ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ಧ ಕಲೆ ಯಕ್ಷಗಾನ. ಇಂತಹ ಪ್ರಸಿದ್ಧ ಕಲೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ನಾವು ಇವತ್ತು ಪರಿಚಯ ಮಾಡುವ ಕಲಾವಿದ ಮಂದಾರ್ತಿ ಮೇಳದ ಸತೀಶ ಹಾಲಾಡಿ.
10.07.1984 ರಂದು ಕೃಷ್ಣ ಹಾಗೂ ಗಂಗಾ ದಂಪತಿಯರ ಮಗನಾಗಿ ಜನನ. ಎಂಟನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆ ಕೃಷ್ಣ ಮರಕಾಲ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಯಕ್ಷಗಾನದ ಯಾವುದೇ ತರಗತಿಗೆ ಹೋಗದೆ ತಾವು ಸ್ವ ಇಚ್ಛೆ ಇಂದ ಯಕ್ಷಗಾನ ನೋಡಿ ಕಲಿತು ಇಂದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-
ಪ್ರಸಂಗದ ನಡೆ, ಸನ್ನಿವೇಶವನ್ನು ತಿಳಿದು, ಹಾಸ್ಯ ಬಳಸುವ ಪ್ರಯತ್ನ.
ಕಾಳಿದಾಸ, ಚಂದ್ರಾವಳಿ, ಕನಕಾಂಗಿ, ಶ್ರೀನಿವಾಸ, ಕೃಷ್ಣ ಲೀಲೆ, ಬೇಡರ ಕಣ್ಣಪ್ಪ, ಶ್ವೇತಕುಮಾರ, ದೇವಿ ಮಹಾತ್ಮೇ, ಶನೀಶ್ವರ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು.
ಎಲ್ಲಾ ಪ್ರಸಂಗದ ಹೆಚ್ಚಿನ ಹಾಸ್ಯ ಪಾತ್ರಗಳು ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ:-
ಕಾಲಮಿತಿ ಪ್ರದರ್ಶನವನ್ನು ಮೆಚ್ಚುವ ಪ್ರೇಕ್ಷಕರು ಹೆಚ್ಚು ಎಂದು ಹೇಳುತ್ತಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ:-
ಉತ್ತಮ ಪ್ರೇಕ್ಷಕರು ಇದ್ದಾರೆ ಎಂದು ಹೇಳುತ್ತಾರೆ ಹಾಲಾಡಿ.
ಹಲವು ಸಂಘ ಸಂಸ್ಥೆಯವರು ಇವರ ಸಾಧನೆಯನ್ನು ಗುರುತಿಸಿ ೫ ಬಾರಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪತ್ರಿಕೆ ಓದುವುದು, ಹಳೆ ಚಲನಚಿತ್ರ ವೀಕ್ಷಣೆ ಇವರ ಹವ್ಯಾಸಗಳು.
ಹಾಲಾಡಿ ಮೇಳ ೧೧ ವರ್ಷ, ಸೌಕೂರು ಮೇಳ ೨ ವರ್ಷ, ಪ್ರಸ್ತುತ ಮಂದಾರ್ತಿ ಮೇಳದಲ್ಲಿ ೮ ವರ್ಷಗಳಿಂದ ತಿರುಗಾಟ ಮಾಡುತ್ತಿದ್ದಾರೆ.
೧೨.೧೦.೨೦೧೮ ರಂದು ಜ್ಯೋತಿ ಇವರನ್ನು ವಿವಾಹವಾಗಿ ಮಗಳು ಚೈತನ್ಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
#Photos_By:-
ವಿಜಯಕುಮಾರ್ ಶೆಟ್ಟಿ ಯಳಂತೂರ್ , Dhanu K.P, Praveen P Acharya
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ