
ಪುತ್ತೂರು: ಸದಾ ಕಾಲ ತನ್ನ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಹಾಗೂ ವಿನೂತನ ಉತ್ಪನ್ನಗಳನ್ನೇ ಪೂರೈಸುವ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಇದೀಗ ಮೈಕ್ರೋ ಎಲೆಕ್ಟ್ರೋ ಫೋರ್ಮಿಂಗ್ ಲೈಟ್ ವೆಯ್ಟ್ ಆಂಟಿಕ್ ಆಭರಣಗಳನ್ನು ಪರಿಚಯಿಸಿದೆ.
ಮುಳಿಯ ಜ್ಯುವೆಲ್ಸ್‌ನ ವಾರ್ಷಿಕ ವಿಶೇಷ ಕಾರ್ಯಕ್ರಮ 'ಮುಳಿಯ ಚಿನ್ನೋತ್ಸವ' ಮೇ 16ರಂದು ಪ್ರಾರಂಭವಾಗಿ ಮೂರು ವಾರಗಳ ಕಾಲ ನಡೆಯುತ್ತಿದೆ. ಈ ಉತ್ಸವದ ಭಾಗವಾಗಿ ವಿನೂತನ ಶ್ರೇಣಿಯ ಮೈಕ್ರೋ ಫೋರ್ಮಿಂಗ್ ಆಭರಣಗಳನ್ನು ಬಿಡುಗಡೆ ಮಾಡಲಾಯಿತು.
ಮುಳಿಯ ಜ್ಯುವೆಲ್ಸ್‌ನ ಪುತ್ತೂರು ಮಳಿಗೆಯಲ್ಲಿ ಶ್ರೀಮತಿ ಮಾನಸ ಕಜೆ ಮತ್ತು ಡಾ. ಕೀರ್ತನ್ ಕಜೆ ಅವರು ಇಂದು (ಮೇ 26) ಈ ವಿನೂತನ ಆಭರಣಗಳನ್ನು ಬಿಡುಗಡೆ ಮಾಡಿದರು.
ಈ ಆಭರಣವನ್ನು ಕೇವಲ ಪಾಯಿಂಟ್ 120 ಮೈಕ್ರೋದಲ್ಲಿ ತಯಾರಿಸಲಾಗುತ್ತದೆ . ಆಭರಣ ಅತ್ಯಂತ ಹಗುರ (ಲೈಟ್ ವೆಯ್ಟ್) ಮತ್ತು ನಾಜೂಕಾದ ಕುಸುರಿ ಕೆಲಸವನ್ನು ಹೊಂದಿದೆ. ಈ ಆಭರಣವು ಉತ್ತಮವಾಗಿ ಶೋಭಿಸುತ್ತದೆ. ಅಲ್ಲದೆ ಈ ಆಭರಣವು ಗೇರು ಮತ್ತು ಚಂದನದ ಸುವಾಸನೆಯನ್ನು ಬೀರುತ್ತದೆ.
ವಿವಿಧ ರೀತಿಯ ಚಿನ್ನದ ಬೀಡ್ಸ್‌ಗಳನ್ನು ವಿಭಿನ್ನ ಹಾಗೂ ವಿಶಿಷ್ಟವಾದ ಬಣ್ಣಗಳ ಸೆಮಿ ಪ್ರೆಶಿಯಸ್ ಬಿಟ್ಸ್‌ಗಳ ಜತೆಗೆ ಪೋಣಿಸಿ ಈ ಆಭರಣವನ್ನು ತಯಾರಿಸಲಾಗಿದೆ. ಅಂತೆಯೇ ವಿಭಿನ್ನವಾದ ಕಲರ್ ಥ್ರೆಡ್ಡಿಂಗ್ ಮತ್ತು ಬೇರೆ ಬೇರೆ ಆಕಾರದ ಚಿನ್ನದ ಗುಂಡುಗಳನ್ನು ಪೋಣಿಸಿ ಈ ಬಗೆಯ ಆಭರಣಗಳನ್ನು ತಯಾರಿಸಲಾಗುತ್ತದೆ.
ಮೈಕ್ರೋ ಎಲೆಕ್ಟ್ರೋ ಫೋರ್ಮಿಂಗ್ ಆಭರಣಗಳು ನೋಡಲು ಸುಂದರ, ಆಕರ್ಷಕವಾಗಿದ್ದು, ಗ್ರಾಹಕರ ಕಿಸೆಗೂ ಹಗುರುವಾಗಿರುವುದು ಇದರ ವಿಶೇಷತೆಯಾಗಿದೆ. ಆರು ಗ್ರಾಂ ತೂಕದಿಂದ ಆರಂಭವಾಗಿ 40 ಗ್ರಾಂ ತೂಕದ ವರೆಗಿನ ವೆರೈಟಿಗಳನ್ನು ಹೊಂದಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ