ಪುತ್ತೂರು: ನಾಡಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕಿಂಗ್ ಪ್ರಾರಂಭವಾಗಿದೆ. ಬೆಸ್ಟ್ ಬೆಲೆ, ಬೆಸ್ಟ್ ಆಭರಣ ಎಂಬ ಘೋಷವಾಕ್ಯದ ಅಡಿಯಲ್ಲಿ ಅತ್ಯುತ್ತಮ ಗುಣಮಟ್ಟದ, ಮನಸ್ಸಿಗೊಪ್ಪುವ ವೈವಿಧ್ಯಮಯ ಆಭರಣಗಳನ್ನು ಅತ್ಯುತ್ತಮ ಬೆಲೆಗೆ ನೀಡಲು ಮುಳಿಯ ಸಂಸ್ಥೆ ಮುಂದಾಗಿದೆ.
ಕಳೆದ 75 ವರ್ಷಗಳಿಂದ ಚಿನ್ನಾಭರಣಗಳ ಮಾರಾಟದಲ್ಲಿ ಗುಣಮಟ್ಟ, ಪ್ರಾಮಾಣಿಕತೆ, ಗ್ರಾಹಕ ಬಂಧುತ್ವಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಕಾಪಾಡಿಕೊಂಡು ಬಂದಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆ ತನ್ನ ಐದೂ ಮಳಿಗೆಗಳಲ್ಲಿ (ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು) ಅಕ್ಷಯ ತೃತೀಯ ವಿಶೇಷ ಆಭರಣಗಳ ಮುಂಗಡ ಬುಕಿಂಗ್ ಆರಂಭಿಸಿದೆ.
ಗ್ರಾಹಕರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಂಡು ತಮಗೆ ಅವಶ್ಯವಿರುವ ಆಭರಣಗಳನ್ನು ಖರೀದಿಸಲು ಇದೊಂದು ಸುವರ್ಣಾವಕಾಶ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮೇ 3ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಮುಳಿಯ ಜ್ಯುವೆಲ್ಸ್‌ನ ಬೆಳ್ತಂಗಡಿ ಮಳಿಗೆ ಅಂದು ಬೆಳಗ್ಗೆ 7:30ರಿಂದ ಕಾರ್ಯ ನಿರ್ವಹಿಸಲಿದೆ.
ಮುಳಿಯ ಜ್ಯುವೆಲ್ಸ್ ತನ್ನ ತಿಂಗಳ ಆಭರಣ ಖರೀದಿ ಯೋಜನೆಯ ಜತೆಗೆ ಆಕರ್ಷಕ ಉಡುಗೊರೆಗಳನ್ನು ನೀಡುತ್ತಿದೆ. ಸಂತೃಪ್ತ ಗ್ರಾಹಕರೇ ಮುಳಿಯ ಜ್ಯುವೆಲ್ಸ್‌ನ ರಾಯಭಾರಿಗಳಾಗಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ