ಮಂಗಳೂರು: ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪೈಕಿ ಶ್ರೇಷ್ಠ 100 ಉದ್ಯಮಗಳಲ್ಲಿ ಗುರುತಿಸಿಕೊಂಡಿರುವ ಆರ್ಚಿಡ್ಸ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಸಂಸ್ಥೆಗೆ ಕೇಂದ್ರ ಸರಕಾರವು ಅತ್ಯುತ್ತಮ ಉದ್ಯಮ ಪ್ರಶಸ್ತಿ ನೀಡಿದೆ.
ಆರ್ಚಿಡ್ಸ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಸಾಯಿರಾಮ್ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಾರಾಯಣ ರಾಣೆ ಅವರಿಂದ ಸ್ವೀಕರಿಸಿದರು. ಈ ಸಂದರ್ಭ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಸಚಿವ ಬಾನು ಪ್ರತಾಪ್ ಸಿಂಗ್ ವರ್ಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ದೇಶಾದ್ಯಂತ ಸುಮಾರು 42,268 ಅರ್ಜಿಗಳನ್ನು ಈ ಕ್ಷೇತ್ರದಲ್ಲಿ ತಜ್ಞತೆ ಹೊಂದಿರುವ ಸದಸ್ಯರನ್ನೊಳಗೊಂಡ ಪರಿಶೀಲನಾ ಸಮಿತಿಯು ಸಂಸ್ಥೆಗಳ ಹಣಕಾಸಿನ ವ್ಯವಹಾರ, ಸಮಗ್ರ ನಿರ್ವಹಣೆ, ಹೊಸ ಆವಿಷ್ಕಾರಗಳು ಸೇರಿದಂತೆ ನಾನಾ ಮಾನದಂಡಗಳ ಮೂಲಕ ಪರಿಶೀಲಿಸಿ ಅಂತಿಮವಾಗಿ 100 ಅತ್ಯುತ್ತಮ ಕೈಗಾರಿಕೆಯನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಆರ್ಚಿಡ್ಸ್ ನೆಟ್‌ವರ್ಕ್ ಸಂಸ್ಥೆ ಸ್ಥಾನ ಗಿಟ್ಟಿಸಿಕೊಂಡಿದೆ.
ಮಂಗಳೂರು ಮೂಲದ ಉದ್ಯಮಿ ಸಾಯಿರಾಮ್ ಶೆಟ್ಟಿ ಅವರು, ಬೆಂಗಳೂರಿನಲ್ಲಿ 1999ರಲ್ಲಿ ಸ್ಥಾಪಿಸಿದ ಆರ್ಚಿಡ್ಸ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಇಂಡಿಯಾ ಪ್ರೆöÊವೆಟ್ ಲಿಮಿಟೆಡ್ ದೇಶದ ಅತ್ಯುತ್ತಮ ಉದ್ಯಮವಾಗಿ ಮುನ್ನಡೆಸುತ್ತಿದ್ದಾರೆ. ಐಟಿ ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ಕಳೆದ 23 ವರ್ಷಗಳಿಂದ ದೇಶ, ವಿದೇಶಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿದೆ. ನೆಟ್‌ವರ್ಕ್ ಡಿಸೈನ್ ಸೇರಿದಂತೆ ನಾನಾ ಕೆಲಸಗಳನ್ನು ನಿರ್ವಹಿಸುವ ಈ ಸಂಸ್ಥೆ ದೇಶದ ಶ್ರೇಷ್ಟ ಮೂರು ವಿಮಾನ ನಿಲ್ದಾಣ ಸೇರಿದಂತೆ ನಾನಾ ಉದ್ಯಮಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದು, 100ಕ್ಕೂ ಹೆಚ್ಚು ಅತ್ಯುತ್ತಮ ತಾಂತ್ರಿಕ ಪರಿಣತಿ ಹೊಂದಿರುವ ಸಿಬ್ಬಂದಿಗಳನ್ನು ಹೊಂದಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ