||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ- ಭಾಗ 3

ಕಿರು ಕಾದಂಬರಿ: ದೊಂಬಿ- ಭಾಗ 3


ಬೆಂಗಳೂರಿಗೆ ದಿನವೂ ಹಲವು ಕುಟುಂಬಗಳು ವಲಸೆ ಬರುತ್ತವೆ. ರಾಯಚೂರು, ಬಿಜಾಪುರ, ಗುಲ್ಬರ್ಗ ಮುಂತಾದ ಜಿಲ್ಲೆಗಳಿಂದ ಬರುವವರ ಪಾಡು ದುಃಖ ತಪ್ತವಾದುದು. ಮಳೆಯಿಲ್ಲ..., ಬೆಳೆ ಇಲ್ಲ.... ಸಂಪಾದನೆ ಇಲ್ಲ, ಜೀವನ ಕಷ್ಟವಾದಾಗ, ಇದ್ದ  ಬಿದ್ದ ಜಾಗವನ್ನು ಸಿಕ್ಕಿದ ಬೆಲೆಗೆ ಮಾರಿ ಭವಿಷ್ಯವನ್ನು ಅರಸುತ್ತ ಬೆಂಗಳೂರು ಕಡೆ ಹೊರಟು ಬರುವವರು ಅವರು. ಮುಂದೆ ಏನು ಎಂದು ಅರಿಯದಾದವರು.... ಬಂದುದನ್ನು ಎದುರಿಸುವ ದಾರ್ಷ್ಟ್ಯದೊಂದಿಗೆ ಬರುವವರೇ ಎಲ್ಲರು. ಯಾವ ಪರಿಸ್ಥಿತಿಗೂ ಒಗ್ಗಿಕೊಳ್ಳಬೇಕೆಂಬ ಭಾವನೆ... ಅವರು ಮೊದಲೇ ನಿರ್ಧರಿಸಿಕೊಂಡಂತಿತ್ತು. 


ಈ ರೀತಿ ಬೆಂಗಳೂರಿಗೆ ಬರುವವರು ಉತ್ತರ ಕರ್ನಾಟಕದ ಜನ ಮಾತ್ರವಲ್ಲ, ನೆರೆಯ ತಮಿಳುನಾಡಿನಿಂದಲೂ ಹೆಚ್ಹು ಜನ ಬರುತ್ತಾರೆ. ತಮಿಳು ಜನರ ಜೀವನ ಕ್ರಮವೇ ವಿಚಿತ್ರ. ಅವರಲ್ಲಿ ಯಾರಾದರು ಒಬ್ಬ ಬಂದರೆ ಎಲ್ಲಾದರು ಒಂದು ಕಡೆ ಗುಡಿಸಲು ಕಟ್ಟಿ ಕೂಲಿ ನಾಲಿ ಮಾಡಿ ಜೀವನ ಮಾಡುತ್ತಾ ಮತ್ತೆ ಊರಿಗೆ ಹೋಗಿ ಮತ್ತೆ ಕೆಲವರನ್ನು ಕರೆದುಕೊಂಡು ಬಂದರೆ ಅಲ್ಲಿ ಒಂದು ಕೊಳೆಗೇರಿಯೇ ಸೃಷ್ಟಿಯಾಗುತ್ತಿತ್ತು... ಅವರು ಯಾವ ಕೆಲಸವನ್ನಾದರೂ ಮಾಡಲು ಸಿದ್ದರಿರುತ್ತಾರೆ.. ಯಾವುದೇ ತರದ ಸ್ಥಿತಿಯಲ್ಲೂ ಬದುಕುವ ಕಲೆ ಅವರಿಗೆ ಗೊತ್ತು. ಅವರಲ್ಲಿ ಕೆಲವರಿಗೆ ಊರ ಕಡೆ ಜಮೀನು ಇರುತ್ತದೆ. ಆದರೆ ಜಮೀನು ಕೆಲಸ ಮುಗಿದ ಮೇಲೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದು ಕೊಳೆಗೇರಿಗಳ ಸೃಷ್ಟಿಕರ್ತರಾಗುತ್ತಾರೆ ಆವರು. ಅವರ ವಾಸ ಬೆಂಗಳೂರಲ್ಲಿ ಕೆಲವು ತಿಂಗಳು ಮಾತ್ರ. ಹಾಗೆ ಅವರು ತಮ್ಮ ಊರಲ್ಲಿರುವ ಜಮೀನು ಮತ್ತಿತರ ಕೆಲಸಗಳಲ್ಲಿ ಭಾಗಿಯಾಗುತ್ತಾ ಬೆಂಗಳೂರಿನ ದುಡಿಮೆಯನ್ನೂ ಮಾಡುತ್ತಿರುವ ಸುಖೀ ಜನರುಗಳು ಅವರು. ಆದರೆ ಕರ್ನಾಟಕ ಉತ್ತರ ಭಾಗದಿಂದ ಬರುವ ಜನರ ವ್ಯವಸ್ಥೆಯೇ ಅದಲ್ಲ. ಅದರಲ್ಲಿ ಹೆಚ್ಚಿನವರು ತಮ್ಮ  ಜಮೀನನ್ನು ಸಿಕ್ಕಿದ ಬೆಲೆಗೆ ಮಾರಿ ಬೆಂಗಳೂರನ್ನು ತಮ್ಮ ಸ್ವಂತ ಊರನ್ನಾಗಿಸಲು ಬರುವವರು.


ತಮ್ಮ ತಮ್ಮ ಊರುಗಳಿಂದ ಬೆಂಗಳೂರಿಗೆ ಬಂದ ಕೂಡಲೇ ಅವರು ತಮ್ಮ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ರೈಲು  ಹಳಿಗಳ ಮೇಲೆ ನಡೆಯುತ್ತಾ ಸೂಕ್ತಕಂಡ ಒಂದು ಜಾಗದಲ್ಲಿ ಮೂರು ಕಲ್ಲು ಹಾಕಿ ಒಂದು ಒಲೆಯನ್ನು ಹಚ್ಚಿ ಅಡಿಗೆ ಮಾಡಿ ಊಟ ಮಾಡಿದರೆ, ತಕ್ಷಣದ ಕೆಲಸ ಮುಗಿಯಿತು. ಸ್ವಲ್ಪ ವಿಶ್ರಾಂತಿ ತೆಗೆದ ಮೇಲೆ ತರ್ಪಾಲು ಹಾಕಿ ರಾತ್ರಿ ಮಲಗುವ ವ್ಯವಸ್ಥೆಯನ್ನು ಮಾಡಿ್ದರೆ ಅವರ ಬೆಂಗಳೂರಿನ ಅರಮನೆಯು ಸಿದ್ದವಾಗುತ್ತಿತ್ತು. ಬಳಿಕ ಸುತ್ತುಮುತ್ತಲ ಜನರಲ್ಲಿ ಕೂಲಿ ಕೆಲಸದ ಬಗ್ಗೆ ವಿಚಾರಿಸಿದರೆ ಕೆಲವರು ಆಗುವ ದೊಡ್ಡ ಕಟ್ಟಗಳ ಕಡೆ ಕೈ ತೋರುತ್ತಿದ್ದರು. ಅವರು ಅಲ್ಲಿಗೆ ಹೋಗಿ ಮೇಸ್ತ್ರಿಗೆ ಕೈ ಮುಗಿದು ನಿತ್ತರೆ ಅವನಲ್ಲಿ ಕೆಲಸವಿದ್ದರೆ ಕೊಡುತ್ತಾನೆ, ಇಲ್ಲವೆಂದರೆ ಯಾವ ಕಟ್ಟದ ಕಡೆ ಹೋಗಬೇಕೋ ಅಲ್ಲಿಗೆ ಕಳುಹಿಸುತ್ತಾನೆ. ಇದು ಒಂದು ಸುವ್ಯವಸ್ಥಿತವಾದ ಕೆಲಸ. ಯಾಕೆಂದರೆ ಉತ್ತರ ಕರ್ನಾಟಕದವರಿಗೆ ಹೆಚ್ಚೆಂದರೆ ದಿನಕ್ಕೆ ಮುನ್ನೂರ ಐವತ್ತು ಕೊಟ್ಟರೆ ಸಾಕು, ಸ್ಥಳೀಯರಾದರೋ ಅಥವಾ ತಮಿಳು ಜನರಾದರೋ ಅವರಿಗೆ ಹೆಚ್ಚು ಕೂಲಿಕೊಡಬೇಕಾಗುತ್ತಿತ್ತು. ಅಂದರೆ ಬೆಂಗಳೂರಲ್ಲಿ ಹೆಚ್ಚು ಡಿಮಾಂಡ್ ಇರುವುದು ಉತ್ತರ ಕರ್ನಾಟಕ ಕೂಲಿ ಜನರಿಗೆ, ಬೆಂಗಳೂರಿನ ಕಾರ್ಪೊರೇಷನ್ ನ ಹೆಚ್ಚಿನ ಹೂದೊಟ ಗಳಲ್ಲಿ ಉತ್ತರ ಕರ್ನಾಟಕದವರದೇ ಕಾರುಬಾರು, ವಿವಿಧ ವಾರ್ಡ್‌ಗಳಲ್ಲಿರುವ ಪಾರ್ಕ್‌ಗಳಲ್ಲಿ ವಾಸದ ಕೋಣೆ ಇದ್ದರೆ ಆಯಿತು ಇಲ್ಲವೆಂದರೆ ತರ್ಪಾಲ್ ನ ಒಂದು ಗುಡಿಸಲು ಕೊಟ್ಟರೆ ಅವರಿಗೆ ಅದೇ ದೊಡ್ಡ ವ್ಯವಸ್ಥೆ. ಅಲ್ಲಿ ನೀರಿಗೆ ಯಾವ ತೊಂದರೆಯೂ ಇರುತ್ತಿರಲಿಲ್ಲ. ಇದು ಭಾಗ್ಯವಂತ ಕೆಲವರಿಗೆ ಮಾತ್ರ ಸಿಕ್ಕುವ ಸೌಲಭ್ಯ. ಉಳಿದವರು ಎಲ್ಲೋ ಇರಬೇಕು, ಕೆಲಸಕ್ಕೆ ಮಾತ್ರ ಹಾಜರಿರಬೇಕು ವಾರಕ್ಕೊಮ್ಮೆ ಸಂಬಳ, ನಡುವಲ್ಲಿ ಖರ್ಚಿಗೆ ಬೇಕಾದರೆ ಅಡ್ವಾನ್ಸ್ ಸೌಲಭ್ಯವಿದೆ.  


ಸಾಧಾರಣ ದಿನಕ್ಕೆ ನೂರು ನೂರೈವತ್ತು ಕುಟುಂಬಗಳು ಈ ರೀತಿಯಾಗಿ ಬೆಂಗಳೂರನ್ನು ತಲುಪುತ್ತವೆ, ಅದರಲ್ಲಿ ಹೆಚ್ಚಿನವರು ಕೂಲಿನಾಲಿ ಮಾಡಿ ಜೀವನ ಸಾಗಿಸಿದರೆ, ಉಳಿದವರು ಇಂತಹ ಕೂಲಿ ಕಾರ್ಮಿಕರ ಏಜೆಂಟ್ ಆಗಿಯೂ ಕೆಲಸ ಡುತ್ತಾರೆ. ಅಂದರೆ ಅವರು ಕೂಲಿ ಜನರನ್ನು ಒದಗಿಸುವ ಏಜೆಂಟ್. ಯಾರಾದರು ಕಟ್ಟಡ ಕೆಲಸಗಳಿಗೆ ಜನ ಬೇಕೆಂದರೆ, ಅಷ್ಟು ಜನರನ್ನು ಒದಗಿಸುವ ಜವಾಬ್ದಾರಿ ಈ ಏಜೆಂಟ್ ರವರದು, ಅವರಿಗೆ ಒಬ್ಬ ಕೂಲಿಯವನ ಮೇಲೆ ಇಂತಿಷ್ಟು ಎಂದು ಕಮಿಷನ್ ಸಿಗುತದೆ. ಇಂತಹ ಏಜೆಂಟ್ ಗಳವರು ಈಗ ಬಾಡಿಗೆ  ಮನೆಗಳಲ್ಲಿ ವಾಸವಿರುತ್ತಾರೆ. ಅಂದರೆ ಮೊದಲು ಅವರು ಬೆಂಗಳೂರಿ್ಗೆ ಬಂದಾಗ ರೈಲು ಹಲಿಗಳ ಬಳಿ ಒಲೆ ಹಚ್ಚಿ ಅಡಿಗೆ ಮಾಡಿ ಉಂಡವರೇ. ಇಂಥವರು ಕೂಲಿಯವರ ಏಜೆಂಟ್ ಮಾತ್ರವಲ್ಲ, ಯಾವ ಕಟ್ಟಡಕ್ಕಾದರು ಗಾರೆ ಕೆಲಸದವರು, ಡ್ರೈವರ್ ಗಳು ಬೇಕಾದರೂ ಅವರು ವ್ಯಸ್ಥೆ ಮಾಡುತ್ತಾರೆ. ಊರ ಕಡೆಗೆ ಫೋನ್ ಮಾಡಿ ಅಂತಹವರನ್ನು ತರಿಸಿಕೊಂಡು ಮೇಸ್ತ್ರಿಗಳವರಿಗೆ ಪರಿಚಯಿಸಿ ಕಮಿಷನ್ ಪಡೆದರೆ ಅವರ ಕೆಲಸ ಮುಗಿಯಿತು.  


ತಮಿಳು ಜನರಿಗೆ ಇಂತಹ ಸೌಲಭ್ಯಗಳಿಲ್ಲ. ಅವರಿಗೆ ತಮ್ಮ ಭಾಷೆ ಮತ್ತು ಊರುಗಳ ಅಭಿಮಾನ. ತಾವು ಕೆಲಸಮಾಡುವಲ್ಲಿ ಜನ ಬೇಕೆಂದರೆ ತಮ್ಮ ಊರಿಗೆ ಫೋನ್ ಮಾಡಿ ಜನ ತರಿಸಿಕೊಳ್ಳುತ್ತಾರೆ. ಮೂಲತ: ತಮಿಳರು ಸ್ವಲ್ಪ ಒರಟು ಜನ ಎಂದು ಅವರ ಸಹವಾಸ ಮಾಡುವವರು ಕಡಿಮೆ, ಅಂದರೆ ಕೆಲಸ ಮಡಿಸಲೂ ಅಷ್ಟೆ ಕನ್ನಡದ ಜನರಿಂದ ಕೆಲಸಮಾಡಿಸಬಹುದು, ಆದರೆ ತಮಿಳರಿಂದ ಕೆಲಸಮಾಡಿಸಲು ಸ್ವಲ್ಪ ಶ್ರಮ ವಹಿಸಬೇಕು. ಅದೂ ಅಲ್ಲದೆ ತಮಿಳರು ಬೆಂಗಳೂರಿನ ಈ ವ್ಯವಸ್ಥೆಗೆ ಶತಮಾನದಿಂದಲೂ ಒಗ್ಗಿ ಕೊಂಡವರು. ಉತ್ತರ ಕರ್ನಾಟಕದವರಾದರೆ ಹಾಗಲ್ಲ. ಅವರ ವಲಸೆ ಇತೀಚೆಗಿನ ಅಂದರೆ ಸಾಧಾರಣ ಹತ್ತು ಹದಿನೈದು ವರ್ಷಗಳ ಅನುಭವ. ಅದಕ್ಕಿಂತ ಮೊದಲು ಅಂದರೆ ಬ್ರಿಟಿಷ್ ಲಾಗೈತಿನಿಂದಲೂ ಬೆಂಗಳೂರಿನ ಬೆಳವಣಿಗೆಯಲ್ಲಿ ತಮಿಳು ಕೂಲಿ ಕಾರ್ಮಿಕರದೇ ಕೈ ಮೇಲು.

(ಶಂಕರ ಭಟ್)

(ಮುಂದುವರಿಯುವುದು)

ಭಾಗ-1 ಮತ್ತು ಭಾಗ-2 ಓದಲು ಇಲ್ಲಿ ಕ್ಲಿಕ್ಕಿಸಿ


 ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post