ಶಿಲ್ಪ ಕಲೆಗಳ ತವರೂರು "ಬೇಲೂರು"

Upayuktha
0

ಈಗಿನ ಹಾಸನ ಜಿಲ್ಲೆಯ ಬೇಲೂರು ಹೊಯ್ಸಳರ ರಾಜಧಾನಿಯಾಗಿತ್ತು, ಹೊಯ್ಸಳರು ಆಳಿದಂತಹ ಈ ನಾಡು ಹಲವು ಕವಿಗಳ ಬೀಡಾಗಿದೆ. ಇಲ್ಲಿರುವಂತಹ ಸೌಂದರ್ಯವನ್ನು ಹಲವಾರು ಕವಿಗಳು ಹಲವಾರು ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ಇಲ್ಲಿನ ಚನ್ನಕೇಶವ ದೇವಾಲಯವನ್ನು ನೋಡಿದವರಿಗೆ ಮಾತ್ರ ಅದರ ಶಿಲ್ಪಕಲೆಗಳ ಆಕರ್ಷಣೆ ಅರಿವಾಗುವುದು. ಚನ್ನಕೇಶವ ದೇವಾಲಯವನ್ನು ನಿರ್ಮಿಸಲು ಸುಮಾರು 103 ವರ್ಷಗಳೇ ಬೇಕಾದವು.

ಇಷ್ಟು ವರ್ಷಗಳ ಪರಿಶ್ರಮ ಶಿಲೆಗಳನ್ನು ಕೆತ್ತಿದಂತಹ ಶಿಲ್ಪಿಗಳ ಬೆವರು, ಇವೆಲ್ಲವೂ ಈ ದೇವಾಲಯವನ್ನು ವೀಕ್ಷಿಸಿದಾಗ ಅಲ್ಲಿನ ವರ್ಣಮಯ ವಾದಂತಹ ಸೌಂದರ್ಯವನ್ನು ಕಾಣಬಹುದು.


ಬೇಲೂರು ಚನ್ನಕೇಶವ ದೇವಾಲಯ ವೆಂದರೆ ಹೊಯ್ಸಳರ ಪ್ರದರ್ಶನವೆನ್ನಬಹುದು. ಹೊಯ್ಸಳ ಮನೆತನದ ರಾಜನಾದಂತಹ ವಿಷ್ಣುವರ್ಧನನ ಕನಸಿನ ಕೂಸೆ, ಈ ಬೇಲೂರು ಚನ್ನಕೇಶವ ದೇವಾಲಯ ಎನ್ನಬಹುದು.


ಈ ದೇವಾಲಯದ ಕೆಲವು ಆಸಕ್ತಿಕರ ವಿಷಯಗಳೆಂದರೆ-


* ಕಲ್ಲಿನ ಆನೆಗಳು:- ದೇವಾಲಯದ ಪ್ರವೇಶ ದ್ವಾರದಲ್ಲಿ ಸ್ವಾಗತಕ್ಕಾಗಿ ಎರಡು ಆನೆಗಳು ನಿಂತಿರುವುದನ್ನು ಕಾಣಬಹುದು ಇದರ ವಾಸ್ತುಶಿಲ್ಪವು ಆಕರ್ಷಣೀಯವಾಗಿದೆ.


* ನಕ್ಷತ್ರಾಕಾರದ ವಿನ್ಯಾಸ:- ಇಡಿ ಚೆನ್ನಕೇಶವ ದೇವಾಲಯವು ನಕ್ಷತ್ರಾಕಾರದ ಚಿತ್ರ ವಿನ್ಯಾಸವನ್ನು ಹೊಂದಿರುವಂಥದ್ದು.


* ಪ್ರಾಣಿಗಳ ಕೆತ್ತನೆ:- ದೇವಾಲಯದ ಹೊರಭಾಗದಲ್ಲಿ ಸಿಂಹ, ಕುದುರೆ, ಆನೆಗಳ ಚಿತ್ರಣಗಳನ್ನು ಕಾಣಬಹುದು.


* ಸುಂದರವಾದ ಧ್ವಜಸ್ತಂಭ:- ಇದು ದೇವಾಲಯದ ಆವರಣದ ಮಧ್ಯಭಾಗದಲ್ಲಿಯೇ ಕಾಣಬಹುದು, ಇದರ ಎತ್ತರ 40ರಿಂದ 43 ಮೀಟರ್ ಎತ್ತರದಲ್ಲಿದೆ. ಇದರ ವಿಶೇಷತೆಯೆಂದರೆ ಪಾಯ ಇಲ್ಲದೆ ಸಾವಿರಾರು ವರ್ಷಗಳಿಂದ ನಿಂತಿರುವುದೆ ಇದರ ವಿಶೇಷವಾದ ಸಂಗತಿಯಾಗಿದೆ.


* ಮದನಿಕೆಯರು:- ಬೇಲೂರು ಎಂದರೆ ಸಾಕು ಹೆಚ್ಚು ವೈಯಾರದ ಶಿಲಾಬಾಲಿಕೆಯರನ್ನು ಕಾಣಬಹುದು.  ಗೋಡೆಯ ಮೇಲೆ ಕೆತ್ತಿದ್ದಂತಹ ಶಿಲಾಬಾಲಿಕೆಯರು ಇಲ್ಲಿನ ಪ್ರವಾಸಿಗರ ಕಣ್ಣನ್ನು ಸೆಳೆಯುವಂತಿವೆ, ಇಲ್ಲಿನ ದರ್ಪಣ ಸುಂದರಿಯರು ಹೆಚ್ಚು ಆಕರ್ಷಣೀಯರಾಗಿದ್ದಾರೆ.

-ದೀಕ್ಷಿತ ಗಿರೀಶ್

ಪತ್ರಿಕೋದ್ಯಮ ವಿಭಾಗ 

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top