|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಸರ ಕಾಳಜಿ ಹೃದಯದಿಂದ ಮೂಡಿಬರಲಿ: ಡಾ. ಕುಮಾರಸ್ವಾಮಿ

ಪರಿಸರ ಕಾಳಜಿ ಹೃದಯದಿಂದ ಮೂಡಿಬರಲಿ: ಡಾ. ಕುಮಾರಸ್ವಾಮಿ


ಉಜಿರೆ: ಪ್ರಕೃತಿ ಸಹಜವಾದ ವ್ಯವಸ್ಥೆಗಳನ್ನು ಅಸಂಬದ್ಧ ಪಥದಲ್ಲಿ ಕೊಂಡೊಯ್ಯುದು ವಿಕೃತಿ ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಮಾಜಿ ಸದಸ್ಯ ಪ್ರೊ. ಕುಮಾರಸ್ವಾಮಿ ನುಡಿದರು.


ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ಉಜಿರೆಯ ಶ್ರೀ ಧ.ಮಂ. ಕಾಲೇಜು ಸಹಭಾಗಿತ್ವದಲ್ಲಿ ಉಜಿರೆಯ ಸಿದ್ದವನ ಗುರುಕುಲದಲ್ಲಿ ನಡೆದ ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ ಹಾಗೂ ನೇತ್ರಾವತಿ ಮತ್ತು ಇತರೆ ಉಪನದಿಗಳ ಪವಿತ್ರತೆ- ಪ್ರಾಮುಖ್ಯತೆ ಕುರಿತಾದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.


ಭಾರತದ ಪ್ರಾಕೃತಿಕ ವ್ಯವಸ್ಥೆಗೆ ಪಶ್ಚಿಮ ಘಟ್ಟಗಳು ಹಾಗೂ ಸಹ್ಯಾದ್ರಿ ಸಮುಚ್ಚಯ ಜೀವ ತುಂಬಿದ್ದು, ಜೀವ ವೈವಿದ್ಯಗಳ ಆವಾಸಸ್ಥಾನವಾಗಿದೆ. ಆದರೆ ಅಭಿವೃದ್ಧಿಯಲ್ಲಿ ಪಶ್ಚಿಮ ಘಟ್ಟದ ಮೇಲೆ ನಿರಂತರ ದಾಳಿಯಾಗುತ್ತಿದೆ. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಹಳಿ ನಿರ್ಮಾಣ, ಕೈಗಾ ಅಣುಸ್ಥಾವರ, ಶರಾವತಿ ಪಂಪೆಡ್ ಸ್ಟೋರೇಜ್ ನಂತಹ ಅವೈಜ್ಞಾನಿಕ ಯೋಜನೆಗಳು ಪಶ್ಚಿಮ ಘಟ್ಟದ ನಾಶಕ್ಕೆ ತನ್ನ ಕೊಡುಗೆ ನೀಡಿದೆ.


ನೀರು ಮೇಲಿನಿಂದ ಕೆಳಗೆ ಹರಿಯುವುದು ಪ್ರಕೃತಿ, ಕೆಳಗಿನಿಂದ ಮೇಲೆ ಹರಿಯುವುದು ವಿಕೃತಿ, ನೀರನ್ನು ಉಳಿಸುವುದು ನೈಜ ಸಂಸ್ಕೃತಿ. ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸೂಕ್ಷ್ಮ ರೇಖೆಯನ್ನು ಅರಿಯಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಪಶ್ಚಿಮ ಘಟ್ಟದ ಉಳಿವಿನ ಕುರಿತು ಚರ್ಚೆಗಳಾಗಬೇಕು. ಪಶ್ಚಿಮಘಟ್ಟದ ಸಂರಕ್ಷಣೆಯ ಕಾರ್ಯಪಡೆಗೆ ತಜ್ಞ ಸದಸ್ಯರನ್ನು, ನುರಿತ ಅರಣ್ಯ ಅಧಿಕಾರಿಗಳನ್ನು ನೇಮಿಸಿ ಬಲಗೊಳಿಸಬೇಕು.


ಪರಿಸರ ಹೋರಾಟಗಳು ಕೇವಲ ಮೊಬೈಲ್ಗಳಿಗೆ ಸೀಮಿತವಾಗಬಾರದು. ಪಶ್ಚಿಮಘಟ್ಟಕ್ಕೆ ಸಮೀಪದಲ್ಲಿರುವ ರಾಜ್ಯಗಳು ಸಂಘಟಿತರಾಗಿ ಒಟ್ಟಾಗಿ ಪರಿಸರ ಸಂರಕ್ಷಣೆ ಮಾಡಬೇಕಾದ ಅಗತ್ಯತೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.


ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಗಣೇಶ್ ಶೆಂದ್ಯೆ ಕಾರ್ಯಕ್ರಮ ನಿರ್ವಹಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post