||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಡಿಪು: ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಸೂರಜ್ ಶಿಕ್ಷಣ ಸಂಸ್ಥೆಗಳು

ಮುಡಿಪು: ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಸೂರಜ್ ಶಿಕ್ಷಣ ಸಂಸ್ಥೆಗಳು


ಮಂಗಳೂರು: ಮಂಗಳೂರು: ಮಂಗಳೂರು ಹೊರವಲಯದ ಮುಡಿಪುವಿನ ಪ್ರಶಾಂತ ವಾತಾವರಣದಲ್ಲಿ ನಿಸರ್ಗ ಸೌಂದರ್ಯದ ನಡುವೆ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳೊಂದಿಗೆ ಶೈಕ್ಷಣಿಕ ಕ್ರಾಂತಿಯನ್ನೇ ನಡೆಸುತ್ತಿರುವ ಸೂರಜ್ ಇಂಟರ್ ನ್ಯಾಷನಲ್ ಹೈಯರ್ ಪ್ರೈಮರಿ ಸ್ಕೂಲ್‌, ಜ್ಞಾನದೀಪ ಹೈಸ್ಕೂಲ್ ಮತ್ತು ಸೂರಜ್ ಪಿಯು ಕಾಲೇಜುಗಳು ನೂತನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಅವಕಾಶಗಳನ್ನು ತೆರೆದಿವೆ.


ಸೂರಜ್‌ ಎಜುಕೇಶನಲ್ ಆಂಡ್ ಚ್ಯಾರಿಟೇಬಲ್ ಟ್ರಸ್ಟ್‌ (ರಿ)  ಮಂಗಳೂರು ಇವರಿಂದ ಪ್ರವರ್ತಿತವಾಗಿರುವ ಈ ಶಿಕ್ಷಣ ಸಂಸ್ಥೆಗಳು ಕಳೆದ 15 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉನ್ನತ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿವೆ.


2022-23ನೇ ಸಾಲಿನ ನೂತನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಗಳು ಲಭ್ಯ. ಕೆ.ಜಿ ಕ್ಲಾಸ್‌ಗಳಿಂದ ತೊಡಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವರೆಗಿನ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದೆ. ಪಿಯುಸಿಯಲ್ಲಿ ವಿಜ್ಞಾನ (ಪಿಸಿಎಂಬಿ ಮತ್ತು ಪಿಸಿಎಂಸಿ), ಕಾಮರ್ಸ್‌, ಇಬಿಎಎಸ್‌, ಬಿಎಎಸ್‌ಸಿ, ತರಗತಿಗಳಿಗೆ ಸೇರ್ಪಡೆಯಾಗಲು ಇದೀಗ ಅವಕಾಶಗಳು ತೆರೆದಿವೆ. 


ಸೂರಜ್ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಸುಸಜ್ಜಿತವಾದ ಪ್ರಯೋಗಾಲಯಗಳು, ಗ್ರಂಥಾಲಯ, ಸ್ಮಾರ್ಟ್‌ಕ್ಲಾಸ್, ಶುದ್ಧವಾದ ಕ್ಯಾಂಟೀನ್‌, ಕ್ರೀಡಾಂಗಣ ಸೌಲಭ್ಯಗಳು ಶಿಕ್ಷಣ ಸಂಸ್ಥೆಯ ವೈಶಿಷ್ಟ್ಯಗಳಾಗಿವೆ. ನಗರದ ಜಿಲ್ಲೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಸೂರಜ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವುದು ಹೆಮ್ಮೆಯ ವಿಚಾರವಾಗಿದೆ.


SURAJ EDUCATION AND CHARITABLE TRUST


MUDIPU KURNAD BANTWAL TALUK

PHONE: 08255-26271, 0824- 4261633

MOBILE: 9448149419

EMAIL: surajpucollege@gmail.com


*******

ಹಿನ್ನೆಲೆ:

ಶಿಕ್ಷಣ ಸಂಸ್ಥೆಯ ಪ್ರವರ್ತಕರು ಹಾಗೂ ಸೂರಜ್ ಎಜುಕೇಶನಲ್ ಅಂಡ್ ಚ್ಯಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷರಾಗಿರುವ ಡಾ. ಮಂಜುನಾಥ್ ಎಸ್ ರೇವಣಕರ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಹಿರೇಗುತ್ತಿ ಗ್ರಾಮದವರು. ಇವರ ತಂದೆ ಪೋಸ್ಟ್‌ಮ್ಯಾನ್ ಆಗಿ ಸರಕಾರಿ ಸೇವೆ ಸಲ್ಲಿಸಿದ್ದರು. ತಾಯಿ ಉತ್ತಮ ಗೃಹಿಣಿಯಾಗಿ ಬಡತನದಲ್ಲಿಯೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದಕ್ಕಾಗಿ ಅವಿರತ ಶ್ರಮಿಸಿದವರು. ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಧಾರೆ ಎರೆದು ಕುಟುಂಬವನ್ನು ಚೆನ್ನಾಗಿ ನಡೆಸಿಕೊಂಡು ಬಂದವರು. ಅತ್ಯಂತ ಕಷ್ಟದ ಸಂದರ್ಭದಲ್ಲೂ ಇತರರಿಗೆ ಸಹಾಯ ಮಾಡುವ ಉದಾತ್ತ ಧ್ಯೇಯವಿರುವ ಕುಟುಂಬದಲ್ಲಿ ಬೆಳೆದು ಬಂದ ಮಂಜುನಾಥ ರೇವಣಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಬಳಿಕ ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದು ಭಾರತೀ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು.


ನಂತರ ಮಂಗಳೂರಿಗೆ ತಮ್ಮ ವಾಸ್ತವ್ಯವನ್ನು ವರ್ಗಾಯಿಸಿದರು. ನಂತರ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿನ್ನಾಭರಣ ಸಿಗುವಂತಾಗಲು ತಮ್ಮ ದೈವಜ್ಞ ಬ್ರಾಹ್ಮಣ ಸಮಾಜದ ಕುಲ ಕಸುಬಾದ ಚಿನ್ನಾಭರಣ ವ್ಯಾಪಾರದಲ್ಲಿ (ಸೂರಜ್ ಜ್ಯುವೆಲ್ ಪ್ಯಾಲೇಸ್‌) ತೊಡಗಿ ಅತ್ಯುತ್ತಮ ಜನಸ್ಪಂದನೆಯನ್ನು ಪಡೆದಿದ್ದಾರೆ.


ತಾವು ಪಡೆದಿರುವ ಎಂಜಿನಿಯರಿಂಗ್ ಶಿಕ್ಷಣದ ಭಾಗವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮನೆ ಹಾಗೂ ವ್ಯಾಪಾರ ಮಳಿಗೆಗಳು ಸಿಗುವಂತಾಗಲು ಸೂರಜ್ ಪ್ರಮೋಟರ್ಸ್ ಎಂಡ್ ಬಿಲ್ಡರ್ಸ್‌ ಮೂಲಕ ರಿಯಲ್ ಎಸ್ಟೇಟ್‌ನಲ್ಲೂ ತೊಡಗಿಸಿಕೊಂಡು ಉತ್ತಮ ಛಾಪು ಮೂಡಿಸಿದ್ದಾರೆ.


ತಮ್ಮ ವೃತ್ತಿ, ವ್ಯವಹಾರದ ಜತೆಗೆ ಸಾಮಾಜಿಕ ಹಾಗೂ ಬಡವರ ಕಲ್ಯಾಣಕ್ಕಾಗಿ ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಅವಿರತ ಶ್ರಮದಾನ ಮಾಡಿ ಪ್ರಸ್ತುತ ರೋಟರಿ ಇಂಟರ್ ನ್ಯಾಷನಲ್‌ ಸ್ವಚ್ಛ ಭಾರತ ಅಭಿಯಾನದ ಚೇರ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಸಾಹಿತ್ಯ ಕ್ಷೇತ್ರದಲ್ಲೂ ಏನಾದರೂ ಸಾಧನೆ ಮಾಡಿ ತೋರಿಸಬೇಕೆಂಬ ಹಂಬಲವುಳ್ಳ ಡಾ. ಮಂಜುನಾಥ್‌ ಎಸ್. ರೇವಣಕರ್ ಅವರು ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವ ಹಲವಾರು ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


ಪತಿಯ ಸಮಾಜಮುಖಿ ಸೇವೆ ಅವರ ಶ್ರೀಮತಿಯವರ ಕೊಡುಗೆಯೂ ಗಮನಾರ್ಹ.  ಪತಿಯ ಚಟುವಟಿಕೆಗಳಲ್ಲಿ ಸದಾಕಾಲವೂ ಬೆನ್ನೆಲುಬಾಗಿ ನಿಂತು ಅವರು ನಡೆಸುವ ಶಾಲೆ, ಕಾಲೇಜುಗಳ ಆಡಳಿತವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ.


ಶಿಕ್ಷಣ ಸಂಸ್ಥೆಗಳಲ್ಲಿ ಕಲೆಗೆ ಪ್ರೋತ್ಸಾಹ ನೀಡುವಂತಾಗಲು 'ಸೂರಜ್ ಕಲಾಸಿರಿ'ಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter


0 Comments

Post a Comment

Post a Comment (0)

Previous Post Next Post