ಅಕ್ಷಯ ತೃತೀಯ: ಜಗದಲ್ಲಿ ಸದ್ಗುಣ-ಸಂಪನ್ನತೆಗಳು ಅಕ್ಷಯವಾಗಲಿ

Upayuktha
0

ಅಕ್ಷಯ ತೃತೀಯದ ಇತಿಹಾಸ ಸತ್ಯಯುಗದ ಪ್ರಾರಂಭದಿಂದ ಆಗುತ್ತದೆ. ಕ್ಷಯವಿಲ್ಲದೆ ಎಲ್ಲವೂ ಅಕ್ಷಯವಾಗುವ ದಿನ. ಈ ದಿನದೊಂದಿಗೆ ಸಾಕಷ್ಟು ಸಂಗತಿಗಳು ಕೂಡಿಕೊಂಡಿವೆ.


ಇದೊಂದು ಪರ್ವ ದಿನ, ಮಹಾವಿಷ್ಣುವಿನ ಆರಾಧನೆಗೆ ಯೋಗ್ಯವಾದ ದಿನ. ಈ ದಿನವೇ ಸತ್ಯಯುಗದ ಅಥವಾ ಕೃತ ಯುಗ ಆರಂಭವಾಗಿತ್ತು, ಯಜ್ಞ ಯಾಗಾದಿಗಳು ಇದೆ ದಿನದಿಂದ ಭೂಮಿಯ ಮೇಲೆ ಆರಂಭವಾಗಿದ್ದು ಎಂಬ ಪ್ರತೀತಿ ಇದೆ.


ಭಗವಾನ್ ಪರಶುರಾಮನ ಜನನ ಅಕ್ಷಯ ತೃತೀಯದಂದು ಆಯಿತು. ದೇವದಾನವರು ಅಮೃತಕ್ಕಾಗಿ ಕಾದಾಟವನ್ನು ಇದೆ ದಿನ ಆರಂಭ ಮಾಡಿದರು.


ಇನ್ನು ದ್ವಾಪರ ಯುಗದಲ್ಲಿ ಪಾಂಡವರು ವನವಾಸಕ್ಕೆ ತೆರಳಿದಾಗ ದ್ರೌಪತಿ ಕೃಷ್ಣನ ಹತ್ತಿರ ಅಕ್ಷಯ ಪಾತ್ರೆ ಪಡೆದ ದಿನ ಇದಾಗಿದೆ.


ಕಲಿಯುಗದಲ್ಲಿ ತಪಸ್ಸು ಮಾಡಿ ಗಂಗೆಯನ್ನು ಭಗೀರಥನು ಇದೆ ದಿನದಂದು ಭೂಮಿಗೆ ಕರೆತಂದನು.


ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರದಿಂದ ಮಹಲಕ್ಷ್ಮಿಯನ್ನು ಸ್ತುತಿಸಿ ಲಕ್ಷ್ಮಿಯನ್ನು ಬಂದು ಒಬ್ಬ ಬಡ ಅಜ್ಜಿಯ ಮನೆಯಲ್ಲಿ ಕನಕ ವರ್ಷವಾಗುವಂತೆ ಮಾಡಿದರು ಆದ್ದರಿಂದ ಈ ದಿನದಂದು ಬಂಗಾರ ಖರೀದಿಸಿದರೆ ಮನೆಯಲ್ಲಿ ಸಂಪತ್ತು ಅಕ್ಷಯವಾಗುತ್ತದೆಂದು ನಂಬಿಕೆ.


ಜಗದ್ ಜ್ಯೋತಿ ಬಸವಣ್ಣನವರ ಜಯಂತಿ ಕೂಡ ಇದೇ ದಿವಸ.


ಈ ಬರಿಯ ಅಕ್ಷಯತೃತೀಯ ದಿನದಿಂದ ಎಲ್ಲರಿಗೂ ಆರೋಗ್ಯ ಅಕ್ಷಯವಾಗಲಿ. ಸದ್ಗುಣಗಳು ಅಕ್ಷಯವಾಗಲಿ, ಕರೋನ ದಿಂದ ವಿಮುಕ್ತಿ ದೊರೆತು ಜಗತ್ತಿನಲ್ಲಿ ಪ್ರೀತಿ ಪ್ರೇಮಗಳು ತುಂಬಿ ತುಳುಕಲಿ ಎಲ್ಲರಲ್ಲಿ ಕರುಣೆ ಸಹನೆಯ ಗುಣಗಳನ್ನು ಭಗವಂತ ಆಕ್ಷಯವಾಗುವಂತೆ ವರದಾನ ನೀಡಲಿ.


ಅನೇಯನೇರಿಕೊಂಡು ಹೋದಿರಿ ನೀವು

ಕುದುರೆಯನೇರಿಕೊಂಡು ಹೋದಿರಿ ನೀವು

ಕುಂಕುಮ ಕಸ್ತೂರಿಯನು ಸವರಿಕೊಂಡು ಹೋದಿರಿನೀವು

ಸತ್ಯದ ನಿಲುವು ಅರಿಯದೆ ಹೋದಿರಲ್ಲ

ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ

ಅಹಂಕಾರವೆಂಬ ಮದಗಜವನೀರಿ

ವಿಧಿಗೆ ಗುರಿಯಾಗಿ ಕೆಟ್ಟು ಹೋದಿರಲ್ಲಾ

ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ ಭಜನವಾದಿರಲ್ಲಾ.


ಹೇಗೆ ಎಲ್ಲರೂ ಸದ್ಗುಣ, ಸದ್ಭಾವನೆಗಳನ್ನು ಬೆಳಸಬೇಕು.


ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ್ದರು. ಅದು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ಇಂದು ನಾವೆಲ್ಲರೂ ನಮ್ಮ ನಮ್ಮ ಕೆಲಸಗಳನ್ನು ದ್ವೇಷ, ಮೋಹ, ಅತಿ ಆಸೆ, ದುಡ್ಡಿನ ವ್ಯಾಮೋಹ, ಮೋಸ, ವಂಚನೆಗಳನ್ನು ಬಿಟ್ಟು ನಮ್ಮ ಕಾಯಕವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಎಲ್ಲರೂ ಸೇರಿ ಕರೋನವನ್ನು ಓಡಿಸಬಹುದು.


ಈ ಬಾರಿಯ ಅಕ್ಷಯ ತೃತೀಯದಿಂದ ಎಲ್ಲರ ಬಾಳಲ್ಲಿ ಸುಖ ಶಾಂತಿ ಸಮೃದ್ಧಿ ಆರೋಗ್ಯ ಐಶ್ವರ್ಯ ಪ್ರೀತಿ ಸದ್ಗುಣಗಳು ಅಕ್ಷಯವಾಗಿ ಮಳೆ ಬೆಳೆ ಸಮೃದ್ಧಿಯಾಗಿ ಅಕ್ಷಯವಾಗಳೆಂದು ಆಶಿಸುತ್ತೇನೆ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ.



- ಹೇಮಾ ವೆಂಕಟೇಶ್ ಹಂದ್ರಾಳ

ಬಾಗಲಕೋಟೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top