ಮಂಗಳೂರು: ಇಲ್ಲಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಮಂಗಳೂರು ಝೋನ್ ಅಂತರ್ ಕಾಲೇಜು ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಒಟ್ಟು 31 ಕಾಲೇಜು ಇದರಲ್ಲಿ ಭಾಗವಹಿಸಿತ್ತು. ಈ ತಂಡವು ಮಾ.7ರಂದು ಮೂಡಬಿದ್ರೆಯ ಯೆನಪೋಯ ಕಾಲೇಜಿನಲ್ಲಿ ನಡೆಯುವ ಅಂತರ್ ವಲಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಅನುಶ್ರೀ (ತೃತೀಯ ಬಿಕಾಂ 'ಸಿ'), ಆಶಿಕಾ (ತೃತೀಯ ಬಿಕಾಂ 'ಸಿ'), ಕೀರ್ತಿ (ತೃತೀಯ ಬಿಎ), ಶ್ರಾವ್ಯ ಬಿ. (ಪ್ರಥಮ ಎಮ್.ಎಸ್.ಸಿ) ಯಶಿತಾ (ತೃತೀಯ ಬಿಕಾಂ 'ಇ') , ನಿಶ್ಮಿತಾ ಭಂಡಾರಿ (ಪ್ರಥಮ ಬಿಎ), ಸಮೀಕ್ಷಾ ಆರ್. ರೈ (ದ್ವಿತೀಯ ಬಿಬಿಎ) ಹಾಗೂ ಪ್ರಕೃತಿ ಎಸ್. ಶೆಟ್ಟಿ (ಪ್ರಥಮ ಬಿಬಿಎ) ತಂಡವನ್ನು ಪ್ರತಿನಿಧಿಸಿದರು. ಆಲ್ ರೌಂಡರ್ ಆಗಿ ಅನುಶ್ರೀ ಹಾಗೂ ಉತ್ತಮ ಹಿಡಿತಗಾರ್ತಿಯಾಗಿ ಯಶಿತಾ ಪ್ರಶಸ್ತಿ ಪಡೆದುಕೊಂಡರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ