ವೇಣೂರು: ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಣಮಟ್ಟದ ಭರವಸೆಕೋಶ, ವಿದ್ಯಾರ್ಥಿಗಳ ಕಲ್ಯಾಣ ಕಚೇರಿ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆ ಮತ್ತು ಸಂದರ್ಭೋಚಿತ ಪತ್ರಿಕಾ ವರದಿ ತಯಾರಿ ಬಗ್ಗೆ ಮಾಹಿತಿ ಸಂವಾದ ಕಾರ್ಯಕ್ರಮವು ಶುಕ್ರವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ| ಟಿ.ಕೆ. ಶರತ್ ಕುಮಾರ್ ಅವರು ಮಾತನಾಡಿ, ಸಮಾಜದಲ್ಲಿನ ಕೊರತೆಗಳನ್ನು, ತಪ್ಪುಗಳನ್ನು ಎತ್ತಿ ತೋರಿಸಿ ನ್ಯಾಯ ಒದಗಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಪತ್ರಕರ್ತರ ಕಾರ್ಯವೈಖರಿ ಎಲ್ಲರ ಬದುಕಿಗೆ ಆದರ್ಶ ಪ್ರಾಯವಾದದ್ದು. ವಿದ್ಯಾರ್ಥಿಗಳು ಪತ್ರಕರ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಹೆಚಿನ ಆಶಕ್ತಿ ತೋರಬೇಕು, ವಿದ್ಯಾರ್ಥಿಗಳು ಸಾಧನೆಗೈದಾಗ, ಸಮಾಜದ ಮುಖ್ಯವಾಹಿನಿಗೆ ಬಂದಾಗ ಅಧ್ಯಾಪಕರಿಗೆ ಸಂತೋಷ ಎಂದರು.
ಪತ್ರಕರ್ತರಾದ ಶಿಬಿ ಧರ್ಮಸ್ಥಳ, ಭುವನೇಶ್ ಗೇರುಕಟ್ಟೆ ಹಾಗೂ ಪದ್ಮನಾಭ ವೇಣೂರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಶುಭ ಸ್ವಾಗತಿಸಿ, ರಶ್ಮಿ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ