ಹನಿ ಹನಿ ಮಳೆಯಲಿ ನೆನೆಯುವ ಸಂಭ್ರಮ...

Upayuktha
0

ಸುತ್ತಲೂ ಹಸಿರು ತುಂಬಿರುವ ಗಿಡ, ಮರಗಳ ಎಲೆಗಳು ಸುರಿಯುತ್ತಿರುವ ಮಳೆ, ಮಕ್ಕಳು ನಡೆದುಕೊಂಡು, ಆಟ ಆಡುತ್ತಾ ಗೆಳೆಯರ ಜೊತೆ ಇರುವ ದಿನಗಳು ಒಂದು ಸುಂದರವಾದ ದೃಶ್ಯ. ಹಕ್ಕಿಗಳಂತೆ ಗರಿ ಬಿಚ್ಚಿ  ಹಾರುತಿರುವ ಮುದ್ದು ಮುಖಗಳು, ಸುರಿಯುವ ಮಳೆಗೆ ಕುಣಿಯುವ ಅಸೆ ಎಲ್ಲವೂ ಈಗ ಆ ದಿನಗಳೆಲ್ಲ ಮರುಕಳಿಸುತ್ತದೆ. ಕೆಸರು ನೀರಿನೊಂದಿಗೆ ಆಡಿಕೊಂಡು ಮನೆಗೆ ಹೋಗಿ ಅಮ್ಮನಿಂದ ಬೈಗುಳ ತಿನ್ನುವ ಸಂಭ್ರಮ. ಮಳೆಗಾಲದಲ್ಲಿ ಶಾಲೆ ಎಂದಾಗ ಮಕ್ಕಳಿಗೆ ಮೊದಲು ನೆನಪು ಹೊಸ ಕೊಡೆ, ಅದೇನೋ ಹುಚ್ಚು ಗೆಳೆಯರಿಗೆ ಹೊಸ ಕೊಡೆ ತೋರಿಸುವುದರಲ್ಲಿ ಆದರೆ ಕೋಡೆ ಕೈಯಲ್ಲಿದ್ದರೂ ಗೆಳತಿಯ ಕೊಡೆಯಲ್ಲಿ ಹೋಗುವ ಮಜಾವೇ ಬೇರೆ. ತಾನು ಚಂಡಿಯಾದರೂ ತನ್ನ ಕೊಡೆ ಮಾತ್ರ ಬ್ಯಾಗ್ ನಿಂದ ಹೊರ ತೆಗೆಯುವುದಿಲ್ಲ.


ಗೆಳತಿಯೊಂದಿಗೆ ಒಂದೇ ಕೊಡೆಯಲ್ಲಿ ಹೋಗುವಾಗ ಅತ್ತ ಇತ್ತ ಎಳೆದುಕೊಳ್ಳುವುದು,ಜಗಳವಾಡುತ್ತಾ ಹೋಗುವ ದಿನಗಳು. ತರಗತಿಯಲ್ಲಿ ಎಲ್ಲರ ಕೊಡೆ ನೋಡಿದರೆ ಕಿಟಕಿಗಳಿಗೆ ನೇತಾಡಿ ಬಣ್ಣ ಬಣ್ಣದ ಕೊಡೆಗಳು. ಶಿಕ್ಷಕರ ಬೈಗುಳ ಕೇಳಿದರು ತರಗತಿಯಲ್ಲಿ ಫ್ಯಾನ್ ಹಾಕಿ ಕೊಡೆಗಳನ್ನು ಒಣಗಿಸುವುದು. ದಿನಪತ್ರಿಕೆಗಳನ್ನು ಮುಟ್ಟದ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದು ಎಂದರೆ ಅದು ಮಳೆಗಾಲದಲ್ಲಿ ಯಾಕೆಂದರೆ ಮಳೆಗಾಲ ಬಂತೆಂದರೆ ಕೆಲವು ಸಂದರ್ಭಗಳಲ್ಲಿ ಶಾಲೆ ಕಾಲೇಜು ರಜೆ ಎಂದು ಕಂಡರೆ ಸಾಕು ಎಲ್ಲಿಲ್ಲದ ಖುಷಿ.ಸಂಜೆ ಆಗುವ ತವಕ ಅಮ್ಮ ತಯಾರಿಸಿಟ್ಟ ಹಪ್ಪಳದ ರುಚಿ ಮನೆಗೆ ತಲುಪುವ ಆತುರ. ಬೆಳಗ್ಗೆ ಶಾಲೆಗೆ ಬರುವಾಗಲು ಅಷ್ಟೇ ಮಳೆಗಾಲದಲ್ಲಿ ಪಾಠಮಾಡುವಾಗ ಮೆಲ್ಲನೆ ಬ್ಯಾಗ್ ನಿಂದ ತಿಂಡಿಗಳನ್ನು ತೆಗೆದು ತಿನ್ನುವುದು. ಶಾಲಾ ವಸ್ತ.... ಇನ್ನೊಂದು ಶಾಲಾ ವಸ್ತ್ರ ಒಣಗಿಸುವ ಸಂದರ್ಭ ಅದೆಷ್ಟು ಬಟ್ಟೆಯ ಮೇಲೆ ಪ್ರಯೋಗಗಳು ನಡೆಯುತ್ತಿರುತ್ತದೆ! ಬಟ್ಟೆಗಳು ಮರುದಿನ ಒಣಗುತ್ತದೆಯೋ ಇಲ್ಲವೋ ಎಂಬ ಭಯ. ಬಸ್ಸಿನಲ್ಲಿ ಕುಳಿತು ಕನ್ನಡಿಯನ್ನು  ತೆರೆದು ಮಳೆಯ ಹನಿಗಳು ಮುಖಕ್ಕೆ ಬೀಳುವ ಖುಷಿ ಎಲ್ಲವೂ ಬಾಲ್ಯದ ದಿನಗಳು.

-ಸುಮನಾ

ಪ್ರಥಮ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top