|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಧುಮೇಹ ಮತ್ತು ಪಾದದ ಹುಣ್ಣುಗಳ ಚಿಕಿತ್ಸೆಗೆ ಪುನರುತ್ಪಾದಿತ ಔಷಧಕ್ಕೆ ಪೊಡೊಕಾನ್ -2022 ಒತ್ತು

ಮಧುಮೇಹ ಮತ್ತು ಪಾದದ ಹುಣ್ಣುಗಳ ಚಿಕಿತ್ಸೆಗೆ ಪುನರುತ್ಪಾದಿತ ಔಷಧಕ್ಕೆ ಪೊಡೊಕಾನ್ -2022 ಒತ್ತು

ಮೇ 28ರಂದು ಪೋಡೋಕಾನ್ -2022 ಆಯೋಜನೆಬೆಂಗಳೂರು: ಮಧುಮೇಹ ಪಾದದ ಗಾಯದ ನಿರ್ವಹಣೆಯಲ್ಲಿ ಟಿಶ್ಯೂ ಇಂಜಿನಿಯರ್ಡ್ ಸೊಲ್ಯೂಷನ್ಸ್, ಸ್ಟೆಮ್ ಸೆಲ್ ಥೆರಪಿ, ಬಯೋಲಾಜಿಕ್ಸ್ ಮೊದಲಾದ ಪುನರುತ್ಪಾದಕ ಚಿಕಿತ್ಸೆ ಆಧರಿತ, ಭವಿಷ್ಯದ ಮತ್ತು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಗಳ ಕುರಿತು ಮಾತನಾಡುವುದಕ್ಕಾಗಿ ಭಾರತ ಮತ್ತು ಯುಎಸ್‌ಎಯಲ್ಲಿರುವ ತಜ್ಞರನ್ನು ಒಂದೇ ವೇದಿಕೆಗೆ ತರಲು ಪೊಡೊಕಾನ್ -2022 ವನ್ನು ಆಯೋಜಿಸಲಾಗಿದೆ.


ಶನಿವಾರ (ಮೇ 28)ರಂದು ನಡೆಯಲಿರುವ ಈ ಹೈಬ್ರಿಡ್ ಇವೆಂಟ್ ನಲ್ಲಿ, ಬೆಂಗಳೂರು ಮತ್ತು ವಿಶ್ವದ ಬೇರೆ ಬೇರೆ ಕಡೆಗಳಲ್ಲಿರುವ ವೈದ್ಯರು ಪಾಲ್ಗೊಳ್ಳುವಂತೆ ಮಾಡಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸೆಷನ್‌ಗಳನ್ನು ನಡೆಸಲಾಗುತ್ತಿದೆ.


ಭಾರತದ ಏಕೈಕ ಪೊಡಿಯಾಟ್ರಿಕ್ ಚಿಕಿತ್ಸಾಲಯ ಫೂಟ್‌ಸೆಕ್ಯೂರ್ PODOCON -2022ನ್ನು ಆಯೋಜಿಸಿದೆ.


ಮಧುಮೇಹ ಪಾದವು ಹೆಚ್ಚು ನಿರ್ಲಕ್ಷಿಸಲ್ಪಟ್ಟ ಪುನರಾವರ್ತಿತ ಹುಣ್ಣುಗಳ ಸಮಸ್ಯೆ. ಇವು ಸಾಮಾನ್ಯವಾಗಿ ಸಾಂಪ್ರದಾಯಿಕ ಚಿಕಿತ್ಸೆಯ ವಿಧಾನಗಳಿಂದ ಗುಣವಾಗದಂತವು. ಪ್ರಪಂಚದಾದ್ಯಂತದ ವೈದ್ಯಕೀಯ ವೃತ್ತಿಪರರು ಚಿಕಿತ್ಸೆಯ ಪದ್ಧತಿಯನ್ನು ನಿರಂತರವಾಗಿ ಸುಧಾರಿಸುತ್ತಿದ್ದಾರೆ. ಏಕೆಂದರೆ, ಪ್ರಸ್ತುತ ಚಿಕಿತ್ಸೆಯಿಂದ ವಾಸಿಯಾಗದ ಮಧುಮೇಹ ಪಾದದ ಹುಣ್ಣುಗಳಿಂದಾಗಿ ರೋಗಿಗಳ ಪಾದವನ್ನೇ ಕತ್ತರಿಸಬೇಕಾಗುವಂತಹ ಅನಿವಾರ್ಯತೆ ಇದೆ.


PODOCON -2022ನ್ನು ಪೊಡಿಯಾಟ್ರಿಸ್ಟ್ ಮತ್ತು ಫೂಟ್‌ಸೆಕ್ಯೂರ್ ಸಂಸ್ಥಾಪಕ ಡಾ ಸಂಜಯ್ ಶರ್ಮಾ ಮಾಡರೇಟ್ ಮಾಡಲಿದ್ದಾರೆ. ಮಧುಮೇಹ ಪಾದದ ಚಿಕಿತ್ಸೆ ನೀಡುವಲ್ಲಿ ಪ್ರಸ್ತುತ ಬಳಕೆಯಲ್ಲಿರುವ ವಿಧಾನಗಳ ಅವಲೋಕನವನ್ನು ಪೊಡೊಕಾನ್ -2022 ನಡೆಸುತ್ತದೆ. ನಿರ್ದಿಷ್ಟವಾಗಿ ನೂತನ ಜೈವಿಕ ತಂತ್ರಜ್ಞಾನಗಳು ಮತ್ತು ಟಿಶ್ಯೂ ಇಂಜಿನಿಯರ್ಡ್ ಥೆರಪಿ, ಸ್ಟೆಮ್ ಸೆಲ್ ಥೆರಫಿ ಮೆಡಿಸಿನ್‌ಗಳ ಮೇಲಿನ ಪರಿಣಾಮಗಳ ಕುರಿತು ಹೆಚ್ಚಿನ ಗಮನವನ್ನು ಸೆಳೆಯಲಿದೆ. ಈ ಚಿಕಿತ್ಸಾ ವಿಧಾನಗಳು, ಮಧುಮೇಹ ಮತ್ತು ಮಧುಮೇಹ ಕಾಲಿಗೆ ಚಿಕಿತ್ಸೆ ನೀಡುವ ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನವನ್ನು ಬದಲಾಯಿಸುತ್ತವೆ.


ಅಮೆರಿಕದ ಟೆಕ್ಸಾಸ್‌ನ ವಿಶ್ವಪ್ರಸಿದ್ಧ ಪೊಡಿಯಾಟ್ರಿಕ್ ಸರ್ಜನ್ ಡಾ.ಬಿಜಾನ್ ನಜಾಫಿ ಅವರು ‘ಹುಣ್ಣಿನ ಚಿಕಿತ್ಸೆಯಲ್ಲಿ ಭವಿಷ್ಯದ ತಂತ್ರಜ್ಞಾನಗಳು’ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಚಂಡೀಗಢದ ಪಿಜಿಐನ ಖ್ಯಾತ ಅಂತಃಸ್ರಾವ ಶಾಸ್ತ್ರಜ್ಞರಲ್ಲಿ ಒಬ್ಬರಾದ ಡಾ ಅನಿಲ್ ಬನ್ಸಾಲಿ ಅವರು ಈ ಸಮ್ಮೇಳನದಲ್ಲಿ ಮಧುಮೇಹದಲ್ಲಿ ಸ್ಟೆಮ್‌ಸೆಲ್ ಥೆರಪಿ ಕುರಿತು ಮಾತನಾಡುವರು.


ಡಿಎಫ್‌ಯು ನಿರ್ವಹಣೆಯಲ್ಲಿ ಲೇಸರ್ ಚಿಕಿತ್ಸೆ ಮತ್ತು ಪುನರುತ್ಪಾದಕ ಔಷಧದ ಕುರಿತು ಮುಂಬೈ ಮತ್ತು ಪಾಂಡಿಚೆರಿಯ ಜೆಐಪಿಎಂಇಆರ್ ನ ಪ್ರಸಿದ್ಧ ಪ್ಲಾಸ್ಟಿಕ್ ಸರ್ಜನ್‌ಗಳಾದ ಡಾ ಸಂಜಯ್ ವೈದ್ಯ ಮತ್ತು ಡಾ ರವಿ ಚಿತ್ತೋರಿಯಾ ಮಾತನಾಡಲಿದ್ದಾರೆ.


ಈ ಸಮ್ಮೇಳನವು  ಆಂಜಿಯೋಜೆನೆಸಿಸ್ ಮತ್ತು ಗಾಯದ ಗುಣಪಡಿಸುವಿಕೆಯ ಚಿಕಿತ್ಸೆಯನ್ನು ಉತ್ತೇಜಿಸುತ್ತದೆ. ಸ್ಟೆಮ್ ಸೆಲ್ ಆಧಾರಿತ ಚಿಕಿತ್ಸೆಯು ಮಧುಮೇಹ ಮತ್ತು ಮಧುಮೇಹ ಪಾದದ ಹುಣ್ಣುಗಳ ನಿರ್ವಹಣೆಯಲ್ಲಿ ನಿಖರವಾದ ಭರವಸೆಯನ್ನು ಹೊಂದಿದೆ.


ಮಧುಮೇಹ ಪಾದದ ಹುಣ್ಣು  ಪ್ರಮುಖ ವೈದ್ಯಕೀಯ ಸವಾಲಾಗಿ ಮಾರ್ಪಟ್ಟಿರುವುದರಿಂದ - ಮಧುಮೇಹ ಪಾದದ ರೋಗಕಾರಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಆಳವಾಗಿ ಅಧ್ಯಯನ ಮಾಡುವುದು, ಹೊಸ ಚಿಕಿತ್ಸಾ ತಂತ್ರಗಳನ್ನು ಅನ್ವೇಷಿಸುವುದು ಮತ್ತು ಅವುಗಳ ಅಳವಡಿಕೆಯನ್ನು ಉತ್ತೇಜಿಸುವುದು ಅನಿವಾರ್ಯವಾಗಿದೆ. ಈ ತುರ್ತು ಸಂದರ್ಭಗಳಲ್ಲಿ, ವೈದ್ಯಕೀಯ ವೃತ್ತಿಪರರ ಜ್ಞಾನವನ್ನು ಹೆಚ್ಚಿಸುವಲ್ಲಿ PODOCON -2022 ಮಹತ್ವದ  ಪಾತ್ರವನ್ನು ವಹಿಸಲಿದೆ.


ಮಧುಮೇಹವು ಬಹು ಅಂಗಾಂಗಳ ಕಾರ್ಯವನ್ನು ಅಸಮರ್ಪಕಗೊಳಿಸುತ್ತದೆ ಮತ್ತು ಮಧುಮೇಹ ಪಾದವು ನರರೋಗ, ಮ್ಯಾಕ್ರೋವಾಸ್ಕುಲರ್ ಮತ್ತು ಮೈಕ್ರೋವಾಸ್ಕುಲರ್ ಕಾಯಿಲೆಗಳ ದೀರ್ಘಕಾಲೀನ ಸಂಕೀರ್ಣತೆಯಿಂದಾಗಿ ಗುಣಪಡಿಸುವ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.


ದೀರ್ಘಕಾಲದ ಹುಣ್ಣುಗಳನ್ನು ಗುಣಪಡಿಸುವುದು ಕಷ್ಟ, ಅವು ಪುನರಾವರ್ತನೆಯಾಗುತ್ತವೆ ಮತ್ತು ಹೆಚ್ಚಿನ ಪ್ರಮಾಣದ ಅಂಗಚ್ಛೇದನಕ್ಕೆ ಕಾರಣವಾಗುತ್ತವೆ. ಇದು ರೋಗಿಗಳ ಜೀವನದ ಗುಣಮಟ್ಟವನ್ನು ಕುಗ್ಗಿಸುತ್ತದೆ.  ಸಾಮಾನ್ಯವಾಗಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಒತ್ತಡ ಮತ್ತು ಅವರ ಕುಟುಂಬದ ಮಾನಸಿಕ ಮತ್ತು ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತವೆ. ಆದ್ದರಿಂದ, ಮಧುಮೇಹದ ಗಾಯವನ್ನು ವೇಗವಾಗಿ ಗುಣಪಡಿಸಲು ಹೊಸ  ವಿಧಾನಗಳ ಅವಶ್ಯಕತೆಯಿದೆ.


PODOCON -2022 ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು http://www.podocon.com ಗೆ ಭೇಟಿ ನೀಡಿ.


ಡಾ ಸಂಜಯ್ ಶರ್ಮಾ 

ಡಾ. ಸಂಜಯ್ ಶರ್ಮಾ ಅವರು ಆರೋಗ್ಯ ರಕ್ಷಣೆ ವಿಷಯದಲ್ಲಿ 18 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು USA ಮತ್ತು ಭಾರತದಲ್ಲಿ ಪೊಡಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಅರಿಜೋನಾದ ಬ್ಯಾನರ್ ಆಸ್ಪತ್ರೆಯಲ್ಲಿ ಡಾ ಡೇವಿಡ್ ಆರ್ಮ್‌ಸ್ಟ್ರಾಂಗ್ ಅವರ ಅಡಿಯಲ್ಲಿ ಡಯಾಬಿಟಿಕ್ ಫೂಟ್ / ಲಿಂಬ್ ಸಾಲ್ವೇಜ್‌ನಲ್ಲಿ ತರಬೇತಿ ಪಡೆದಿದ್ದಾರೆ. ಯುಎಸ್ಎ. ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್, ಯುಕೆ, ಗ್ಲ್ಯಾಸ್ಗೋದಿಂದ ಪೊಡಿಯಾಟ್ರಿಯಲ್ಲಿ (ಎಫ್‌ಎಫ್‌ಪಿಎಸ್) ಫೆಲೋಶಿಪ್ ಪಡೆದ ಭಾರತದ 7 ಶಸ್ತ್ರಚಿಕಿತ್ಸಕರಲ್ಲಿ ಅವರು ಒಬ್ಬರು. ಅವರು ಮೆಡ್‌ಟೆಕ್ ಮತ್ತು ಟೆಲಿಮೆಡಿಸಿನ್‌ನಲ್ಲಿ ಬಹು ಪೇಟೆಂಟ್‌ಗಳನ್ನು ಹೊಂದಿದ್ದಾರೆ. ಅವರು ವರ್ಲ್ಡ್ ಎಕನಾಮಿಕ್ ಫೋರಮ್‌ನಿಂದ ಟೆಕ್ನಾಲಜಿ ಪಯೋನಿಯರ್ (ನ್ಯೂರೋಸಿನಾಪ್ಟಿಕ್ ಅನ್ನು ಪ್ರತಿನಿಧಿಸುವ) ಪ್ರಶಸ್ತಿಯನ್ನು ಪಡೆದಿದ್ದಾರೆ.


ಫೂಟ್ ಸೆಕ್ಯೂರ್:

ಫುಟ್ಸೆಕ್ಯೂರ್, ಡಾ ಸಂಜಯ್ ಶರ್ಮಾ ಅವರು ಸ್ಥಾಪಿಸಿದ ಸಂಸ್ಥೆ, ಇದು ಫೂಟ್ ಮತ್ತು ಆಂಕಲ್ ಕ್ಲಿನಿಕ್‌ಗಳ ಸಮಗ್ರ ಸರಪಳಿಯಾಗಿದ್ದು, ಯೋಗಕ್ಷೇಮ, ರೋಗನಿರ್ಣಯ, ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ, ಆರ್ಥೋಟಿಕ್ಸ್ ಮತ್ತು ಪುನರ್ವಸತಿ ಸೇರಿದಂತೆ ಪೊಡಿಯಾಟ್ರಿಕ್ ಸೇವೆಗಳಿಗೆ ಮೀಸಲಾಗಿದೆ. ಪ್ರಸ್ತುತ ಫೂಟ್ ಸೆಕ್ಯೂರ್ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ 5 ಪೊಡಿಯಾಟ್ರಿ ವಿಭಾಗಗಳನ್ನು ಸ್ಥಾಪಿಸಿದೆ.


ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:

ಡಾ ಸಂಜಯ್ ಶರ್ಮಾ

M: 9980772658 |E mail: sanjay@footsecure.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post