ಶಾಂತಾ ಪುತ್ತೂರು ಅವರಿಗೆ ಯುಗಪುರುಷ ರಾಜ್ಯ ಪ್ರಶಸ್ತಿ 2022

Upayuktha
0

ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ ಹಾಗೂ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಏ.30ರ ಶನಿವಾರದಂದು ಇಳಿ ಹಗಲು ನಡೆದ ಕರಾವಳಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಕಬಕದಲ್ಲಿ ಶಿಕ್ಷಕಿಯಾಗಿರುವ ಶಾಂತಾ ಪುತ್ತೂರುರವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ಯುಗಪುರುಷ ರಾಜ್ಯ ಪ್ರಶಸ್ತಿ 2022 ಪ್ರದಾನ ಮಾಡಲಾಯಿತು.


ಇದೇ ಸಂದರ್ಭದಲ್ಲಿ ಮಂಗಳೂರಿನ ಖ್ಯಾತ ವೈದ್ಯ ಹಾಗೂ ಸಾಹಿತಿ ನೆಲೆಯಲ್ಲಿ ಡಾ. ಸುರೇಶ್ ನೆಗಳಗುಳಿ ಯವರಿಗೆ ಯುಗಪುರುಷ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್, ದಯಾಮಣಿ ಎಕ್ಕಾರು, ರಾಜೇಶ್ ಆಳ್ವಾ, ಡಾ. ತಯಬ್ ಅಲಿ ಹೊಂಬಾಳ, ಪೆರ್ಮುಂಡೆ ಶಂಕರ್ ಆರ್ ‌ಹೆಗ್ಡೆ, ಕವತ್ತಾರು ರಾಮದೇವಾಡಿಗ, ಸೋಮಪ್ಪ ದೇವಾಡಿಗ ಪರ್ಕಳರವರನ್ನು ಸನ್ಮಾನಿಸಲಾಯಿತು. ಮನೋರಂಜನಾ ಸಹಿತ ಕಾವ್ಯದಿಬ್ಬಣ ಕಾರ್ಯಕ್ರಮ ಜರುಗಿತು.


ಯುಗಪುರುಷ ಸಂಪಾದಕರಾದ ಭುವನಾಭಿರಾಮ ಉಡುಪರ ಅಧ್ಯಕ್ಷತೆಯ ಈ ಸಮಾರಂಭದ ಉದ್ಘಾಟನೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ನೆರವೇರಿಸಿದರು. ಅವರು ಸಾಹಿತ್ಯವನ್ನು ಹೆಚ್ಚಿಸಬೆಕಾದರೆ ಸಾಹಿತಿಗಳನ್ನು ಗುರುತಿಸಬೇಕು ಮತ್ತು ಅವರ ಕೃತಿಗಳನ್ನು ಕೊಂಡು ಓದಬೇಕು ಎಂದರು. ಅನಂತರ ಹರಿಕೃಷ್ಣ ಪುನರೂರು ಅವರಿಗೆ ಡಾಕ್ಟರೇಟ್ ದೊರಕಿದ ಹಿನ್ನೆಲೆಯಲ್ಲಿ ಪುರಸ್ಕರಿಸಲಾಯಿತು. ಎಂ.ಆರ್. ವಾಸುದೇವ ರಾವ್ ಅವರು ಕವಿಗಳ ಕವನದ ಸೊಗಸಾದ ವಿಮರ್ಶೆಯನ್ನು ಕವಿಗೋಷ್ಠಿಯ ಅಧ್ಯಕ್ಷರ ನೆಲೆಯಲ್ಲಿ ಮಾಡಿದರು.


ಕಡಂದಲೆ ಸುರೇಶ ಭಂಡಾರಿ ದೊಡ್ಡಣ್ಣ ಶೆಟ್ಟಿ ಕವತ್ತಾರು, ಶ್ರೀಮತಿ ಪದ್ಮಶ್ರೀ ನಿಡ್ಡೋಡಿ, ಪಿ.ವಿ.ಪ್ರದೀಪ್ ಕುಮಾರ್, ಸಹಿತ ಇತರ ಹಲವು ಗಣ್ಯರು ಭಾಗವಹಿಸಿದ್ದರು. ಮರವಂತೆ ಪ್ರಕಾಶ್ ಪಡಿಯಾರ್ ಉದ್ಘಾಟನಾ ಕವಿತೆ ವಾಚಿಸಿದರು. ಹಲವಾರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.


ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ, ಸಮ್ಮೇಳನದ ಸಮಿತಿಯ ರಾಜ್ಯಾಧ್ಯಕ್ಷ ಪತ್ರಕರ್ತ, ಸಂಘಟಕ, ಡಾ.ಶೇಖರ ಅಜೆಕಾರು ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ರೇಷ್ಮ ಗೊರೂರು ಮತ್ತು ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top