||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಯೋಗ ದಿನಾಚರಣೆಗೆ ತಯಾರಿ: ಮೇ 29ರಿಂದ ಯೋಗ ತರಬೇತಿ

ವಿಶ್ವ ಯೋಗ ದಿನಾಚರಣೆಗೆ ತಯಾರಿ: ಮೇ 29ರಿಂದ ಯೋಗ ತರಬೇತಿ


ಮಂಗಳೂರು: ಮಂಗಳೂರು ಹವ್ಯಕ ಸಭಾ ವತಿಯಿಂದ ನಮ್ಮ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ಶಂಕರಶ್ರೀ ಸಭಾಭವನದಲ್ಲಿ ಉಚಿತ ಯೋಗ ತರಬೇತಿಯನ್ನು ನೀಡುವ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ಮೇ 29ರಿಂದ ಶುರುವಾಗಿ ಪ್ರತಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಈ ತರಬೇತಿ ನಡೆಯುವುದು.


ಶ್ರೀಯುತ ಶ್ಯಾಮ ಪ್ರಸಾದ್ ಮುದ್ರಜೆ, ಶ್ರೀಯುತ ಸರವು ರಮೇಶ್ ಭಟ್, ಶ್ರೀಯುತ ಕೇಶವ ನಂದೋಡಿ, ಶ್ರೀಯುತ ಸುಬ್ರಮಣ್ಯ ಭಟ್ ಕಾಟಿಪಳ್ಳ, ಮುಂತಾದವರು ತರಬೇತಿಯನ್ನು ನೀಡಲಿದ್ದಾರೆ. ಈ ತರಬೇತಿಯಲ್ಲಿ ಪ್ರಾಣಾಯಾಮ ಹಾಗೂ ಕೆಲವು ಸರಳ ಆಸನಗಳು ಹೇಳಿಕೊಡಲಾಗುವುದು.


ಜೂನ್‌ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಂದು ನಾವೆಲ್ಲರೂ ಪಾಲ್ಗೊಂಡು ನಮ್ಮತನವನ್ನು ಉಳಿಸಿಕೊಳ್ಳೋಣ. ಮಂಗಳೂರು ಹವ್ಯಕ ಸಭಾದ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘಟಕರು ಕೋರಿದ್ದಾರೆ. ಇದಕ್ಕೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಭಾಗವಹಿಸಬಹುದು.


0 Comments

Post a Comment

Post a Comment (0)

Previous Post Next Post