ಧರ್ಮತ್ತಡ್ಕ: 2021-22 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯು ಅತ್ಯುತ್ತಮ ಸಾಧನೆಗೈದಿದೆ.
ಪರೀಕ್ಷೆ ಬರೆದ ಎಲ್ಲಾ 216 ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿ ಶಾಲೆಯು 100% ಫಲಿತಾಂಶ ಗಳಿಸಿದೆ.
ನವ್ಯ, ನಿಖಿತಾ ಶಾಲೆಟ್, ಆಯಿಷಾ ಅಫ್ಲತ್, ಭೂವಿಕಾ, ಕವನಶ್ರೀ, ನಿಧಿ ಆರ್ ಶೆಟ್ಟಿ, ನಿಖಿತಾ ಎಂ, ಪೂಜಾ ಎಂ, ಪ್ರಾಂಜಲಿ, ರಕ್ಷಾ ಆರ್ ಎಸ್, ಸಂಜನಾ ಯು, ರಕ್ಷಿತಾ ಎಂ, ಅಭಿಷೇಕ್, ದೀಪಕ್, ಮನೀಶ್ ಎಸ್.ಡಿ, ಸುದರ್ಶನ್ ಎಸ್, ಒಟ್ಟು ಹದಿನಾರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ A+ ಪಡೆದಿದ್ದಾರೆ.
ಶರಣ್ಯಾ, ನಿಖಿತಾ, ಸ್ವಾತಿ ಸಿ.ಎಚ್, ಜೋವಿನ್ ಡೆಲ್ರೋಯ್ - ಈ ನಾಲ್ಕು ವಿದ್ಯಾರ್ಥಿಗಳು ಒಂಬತ್ತು ವಿಷಯಗಳಲ್ಲಿ A+ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ವೃಂದ, ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಧನ್ಯವಾದಗಳು
ReplyDelete