ಯಕ್ಷಗುರು ರವಿ ಅಲೆವೂರಾಯರಿಗೆ ವಾಗೀಶ್ವರೀ ಸಂಮಾನ

Upayuktha
0


ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ, ಕಲಾಗುರು, ಸಂಘಟಕ, ಬರಹಗಾರ ರವಿ ಅಲೆವೂರಾಯ ವರ್ಕಾಡಿ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ನಡೆಯಿತು.


ಧನ ಸಂಗ್ರಹ ಮಾಡಬಹುದು ಜನ ಸಂಗ್ರಹ ಕಷ್ಟ. ಆದರೆ ಶ್ರೀ ವಾಗೀಶ್ವರೀ ಯಕ್ಷಗಾನ ಸಂಘದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಯಕ್ಷಗಾನದ ಅಭಿಮಾನಿಗಳು ಇಷ್ಟು ಸಂಖ್ಯೆಯಲ್ಲಿ ಸೇರಿರುವುದು ಸಂತಸದ ವಿಚಾರ ಎಂದು ಶ್ರೀ ಕೃಷ್ಣ ಯಕ್ಷ ಸಭಾದ ಪ್ರಧಾನ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.


ಯಕ್ಷ ಎನ್ನುವುದು ತಿರುವು ಮುರುವು ಆಗಿ ಕ್ಷಯ ಆಗಬಾರದು ಎಂಬ ಮಾತನ್ನು ಪೂಜ್ಯ ಪೇಜಾವರ ಶ್ರೀಗಳು  ಹೇಳುತ್ತಿದ್ದ ವಿಚಾರವನ್ನು ನೆನಪಿಸಿದರು. ಹಾಗಾಗಿ ಇಂತಹ ಸಂಘಗಳು ಮಾಡುವಂತಹ ಶತಮಾನೋತ್ಸವ ಕಾರ್ಯಕ್ರಮ, ಸಂಸ್ಮರಣೆ, ಸಮ್ಮಾನ ಸ್ಟುತ್ಯರ್ಹ ಎಂದರು.


ಕೀರ್ತಿಶೇಷ ಲಕ್ಷ್ಮೀನಾರಾಯಣ ಅಲೆವೂರಾಯರ ಸಂಸ್ಮರಣೆಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಸಂಜಯ ಕುಮಾರ್ ರಾವ್  ಮಾಡಿದರು.ವರ್ಕಾಡಿಯಲ್ಲಿ ಕಾವಿ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿಯನ್ನು ಹುಟ್ಟು  ಹಾಕುವ ಮೂಲಕ ಯಕ್ಷಗಾನಕ್ಕೆ ಕೊಡುಗೆಯನ್ನು ನೀಡಿದವರು. ಅರ್ಥಧಾರಿಯೂ, ಪಾತ್ರಧಾರಿಯೂ ಆಗಿ ರಂಗದಲ್ಲಿ ಮಿಂಚಿದವರು ಎಂದು ನೆನಪಿಸಿದರು.


ರವಿ ಅಲೆವೂರಾಯರ ಅಭಿನಂದನೆಯನ್ನು ಜಿ. ಕೆ. ಭಟ್ಟರು ನಿರ್ವಹಿಸಿದರು.

8 ಭಾಷೆಗಳಲ್ಲಿ ವೇಷ ಮಾಡಬಲ್ಲ ಸಮರ್ಥ ಕಲಾವಿದ ಶ್ರೀ ರವಿ ಅಲೆವೂರಾಯ. ದಾಕ್ಷಾಯಿಣಿ, ದಮಯಂತಿ ಮೊದಲಾದ ಪಾತ್ರಗಳಿಗೆ ಜೀವ ತುಂಬುವ ಕಲಾವಿದ ಇವರು. ಮುಂದಿನ ಪೀಳಿಗೆಗೆ ಯಕ್ಷಗಾನ ಉಳಿಸುವುದಕ್ಕಾಗಿ ಸರಯೂ ಬಾಲ ಯಕ್ಷ ವೃಂದ ಎನ್ನುವ ಸಂಸ್ಥೆಯನ್ನು ತೆಂಕು ತಿಟ್ಟಿನಲ್ಲಿ ಪ್ರಾರಂಭ ಮಾಡಿದವರು ಶ್ರೀ ರವಿ ಅಲೆವೂರಾಯರು ಎಂದರು.


ಶ್ರೀ ವಾಗೀಶ್ವರೀ ಕಲಾವರ್ಧಕ ಸಂಘದ 10 ನೆಯ ಸರಣಿಯ ಸನ್ಮಾನಕ್ಕೆ ಉತ್ತರಿಸಿದ ರವಿ ಅಲೆವೂರಾಯರು, ಈ ಸಂಘದಲ್ಲಿ ಕದ್ರಿ ನವನೀತ ಶೆಟ್ಟಿ, ಪಿ.ವಿ.ಪರಮೇಶ್ ಮೊದಲಾದ ಹವ್ಯಾಸಿ ಕಲಾವಿದರೊಂದಿಗಿನ ತನ್ನ ಸಾಹಚರ್ಯವನ್ನು ನೆನಪಿಸಿಕೊಂಡರು.


ಸುದೀರ್ಘ ಕಾಲ ತಾಳಮದ್ದಳೆ ಮತ್ತು ಯಕ್ಷಗಾನದಲ್ಲಿ ತಾನು ಸೇವೆಯನ್ನು ಸಲ್ಲಿಸಿದ್ದೇನೆ. ಇಂದಿನ ಸಮ್ಮಾನ ಅವಿಸ್ಮರಣೀಯ ಎಂದರು.


ಮುಖ್ಯ ಅತಿಥಿಯಾಗಿದ್ದ ಮಹೇಶ್ ಪಾಂಡೆಯವರು ಯಕ್ಷಗಾನಕ್ಕೆ ಪ್ರೇಕ್ಷಕರ ಕೊಡುಗೆ ಅಪಾರ. ಇಂತಹ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಪ್ರೇಕ್ಷಕರು ಯಕ್ಷಗಾನದತ್ತ ಆಕರ್ಷಿತರಾಗಲಿ ಎಂದರು. ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಶುಭವನ್ನು ಹಾರೈಸಿದರು. ಸಿ.ಎಸ್.ಭಂಡಾರಿ, ಶ್ರೀನಾಥ್ ಪ್ರಭು, ಹರಿಶ್ಚಂದ್ರ ನಾಯ್ಗ ಉಪಸ್ಥಿತರಿದ್ದರು.


ಕೋಶಾಧಿಕಾರಿ ಶ್ರೀ ಶಿವಪ್ರಸಾದ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಬ್ರಹ್ಮಶ್ರೀ ನಾರಾಯಣ  ಗುರು ಯಕ್ಷಗಾನ ಮಂಡಳಿ, ಕೊಲ್ಯ, ಸೋಮೇಶ್ವರ ಇದರ ಕಲಾವಿದರಿಂದ ಯುವ ಕಲಾವಿದೆ ಕುಮಾರಿ ಶ್ರೀಹಿತ ಶೆಟ್ಟಿಯವರ ಭಾಗವತಿಕೆಯಲ್ಲಿ "ಸೀತಾಪಹಾರ, ಜಟಾಯು ಮೋಕ್ಷ" ತಾಳಮದ್ದಳೆ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top