ಯಕ್ಷ ರಂಗದ ಪುರುಷ ಹಾಗೂ ಸ್ತ್ರೀ ವೇಷಧಾರಿ ಪ್ರಸಾದ್ ಸವಣೂರು

Upayuktha
0

18-04-1994 ರಂದು ಹೊನ್ನಪ್ಪ ಗೌಡ ಮತ್ತು ಶ್ರೀಮತಿ ವಸಂತಿ ಇವರ ಮಗನಾಗಿ ಜನಿಸಿದ ಪ್ರಸಾದ್ ಸವಣೂರು, ಬಿ.ಎ (ಡಿಸ್ಟಿಂಕ್ಷನ್) ಪದವೀಧರ.


ಎರಡನೇ ತರಗತಿಯಲ್ಲಿ ಇರುವಾಗ ತಾರಾನಾಥ ಸವಣೂರು (ಪ್ರಸ್ತುತ ಸರಕಾರಿ ಶಿಕ್ಷಕರು), ಕೋಡ್ಲ ಗಣಪತಿ ಭಟ್ (ಹೈಸ್ಕೂಲ್ ನಲ್ಲಿರುವಾಗ), ಕೀರಿಕ್ಕಾಡು ಗಣೇಶ ಶರ್ಮ(ಅರ್ಥಗಾರಿಕೆ), ಹಾಗೂ ಮೇಳದಲ್ಲಿ ಪೆರ್ಮುದೆ ಜಯಪ್ರಕಾಶ್ ಶೆಟ್ಟರನ್ನು ಗುರುಗಳೆಂದು ಸ್ವೀಕರಿಸಿರುತ್ತೇನೆ ಎಂದು ಪ್ರಸಾದ್ ಅವರು ಹೇಳುತ್ತಾರೆ.


ಬಾಲ್ಯದಲ್ಲಿ ಊರಿನಲ್ಲಿ ಆಗುವ ಯಕ್ಷಗಾನ ನೋಡಿ ನಿತ್ಯ ಶಾಲೆಯಲ್ಲಿ ಕುಣಿಯುವುದು ನೋಡಿ ಆಗಿನ ನಮ್ಮ ಮನೆ ಹತ್ತಿರ ಇವರು ಓದುತಿದ್ದ ಆರೇಲ್ತಡಿ ಕಿರಿಯ ಪ್ರಾಥಮಿಕ ಶಾಲೆಯ ಆಗಿನ ಶಿಕ್ಷಕಿ ಆದ ಶ್ರೀಮತಿ ವಿನಯವತಿ ಟೀಚರ್ ಯಕ್ಷಗಾನ ಗುರುಗಳನ್ನು ಅಲ್ಲಿಗೆ ಕರೆಸಿ ಇವರಿಗೆ ಕಲಿಯಲು ಅನುವು ಮಾಡಿಕೊಟ್ಟರು. ಕಲಾಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟವರು ಇವರ ಅತ್ಯಂತ ನೆಚ್ಚಿನ ಶಿಕ್ಷಕಿ ಶ್ರೀಮತಿ ಶೈಲಜಾ, ಈಗ ತೆಕ್ಕಟ್ಟೆ ನಿವಾಸಿ ಆಗಿದ್ದಾರೆ. ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರ ಅರ್ಥಗಾರಿಕೆಯೆ ಇವರಿಗೆ ಅತ್ಯಂತ ಪ್ರೇರಣಾದಾಯಕ ಆಯಿತು. ನಂತರ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ವೇಷದಿಂದ ಪ್ರಭಾವಿತನಾಗಿ ಪೌರಾಣಿಕ ಮೇಳ ಪ್ರವೇಶ ಮಾಡಿದೆ ಎನ್ನುತ್ತಾರೆ ಪ್ರಸಾದ್ ಸವಣೂರು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಪುಸ್ತಕ ದ ನಿರಂತರ ಓದುವಿಕೆ ಹಿರಿಯ ಕಲಾವಿದರಲ್ಲಿ ಪ್ರಸಂಗ ಮಾಹಿತಿ ಕೇಳಿಕೊಳ್ಳುತ್ತೇನೆ ಭಾಗವತರ ನಿರ್ದೇಶನದಲ್ಲಿ ಪ್ರಸಂಗದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಸವಣೂರು ಹೇಳುತ್ತಾರೆ.


ತುಳು ಐತಿಹಾಸಿಕ ಪ್ರಸಂಗ ಹಾಗೂ ಪೌರಾಣಿಕ ಎಲ್ಲಾ ಪ್ರಸಂಗಗಳನ್ನು ಇವರ ನೆಚ್ಚಿನ ಪ್ರಸಂಗಗಳು. ವಿಷ್ಣು, ಕೃಷ್ಣ, ಅಯ್ಯಪ್ಪ, ಅರ್ಜುನ, ದೇವೇಂದ್ರ, ಶಶಿಪ್ರಭಾ, ಕರ್ಣ ಇವರ ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನಿ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯುವಕರ ಆಗಮನವೇ ಒಂದು ಸಂತೋಷ ಹಾಗಯೆ ಹಿರಿಯರು ಹಾಕಿಕೊಟ್ಟ ಚೌಕಟ್ಟನ್ನು ಮೀರದೆ ರಂಗಕೊಪ್ಪುವ ಆವಿಷ್ಕಾರ ಒಳ್ಳೆಯದು ಅಜೀರ್ಣ ಆಗುವ ಹಾಗೆ ಬೆಡಾಂಬಿಟ್ಟಿ ವಿಚಾರಗಳ ತುರುಕುವಿಕೆ ಮಾಡಬಾರದು ಎಂದು ಸವಣೂರು ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಉತ್ತಮ ವಿಮರ್ಶಕ ಪ್ರೇಕ್ಷಕರು ಇದ್ದಾರೆ, ಎಷ್ಟೋ ಬಾರಿ ನನಗೆ ಕೆಲವು ವೇಷ ಹೀಗೆ ಮಾಡಿದರೆ ಒಳ್ಳೆಯದು ಅಂತ ಸಲಹೆ ಕೊಟ್ಟ ಅನೇಕ ಮಂದಿ ಹಿತೈಷಿ ಪ್ರೇಕ್ಷಕರು ಇದ್ದಾರೆ ಅವರೆಲ್ಲರಿಗೂ ನಾನು ಚಿರಋಣಿ, ತುಂಬಾ ಧನ್ಯವಾದಗಳು ಅವರಿಗೆ ಒಂದಷ್ಟು ಜನ ಜಾತಿ ವಿಚಾರಗಳನ್ನು ತರುವುದು ಕಲಾವಿದನ ವೈಯಕ್ತಿಕ ತೇಜೋವಧೆ ಮಾಡುವುದು ಮಾಡುವಂತ ಪ್ರೇಕ್ಷಕರು ಇದ್ದಾರೆ ಹಾಗೆ ಮಾಡಬೇಡಿ ಇದೇ ನನ್ನ ಕೋರಿಕೆ, ಕಲಾವಿದನಿಗೆ ಕಲೆ ಜಾತಿ ಅವನ ಪ್ರತಿಭೆಯೇ ಮೌಲ್ಯ ಎಂದು ಸವಣೂರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಹೊಸ ಪಾತ್ರಗಳನ್ನು ಮಾಡಬೇಕು ತಾಳಮದ್ದಳೆ ರಂಗದಲ್ಲಿ ಕಾಣಿಸಬೇಕು ಯಕ್ಷಗಾನ ಕಲೆಗಾಗಿ ಏನಾದರು ನನ್ನಿಂದ ಆಗುವ ಕೊಡುಗೆ ಕೊಡಬೇಕು ಎಂದು ಸವಣೂರು ಹೇಳುತ್ತಾರೆ.


ಕೊಲ್ಲಂಗಾನ (1 ವರುಷ), ತಲಕಳ (1 ವರುಷ), ಬಾಚಕೆರೆ (2 ವರುಷ), ಸುಂಕದಕಟ್ಟೆ (1 ವರುಷ), ಪ್ರಸ್ತುತ ಹನುಮಗಿರಿ ಮೇಳ 4 ವರ್ಷಗಳಿಂದ ತಿರುಗಾಟ ಮಾಡುತ್ತಿದ್ದಾರೆ. ಹವ್ಯಾಸಿಯಾಗಿ ಶಾಲೆ ಹಾಗೂ ಕಾಲೇಜು ದಿನಗಳಲ್ಲಿ ನಿರಂತರ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಸವಣೂರು.


ಒಂದು ಪ್ರತಿಭಾ ಪುರಸ್ಕಾರ, ಓಂಕಾರ ಸೇವಾ ಸಮಿತಿ ಆರೆಲ್ತಡಿ ಇವರಿಂದ, ಸವಣೂರು ಯುವಕ ಮಂಡಲದಲ್ಲಿ ಇರುವಾಗ ಮೂರು ಬಾರಿ ರಾಜ್ಯ ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಬಂದಿದೆ ಎಂದು ಸವಣೂರು ಹೇಳುತ್ತಾರೆ. ಓದು, ಬರಹಗಾರಿಕೆ, ಪೌರಾಣಿಕ ನಾಟಕ, ಒಳ್ಳೆಯ ಸಿನಿಮಾ ವೀಕ್ಷಣೆ ಇವರ ಹವ್ಯಾಸಗಳು.


14.06.2020 ರಂದು ಶ್ರೀಮತಿ ಗೀತಾಂಜಲಿ ಅವರನ್ನು ವಿವಾಹವಾಗಿ  ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photos by:  Ranjan holla, Sandeep ballal photography, Chandrika bhat movvar, Vinu Yedapadavu,  Subrahmanya Vattelsu, Yaksha Manchi, Swastik Padyana.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top