ಕೆನರಾ ಕಾಲೇಜು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕೊಡಗಿನ ಗೌರಮ್ಮ ಸಂಸ್ಮರಣೆ

Upayuktha
0



ಮಂಗಳೂರು: ಕೆನರಾ ಕಾಲೇಜು ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಡಗಿನ ಗೌರಮ್ಮ ಸಂಸ್ಕರಣೆ ಹಮ್ಮಿಕೊಳ್ಳಲಾಯಿತು.


ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು "ನಮ್ಮ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವ ನೀಡುತ್ತಿದ್ದ ವಿಚಾರವಿದೆ. ಸುಸ್ಥಿರವಾದ ನಾಳೆಗಳನ್ನು ಕಾಣಬೇಕಾದರೆ ಸಮಾಜದಲ್ಲಿ ಸಮಾನತೆ ಇರಬೇಕು. ಇಂದಿನ ಮಹಿಳೆ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾಳೆ. ಲಿಂಗಸಮಾನತೆಯ ಮಾತಿಗಷ್ಟೇ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ದಿನಾಚರಣೆಯನ್ನು ನಡೆಸುವ ಮೂಲಕ ಯುವಜನತೆಯಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡುವಂತೆ ಮಾಡಬೇಕು" ಎಂದು ಹೇಳಿದರು.


"ಕೊಡಗಿನ ಗೌರಮ್ಮನವರ ಸಣ್ಣಕಥೆಗಳಲ್ಲಿ ಹೆಣ್ಣಿನ ಸೂಕ್ಷ್ಮ ಮನಸ್ಸನ್ನು ತೆರೆದುಕೊಳ್ಳುವಂತಹ ಅಂಶಗಳಿದ್ದು ಇಂದು ಓದಲೇಬೇಕಾದ ಸಾಹಿತ್ಯವಾಗಿ ಉಳಿದುಕೊಂಡಿದೆ" ಎಂದು ನುಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಯು. ಎಸ್, ಕನ್ನಡ ಸಂಘದ ಸಂಚಾಲಕ ಶೈಲಜಾ ಪುದುಕೋಳಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರಾವ್ಯಶ್ರೀ ಪ್ರಾರ್ಥಿಸಿ, ಕೌಸಲ್ಯ ಸ್ವಾಗತಿಸಿದರು. ವೈಷ್ಣವಿ ವಂದಿಸಿ, ರಮಿತಾ ನಿರೂಪಿಸಿದರು. ಸ್ತ್ರೀ ಶಿಕ್ಷಣದ ಮಹತ್ವ, ಲಿಂಗ ತಾರತಮ್ಯವನ್ನು ಬಿಂಬಿಸುವ ಕಿರು ಪ್ರಹಸನವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top