ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ 20 ಜನ ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ರವಿವಾರ ನಡೆದ ʼಉಚಿತ ಸರ್ವ ಆರೋಗ್ಯ ತಪಾಸಣಾ ಶಿಬಿರʼಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿ 2000ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ಸೇವಾ ಸೌಲಭ್ಯ ಲಭಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಂತೋಷ್, ಸುದರ್ಶನ್, ಸ್ವಾತಿ, ಸಂಗೀತಾ, ಪ್ರಮಿತ್, ಭವಿಷ್ಯ, ಅರ್ಪಿತಾ, ಐಶ್ವರ್ಯಾ, ಕ್ಷಮ್ಯಾ, ಗಣೇಶ್, ಚೈತನ್ಯಾ, ಶೃತಿ, ದರ್ಶನ್, ಶಿಲ್ಪಾ, ಕೃಪಾ, ಮಹಾಲಕ್ಷ್ಮೀ, ಹರ್ಷಾನಂದ, ರಕ್ಷಾ ಪಿ ಹೆಚ್ ಮತ್ತು ಸ್ನೇಹ ಇವರು ತಲಪಾಡಿ, ಮಂಗಳಾದೇವಿ, ಬೊಕ್ಕಪಟ್ಣ ಮತ್ತು ಬಂಟ್ಸ್ ಹಾಸ್ಟೆಲ್ಗಳಲ್ಲಿ ನಡೆದ ಶಿಬಿರಗಳಲ್ಲಿ ಪ್ರತ್ಯೇಕ ತಂಡಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಕುಮಾರಸ್ವಾಮಿ ಎಂ ನೇತೃತ್ವ ವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ