ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಐಕ್ಯುಎಸಿ, ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಕಾಲೇಜು ಎಬಿವಿಪಿ ಘಟಕದ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ ವೀರ ಸಾವರ್ಕರ್ ಜಯಂತಿ ಪ್ರಯುಕ್ತ' ಕ್ಷಾತ್ರ ಚೇತನ ಸಾವರ್ಕರ್' ಎಂಬ ಕಾರ್ಯಕ್ರಮವು ಮೇ 28ರಂದು ಬೆಳಗ್ಗೆ 9.30 ಕ್ಕೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಪತ್ರಕರ್ತೆ, ಬೆಂಗಳೂರಿನ ಶ್ರೀ ಟಾಕ್ಸ್ ವಾಹಿನಿಯ ಸಂಪಾದಕಿ ಶ್ರೀಲಕ್ಷ್ಮೀ ರಾಜ್ ಕುಮಾರ್ ನೆರವೇರಿಸಲಿದ್ದಾರೆ. ನಂತರ ಸಾವರ್ಕರ್ ಮತ್ತು ಆರೋಪಗಳ ಕುರಿತು ವಿಚಾರವನ್ನು ಮಂಡಿಸಲಿದ್ದಾರೆ.
ಜೊತೆಗೆ ಪೃಥ್ವೀಶ್ ಧರ್ಮಸ್ಥಳ ಇವರು ಸಮಾಜ ಸುಧಾರಕ ಸಾವರ್ಕರ್ ಎಂಬ ವಿಚಾರದ ಬಗೆಗೆ ಮಾತನಾಡಲಿದ್ದಾರೆ. ನಂತರ ಕೌಶಿಕ್ ಜಿ.ಎನ್ 'ಸಾವರ್ಕರ್ ಸಾಹಿತ್ಯ ಮತ್ತು ಸ್ವಾತಂತ್ರ್ಯ ಸಂಗ್ರಾಮ' ಎನ್ನುವ ವಿಚಾರದ ಕುರಿತು ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯೂ ನಡೆಯಲಿದೆ.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಟಿವಿ ವಿಕ್ರಮ ವಾಹಿನಿಯ ಮುಖ್ಯಸ್ಥ ಮಹೇಶ್ ವಿಕ್ರಮ ಹೆಗ್ಡೆ ಭಾಗವಹಿಸಲಿದ್ದಾರೆ. ಜೊತೆಗೆ ವಿವೇಕಾನಂದ ಮಹಾವಿದ್ಯಾಲಯದ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಅಧ್ಯಕ್ಷತೆ ವಹಿಸಲಿದ್ದು ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ, ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿರಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ