|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಲಂದ ಮಹಾವಿದ್ಯಾಲಯದ ನೂತನ ಕಟ್ಟಡ ಮತ್ತು ಸ್ಮಾರ್ಟ್ ಕ್ಲಾಸ್ ರೂಮ್‌ಗಳ ಉದ್ಘಾಟನೆ

ನಾಲಂದ ಮಹಾವಿದ್ಯಾಲಯದ ನೂತನ ಕಟ್ಟಡ ಮತ್ತು ಸ್ಮಾರ್ಟ್ ಕ್ಲಾಸ್ ರೂಮ್‌ಗಳ ಉದ್ಘಾಟನೆ


(ಉಪಯುಕ್ತ ನ್ಯೂಸ್ ನೆಟ್‌ವರ್ಕ್‌)

ಪೆರ್ಲ: ಸಂವಹನ, ಸಂಭಾಷಣೆಯೊಂದಿಗೆ ಜ್ಞಾನಾಭಿವೃದ್ಧಿ ಮಾಡುವ ಮಾಧ್ಯಮವೇ ಭಾಷೆ. ನಮಗೆ ತಿಳಿದಿರುವ ಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯುವ ಉತ್ಸಾಹ ನಮ್ಮಲ್ಲಿರಬೇಕು‌. ಬಹುಭಾಷಾ ಜ್ಞಾನಾ ಸಮಾಜದ ಇಂದಿನ ಅಗತ್ಯವೂ ಆಗಿದೆ. ಭಾಷೆಯ ಮೇಲೆ ಅಭಿಮಾನ ಇರಬೇಕು. ಆದರೆ ದುರಭಿಮಾನ ಸಲ್ಲದು‌. ಇತರ ಭಾಷೆಗಳನ್ನು ಕಲಿಯುವುದರಿಂದ ಜ್ಞಾನಾಭಿವೃದ್ಧಿ ವ್ಯವಹಾರ ಕ್ಷೇತ್ರದಲ್ಲಿ ಮನ್ನಣೆ ಪಡೆಯಬಹುದು. ಸಮಾಜದ ವಿವಿಧ ಸ್ತರಗಳಲ್ಲಿ ಮಾನ್ಯತೆ ಪಡೆಯಲು ಸಾಮಾನ್ಯ ಭಾಷೆಗಳ ಬಳಕೆ ಅಗತ್ಯವಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಹೇಳಿದರು.


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅನುದಾನದಿಂದ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಮತ್ತು ನಿಟ್ಟೆ ವಿಶ್ವವಿದ್ಯಾಲಯ (ಪರಿಗಣಿಸಲ್ಪಟ್ಟ) ಪ್ರಾಯೋಜಿತ ಸ್ಮಾರ್ಟ್ ಕ್ಲಾಸ್ ರೂಮ್‌ಗಳನ್ನು ಭಾನುವಾರ ಸಂಜೆ ಉದ್ಘಾಟಿಸಿ ಆಶೀರ್ವಚನ ನೀಡಿದರು‌.


ಕೇರಳ ಸರಕಾರ ಅಡಳಿತದ ವಿವಿಧ ಮಜಲುಗಳಲ್ಲಿ ಮಲಯಾಳಂ ಭಾಷೆ ಹೇರಿಕೆಯ ಪ್ರಯತ್ನ ನಡೆಸಿದೆ.ಈ ಸಂದರ್ಭಗಳಲ್ಲೆಲ್ಲಾ ಕರ್ನಾಟಕ ಸರಕಾರ ಮಧ್ಯಪ್ರವೇಶಿಸಿ ಕೇರಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿ ಅನುಕೂಲ ಕಲ್ಪಿಸಿದೆ.ಕಾಸರಗೋಡಿನ ಭಾಷಾ ಸಮಸ್ಯೆ, ಇತರ ಆಹುವಾಲುಗಳಿಗೆ ಕರ್ನಾಟಕ ಸರಕಾರ ಮತ್ತು ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸ್ಪಂದಿಸುತ್ತಿರುವುದು ಕಾಸರಗೋಡು ಕನ್ನಡಿಗರ ಸುಯೋಗ.ಇದು ಕನ್ನಡ ಭಾಷೆಯ, ಸಂಸ್ಕೃತಿಯ ಅಭಿವೃದ್ಧಿಯೊಂದಿಗೆ ಕಾಸರಗೋಡಿನ ಕನ್ನಡಿಗರಲ್ಲಿ ಆತ್ಮಾಭಿಮಾನ ಹೆಚ್ಚಿಸಿದೆ ಎಂದರು.


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಐಎಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮಶಕ್ತಿ ನೀಡುವುದು. ಕಾಸರಗೋಡು ಕನ್ನಡಿಗರ ಹೃದಯ ಕರ್ನಾಟಕದಲ್ಲಿದೆ. ಅಂತರಂಗದ ವಿಕಾಸವೇ ಸಂಸ್ಕೃತಿ, ಬಹಿರಂಗದ ಪ್ರಕಾಶವೇ ಇಂಧನ.ಕರ್ನಾಟಕ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರು ಕಾಸರಗೋಡು ಗಡಿ ಪ್ರದೇಶಗಳ ವಿದ್ಯಾಸಂಸ್ಥೆ ಹಾಗೂ ಕನ್ನಡ ಭಾಷೆ ಅಭಿವೃದ್ಧಿಗೆ ಸ್ಪಂದಿಸಿ ತ್ತಿರುವುದು ಇಲ್ಲಿನ ಕನ್ನಡಿಗರ ಸುಯೋಗ ಎಂದರು.


ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಕಳ ಸ್ಮಾರ್ಟ್ ರೂಮ್ ಫಲಕ ಅನಾವರಣ ಗೊಳಿಸಿ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಮರೆಮಾಚಲಾದ ಸತ್ಯಗಳನ್ನು ಸಮಾಜದ  ಮುಂದೆ ತೆರೆದಿಡಲು ಪ್ರಯತ್ನಿಸುತ್ತಿದೆ. ಮಕ್ಕಳಿಗೆ ಸತ್ಯವನ್ನೇ ತಿಳಿಸಲು ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುತ್ತಿದೆ‌.ಭಾರತೀಯ ಶಿಕ್ಷಣ ಇನ್ನಷ್ಟು ವಿಸ್ತರಿಸಬೇಕು.ನಾಲಂದ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಕನ್ನಡ ಸಂಶೋಧನಾ ಕೇಂದ್ರವನ್ನು ತೆರೆಯಲು ಇಲಾಖೆ ಅನುದಾನ ಒದಗಿಸುವುದು ಎಂದರು.


ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ವಿನಯ ಹೆಗ್ಡೆ ಮಾತನಾಡಿ, ಬದಲಾವಣೆಗಳೊಂದಿಗೆ ಹೊಂದಿಕೊಂಡು ಬಾಳುವುದೇ ಜೀವನ.ಕಾಸರಗೋಡಿನ ಕನ್ನಡ ವಿದ್ಯಾ ಸಂಸ್ಥೆಗಳ ಅಭಿವೃದ್ಧಿಗಾಗಿ ನಿಟ್ಟೆ ಸಂಸ್ಥೆ ಪೂರ್ಣ ಸಹಕಾರ ನೀಡುವುದು ಎಂದರು.


ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಗಳನ್ನು ತಿಳಿಸುವ ಕೆಲಸವನ್ನು ಕಾಸರಗೋಡು ಜಿಲ್ಲೆಯ ಗಡಿನಾಡಿನ ಕನ್ನಡ ವಿದ್ಯಾಸಂಸ್ಥೆಗಳು ನಡೆಸುವುದರೊಂದಿಗೆ ಕನ್ನಡ ಸಂಸ್ಕೃತಿ ಉಳಿವು, ಬೆಳವಣಿಗೆಗೆ ಶ್ರಮಿಸುತ್ತಿದೆ.ಮುಂದಿನ ದಿನಗಳಲ್ಲಿ ನಾಲಂದ ಮಹಾವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದರು.


ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ  ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ವಿವೇಕಾನಂದ ವಿದ್ಯಾ ವರ್ಧಕ ಸಂಘದ ಮಾರ್ಗದರ್ಶಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು.ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಬಿಜೆಪಿ ಕರ್ನಾಟಕ ರಾಜ್ಯ ಮುಖ್ಯ ವ್ಯಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಾಲಂದಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು‌.


ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು‌. ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ಶೇಣಿ ವಂದಿಸಿದರು‌.ಪ್ರಾಧ್ಯಾಪಿಕೆ ಅಮೃತಾ ನಿರೂಪಿಸಿದರು.


ಚಿತ್ರ 1:  ನಾಲಂದ ಮಹಾವಿದ್ಯಾಲಯದಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಪ್ರಾಯೋಜಿತ ಸ್ಮಾರ್ಟ್ ಕ್ಲಾಸ್ ರೂಮ್‌ ನಾಮ ಫಲಕವನ್ನು ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಕಳ ಅನಾವರಣ ಗೊಳಿಸಿದರು. 


ಚಿತ್ರ 2: ನಾಲಂದ ಮಹಾವಿದ್ಯಾಲಯದ ನೂತನ ಕಟ್ಟಡ ಮತ್ತು ನಿಟ್ಟೆ ಸ್ಮಾರ್ಟ್ ಕ್ಲಾಸ್ ರೂಮ್‌ ಉದ್ಘಾಟಿಸಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post