ಮೈಸೂರು: ಹಿರಿಯ ನಟಿ ತಾರಾ ಅನುರಾಧ ಅವರ ತಾಯಿ ಪುಷ್ಪ(76) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೈಸೂರಿನಲ್ಲಿ ನಟಿ ತಾರಾ ಅನುರಾಧ ಹಾಗೂ ತಾಯಿ ಪುಷ್ಪ ಇಬ್ಬರೂ ಶೂಟಿಂಗ್ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಪುಷ್ಪಾ ಅವರಿಗೆ ತೀವ್ರವಾಗಿ ವಾಂತಿಯಾಗಿದ್ದು ತಕ್ಷಣ ಮೈಸೂರು ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರಿನಿಂದ ಪಾರ್ಥಿವ ಶರೀರವನ್ನು ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಅಳಿಯ ವೇಣು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ