದೆಂದರೆ ಅದು ತಾಯಿ ಕಮ್ಲಿಯ ಮೇಲೆ. ಒಂದು ಕಡೆ  ತನ್ನ ಗಂಡನನ್ನು ಕಳೆದುಕೊಂಡು ಮತ್ತೊಂದು  ಕಡೆ ತನ್ನ ಮಗಳು ಮಾಲಿಯನ್ನು ಕಳೆದುಕೊಂಡುದುದು ಅವಳಿಗೆ ಬಹಳ ದು:ಖದ ಜೊತೆಗೆ ಜೀವನವೇ ಬೇಡವೆನ್ನುವಂತಹ ಮಟ್ಟಕ್ಕೆ ಬಂದಿದ್ದಳು ಅವಳು. ಕಣ್ಣ ಈಗ ತನ್ನ ಬೇಸರವನ್ನು ಕಳೆಯಲೆಂದು ಆವಾಗಾವಾಗ ಬಾರಿಗೆ ಹೋಗುತಿದ್ದ. ಅಲ್ಲಿ ಸ್ವಲ್ಪ ಕುಡಿದು ಬಂದರೆ ಅಮ್ಮ ಊಟ ಕೊಟ್ಟರೆ ಊಟ ಇಲ್ಲವೆಂದರೆ ಅದೂ ಇಲ್ಲ ಸುಮ್ಮನೆ ಹಾಗೆ ಮಲಗುತಿದ್ದ.  ಒಮ್ಮೊಮ್ಮೆ ಮನಸ್ಸಿನ ಭಾವನೆಗಳು ಬಡಿದೆದ್ದು ಬಂದರೆ ಅದೂ ನಿದ್ರೆ ಬಾರದ ಸಮಯದಲ್ಲಿ ಏನೇನೋ ಗುನುಗುತ್ತಿದ್ದ. ಅದೂ ಮಾಲತಿಗೆ ಬಯ್ಯುವುದು ಮತ್ತು ಕಣ್ಣನನ್ನು ಹೆದರಿಸುವಂತಹ ಮಾತುಗಳು. 


ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಬಸ್ಯ ದಿನವಿಡೀ ಕೂಲಿ ಮಾಡುತಿದ್ದ, ಸಂಜೆಯಾದರೆ ಸ್ವಲ್ಪ ಕುಡಿದು ಬರುತ್ತಿದ್ದ. ಹಾಗೆಯೆ ಮನೆಗೆ ಬೇಕಾದ ಸಾಮಾನೂ ತರುತ್ತಿದ್ದ. ಕಮ್ಲಿ ಕೆಲಸಕ್ಕೆ ಹೋದರೆ ಹೋದಳು ಇಲ್ಲವೆಂದರೆ ಅದೂ ಇಲ್ಲ. ಅಡಿಗೆ ಮಾಡಿದರೆ ಮಾಡಿದಳು ಇಲ್ಲವೆಂದರೆ ಅದೂ ಇಲ್ಲ. ಬಸ್ಯ ಬೆಳಗಿನ ಉಪಹಾರ ಮಾಡದಿದ್ದರೆ ಹೊರಗೆ ಹೋಟೆಲ್ ನಲ್ಲಿ ಮಾಡುತಿದ್ದ, ಮಧ್ಯಾಹ್ನದ ಊಟವನ್ನೂ ಹೊರಗೆ ಮಾಡಿ ರಾತ್ರಿ ಅಷ್ಟು ಕುಡಿದು ಬಂದರೆ ಅವನ ಆ ದಿನದ ಕಾಯಕ ಮುಗಿಯಿತು. ಅಮ್ಮ ನೀನು ಅಡಿಗೆ ಮಡಿದೆಯಾ ಊಟ ಮಾಡಿದೆಯಾ ಎಂದು ವಿಚಾರಿಸುತ್ತಿರಲಿಲ್ಲ. ಇದು ತಾಯಿಯ ಮೇಲೆ ಅಕ್ಕರೆ ಇಲ್ಲವೆಂದಲ್ಲ. ತಾಯಿಯೇ ಎಲ್ಲವನ್ನೂ ನಡೆಸಿಬರುತ್ತಿದ್ದುದರಿಂದ ಅವಳನ್ನು ವಿಚಾರಿಸುವ ಅಗತ್ಯ ಅವನಿಗೆ ಕಂಡು ಬರಲಿಲ್ಲ. ಅಲ್ಲದೆ ಅವನ ಮನಸ್ಸಿನಲ್ಲಿ ತಂದೆಯ ಮರಣ ಮತು ತಂಗಿ ಕಣ್ಣನನ್ನು ಹೇಳದೆ ಕೇಳದೆ ಮದುವೆಯಾಗಿ ಹೋಗಿದ್ದುದು ಅವನ ಸ್ವಭಾವಕ್ಕೆ ಬಿದ್ದ ದೊಡ್ಡ ಪೆಟ್ಟು. ಹಾಗೆಂದು ಅವನು  ತಾನಾಯಿತು ತನ್ನ ಕೆಲಸವಾಯಿತು ತನ್ನ ಕುಡಿತವಾಯಿತು ಎಂದು ಇದ್ದ.


ಕಮ್ಲಿಯ ಆರೋಗ್ಯ ಕೆಡುತ್ತ ಬಂದಿತು, ಏನು ಎಂದು ಯಾರಿಗೂ ಗೊತಾಗುತ್ತಿರಲಿಲ್ಲ. ಎರಡು ದಿನ ಸರಿಯಿದ್ದರೆ ಮತ್ತೆ ಮೂರು ದಿನ ಸರಿಯಿರುತ್ತಿರಲಿಲ್ಲ.  ಕೂಲಿಗೂ ಅಷ್ಟೆ ಒಂದು ದಿನ ಇದ್ದರೆ ಮತ್ತೊಂದು ದಿನ ಇಲ್ಲ. ಸ್ವಲ್ಪ ಸಮಯ ನೋಡಿದ ಮೇಸ್ತ್ರಿ ಆ ಬಳಿಕ ಸರಿಯಾಗಿ ದಿನವು ಕೆಲಸಕ್ಕೆ ಬರುವುದಿದ್ದರೆ ಬಾ ಇಲ್ಲವೆಂದರೆ ಬೇಡಾ ಎಂದು ಖಡಕ್ಕಾಗಿ ಹೇಳಿದ್ದರಿಂದ ಈಗ ಕೆಲಸಕ್ಕೆ ಹೋಗುತಿರಲಿಲ್ಲ. ಅವಳ ಮನೋವ್ಯಥೆ ಎಂದರೆ ಗಂಡ ಇಲ್ಲ, ಮಗಳು ಯಾರನ್ನೋ ಕಟ್ಟಿಕೊಂಡು ಹೋದಳು, ಇದ್ದರೂ ಇಲ್ಲದಂತೆ, ಮಗ ಅವನು ದಾರಿ ತಪ್ಪುತ್ತಿದ್ದಾನೆ. ನಾನು ಸತ್ತರೆ ಒಳ್ಳೆದೆಂದು ದಿನವೂ ತನ್ನ ಸಾವಿಗಾಗಿ ಪರಿತಪಿಸುತ್ತಿದ್ದಾಳೆ.


ಬಸ್ಯ ತನ್ನ ತಾಯಿಗೆ ಬೇಕಾದ ಔಷಧವನ್ನು ತರುತ್ತಾನೆ ಆದರೆ ಸರಿಯಾಗಿ ಊಟ ಮಾಡಿದಿಯೋ ಇಲ್ಲವೋ ಅವಳ ಬೇಕು ಬೇಡಗಳು ಯಾವುದು ಎಂದು ವಿಚಾರಿಸುತಿರಲಿಲ್ಲ. ಇದರಿಂದಾಗಿ ಬಹಳ ನೊಂದು ಕೊಂಡವಳು ಅವಳು. ಇಂತಹ ಒಂದು ದಿನ ಕಮ್ಲಿ ತನ್ನ ಇಹ ಜೀವನವನ್ನು ತ್ಯಜಿಸಿದ್ದಳು. ಬಸ್ಯನಿಗೆ ಏನು ಮಾಡುವುದೆಂದು ತಿಳಿಯದಾದ, ನೆರೆಹೊರೆಯವರು ಅವನಿಗೆ ಬೇಕಾದ ನೆರವು ಮತ್ತು ಸೂಕ್ತ ಮಾರ್ಗಾರ್ಶನವನ್ನು ಮಾಡಿದರು. ಕಲ್ಪಳ್ಳಿಯ ಸ್ಮಶಾನದಲ್ಲಿ ಅವಳ ದಫನವನ್ನು ಮಾಡುವ ಮುಂಚೆ ಮಾಲತಿಗೆ ವಿಷಯ ತಿಳಿಸುವ ಅವನ ಪ್ರಯತ್ನವು ಸಫಲವಾಗಲಿಲ್ಲ. ಅವರು ಬೆಂಗಳೂರಲ್ಲಿ ಇಲ್ಲ, ಕಣ್ಣ ಊರು ಸೇಲಂ ಗೆ ಹೋಗಿದ್ದಾರೆಂದು ಮಾತ್ರ ಗೊತ್ತು. ಅಂತು ತನ್ನ ತಾಯಿಯ ಸಾವಿನ ಸುದ್ದಿಯನ್ನು ಅವಳಿಗೆ ತಿಳಿಸಲಾಗಲಿಲ್ಲವೆಂಬ ದು:ಖ ಒಂದು ಕಡೆಯಾದರೆ, ಅವಳು ಮಗಳಂತೆ ನಡೆಯದಿದ್ದ ಮೇಲೆ ಅವಳಿಗೆ ಯಾಕೆ ತಿಳಿಸಬೇಕೆಂದು ಅಹಂ ಅವನನ್ನು  ಕಟ್ಟಿಹಾಕುತ್ತಿತ್ತು.

(ಮುಂದುವರಿಯುವುದು)

(ಶಂಕರ ಭಟ್)



0 تعليقات

إرسال تعليق

Post a Comment (0)

أحدث أقدم